ಬೆಳಗಾವಿ- ಸಕ್ಕರೆ ನಾಡು ಬೆಳಗಾವಿ ಜಿಲ್ಲೆಯಲ್ಲಿ ಸರ್ಕಾರದ ವಿರುದ್ಧ ರೈತರ ಸಮರ ಮುಂದುವರೆದಿದೆ
ರೈತ ಹೋರಾಟಗಾರ ಕುರುಬೂರು ಶಾಂತಕುಮಾರ ರೈತರ ಹೋರಾಟದಲ್ಲಿ ಪಾಲ್ಗೊಂಡು ಇಷ್ಟು ದಿನ ಶಾಂತವಾಗಿದ್ದ ಕುರುಬರ ಶಾಂತಕುಮಾರ್ ಸರ್ಕಾರದ ವಿರುದ್ಧ ಉಗ್ರ ನಿಲುವು ತಾಳಿದ್ದಾರೆ
ಭಾನುವಾರ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ರೈತರ ನಡೆಸುತ್ತಿರುವ ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು ಸೋಮವಾರದಿಂದ ಉಗ್ರವಾದ ಚಳುವಳಿ ಉಂಟಾಗುತ್ತದೆ. ಇದಕ್ಕೆ ಸಂಪೂರ್ಣ ಜವಾಬ್ದಾರಿ ರಾಜ್ಯ ಸರಕಾರವೇ ಹೊಣೆಯಾಗುತ್ತದೆ.
ಕಬ್ಬು ನಿಗದಿ ಪಡಿಸುವ ವಿಚಾರದಲ್ಲಿ ಸಿಎಂ ಸಕ್ಕರೆ ಕಾರ್ಖಾನೆಯವರೊಂದಿಗೆ ಸಭೆ ಕರೆದು ರೈತರಿಗೆ ಕಣ್ಣು ವರೆಸುವ ತಂತ್ರ ಅನುಸರಿಸುತ್ತಿದ್ದಾರೆ.
ಕಳೆದ ಅಧಿವೇಶನದಲ್ಲಿ ಸಿಎಂ ಕುಮಾರಸ್ವಾಮಿ ಅವರು ನಮ್ಮಗೆ ಬೆಂಬಲ ನೀಡಿದ್ದರು. ಆದರೆ ಸರಕಾರದ ಸಿಎಂ ಆಗಿರುವ ಅವರು ರಾಜಕೀಯ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ
ಹಿಂದೆ ಹೇಳಿದ ಮಾತನ್ನು ಕುಮಾರಸ್ವಾಮಿ ನೆನಪಿಸಿಕೊಳ್ಳಬೇಕು. ರಾಜಕೀಯ ನಾಟಕ ಮಾಡುವುದು ಸರಿಯಲ್ಲ. ಕಾನೂನು ಪ್ರಕಾರ ಕ್ರಮ ಕೈಗೊಳ್ಳುವಂತೆ ಹೇಳಿದರೆ ಸಿಎಂ ಕಬ್ಬು ಬೆಳೆಗಾರರು ಹೋರಾಟ ಮಾಡುತ್ತಿಲ್ಲ. ನೀವೇಕೆ ಹೋರಾಟ ಮಾಡುತ್ತಿರಿ ಎಂದು ನ.20 ರಂದು ರೈತರ ಸಭೆಯಲ್ಲಿ ಉಲ್ಲೇಖಿಸಿದ್ದರು.
ನಿನ್ನೆ ಮೌನ್ನೆ ಸಭೆ ನಡೆಸಿದಾಗ ಸಿಎಂ ಹೇಳುತ್ತಾರೆ. ನನಗೆ ಅಧಿಕಾರವಿಲ್ಲ. ಯಾವ ಸಕ್ಕರೆ ಕಾರ್ಖಾನೆಯ ಮೇಲೆ ಕ್ರಮ ಕೈಗೊಳ್ಳುವುದಿಲ್ಲ ಎಂದು ಹೇಳಿರುವುದು ದುರಾದೃಷ್ಟಕರ ಸಂಗತಿ ಎಂದು ಶಾಂತಕುಮಾರ್ ಅಸಮಾಧಾನ ವ್ಯೆಕ್ತಪಡಿಸಿದರು
ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವರ ಒಡೆತನದ ಸಕ್ಕರೆ ಕಾರ್ಖಾನೆ ರೈತರ ಬಾಕಿ ಹಣ ನೀಡಬೇಕಿದೆ. ಜಿಲ್ಲಾಧಿಕಾರಿ ಮೂಲಕ ಸರಕಾರಕ್ಕೆ ತಪ್ಪು ಅಂಕಿ ಅಂಶ ನೀಡುವ ಹುನ್ನಾರ ನಡೆಸಿದ್ದಾರೆ ಎಂದು ಆರೋಪಿಸಿದರು.
619 ಕೋಟಿ ರು.ಬಾಕಿ ಬರಬೇಕಿದೆ. ಬಾಗಲಕೋಟ, ಬೆಳಗಾವಿ ರೈತರು ಮಾತ್ರ ಹೋರಾಟ ಮಾಡುತ್ತಿದ್ದಾರೆ. ಉಳಿದವರು ಯಾಕೆ ಬರುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ರೈತರ ಹಿತ ಕಾಯದ ಕೇಂದ್ರ ಬಿಜೆಪಿ ಸರಕಾರ. ನಾಳೆ ರೈತರಿಗಾಗಿ ಸುವರ್ಣ ವಿಧಾನಸೌಧದಲ್ಲಿ ಕಬ್ಬು ಬೆಳೆಗಾರಿರಿಗೆ ಅನ್ಯಾಯ ಮಾಡಿದ ಬಿಜೆಪಿ ನಮ್ಮ ಪರ ಹೋರಾಟ ಮಾಡಲು ಬಂದಿರುವುದು ವಿಪರ್ಯಾಸದ ಸಂಗತಿ.
ಕಬ್ಬಿಗೆ ಎಕ್ಸಪಿಲ್ಡ್ ದರ ನಿಗದಿ ಮಾಡಬೇಕು. ಕಬ್ಬಿನ ಬಾಕಿ ಬಿಲ್ ನಲ್ಲಿ ರೈತರಿಗೆ ಸಾಕಷ್ಟು ಅನ್ಯಾಯ ಮಾಡುತ್ತಿದ್ದಾರೆ. ಕೇಂದ್ರದ ಸರಕಾರ ರೈತರಿಗೆ ಚಳ್ಳೆ ಹಣ್ಣು ತಿನ್ನಿಸಿದ್ದಾರೆ. ಕಳೆದ ಮೂರು ವರ್ಷದಿಂದ ಎಫ್ ಆರ್ ಪಿ ದರ ಹೆಚ್ಚಿಗೆ ಮಾಡಲಿಲ್ಲ. ಲೋಕಸಭಾ ಚುನಾವಣೆ ಸಮೀಪಿಸುತ್ತಿದ್ದಂತೆ 200 ರು ಹೆಚ್ಚಳ ಮಾಡಿದ್ದಾರೆ.
ಕೇಂದ್ರ ಸರಕಾರ ಸಕ್ಕರೆ ಕಾರ್ಖಾನೆಯ ಮಾಲಿಕರ ಸಲುವಾಗಿ ಎಥಿನಾಲ್ ಮಾಡಲು ಹೋರಟಿದ್ದಾರೆ. ಕಬ್ಬಿನಿಂದ ಉತ್ಪಾದನೆಯಾಗುವ ಎಥಿನಾಲ್ ನೇರವಾಗಿ ಕಬ್ಬು ಬೆಳೆಗಾರ ಖಾತೆಗೆ ಹಾಕಬೇಕು. ಎಂದು ಶಾಂತಕುಮಾರ್ ಒತ್ತಾಯಸಿದರು