Breaking News

ಬೆಳಗಾವಿ ಜಿಲ್ಲೆಯಲ್ಲಿ ಇನ್ನೂ 1715 ಶಂಕಿತರ ರಿಪೋರ್ಟ್ ಬರೋದು ಬಾಕಿ…..

ಬೆಳಗಾವಿ- ಬೆಳಗಾವಿ ಜಿಲ್ಲೆಯಲ್ಲಿ ಕೊರೋನಾ ವೈರಾಣು ವಿನ ತಾಂಡವ ಮುಂದುವರೆದಿದೆ ಬೆಳಗಾವಿ ತಾಲ್ಕೂಕಿನ ಹಿರೇಬಾಗೇವಾಡಿ ಗ್ರಾಮವೊಂದರಲ್ಲಿಯೇ 36 ಸೊಂಕಿತರು ಪತ್ತೆಯಾಗಿದ್ದು ಈ ಮಹಾಮಾರಿ ವೈರಸ್ ಓರ್ವ ವೃದ್ದೆಯನ್ನು ಬಲಿ ಪಡೆದಿದ್ದು ಇದೇ ಗ್ರಾಮದಲ್ಲಿ

ಬೆಳಗಾವಿ ಜಿಲ್ಲೆಯಲ್ಲಿ ಸೊಂಕಿತರ ಸಂಖ್ಯೆ 69 ಕ್ಕೇರಿದೆ ಜಿಲ್ಲೆಯಲ್ಲಿ ಇನ್ನೂ 1715 ಶಂಕಿತರ ರಿಪೋರ್ಟ್ ಬಾಕಿ ಇದ್ದು,ಬೆಳಗಾವಿ ಜಿಲ್ಲೆಯಲ್ಲಿ ಸೊಂಕಿತರ ಸಂಖ್ಯೆ ಇನ್ನೂ ಹೆಚ್ಚಳವಾಗುವ ಲಕ್ಷಣಗಳು ಕಾಣಿಸುತ್ತಿವೆ.

ಬೆಳಗಾವಿ ಜಿಲ್ಲೆಯಲ್ಲಿ 69 ಜನ ಸೊಂಕಿತರ ಪೈಕಿ ಒಟ್ಟು 10 ಜನರು ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ ಆಗಿದ್ದಾರೆ .

ಬೆಳಗಾವಿ ನಗರದಲ್ಲಿ ಕೊರೋನಾ ಶಂಕಿತರ ಗಂಟಲು ದ್ರವ ಪರೀಕ್ಷೆ ಮಾಡುವ ಪ್ರಯೋಗಾಲಯ ಆರಂಭವಾದರೂ ತ್ವರಿತ ಗತಿಯಲ್ಲಿ ರಿಪೋರ್ಟ್ ಬರುತ್ತಿಲ್ಲ,ಹೀಗಾಗಿ ಬೆಳಗಾವಿ ಜಿಲ್ಲಾಡಳಿತ ಇನ್ನೂ 1715 ಶಂಕಿತರ ರಿಪೋರ್ಟ್ ನಿರೀಕ್ಷೆಯಲ್ಲಿದೆ.

Check Also

ವೀರ ಮದಕರಿ ಪುತ್ಥಳಿ ಸ್ಥಾಪನೆ- ಸ್ಥಳ ಪರಿಶೀಲಿಸಿ ವರದಿ ನೀಡಲು ಸೂಚನೆ:

ಪರಿಶಿಷ್ಟರ ದೂರು ನಿವಾರಣೆಗೆ ತ್ವರಿತ ಕ್ರಮ ಕೈಗೊಳ್ಳಲು ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಸೂಚನೆ ಬೆಳಗಾವಿ, -: ಪರಿಶಿಷ್ಟ ಜಾತಿ/ವರ್ಗಗಳ ದೌರ್ಜನ್ಯ …

Leave a Reply

Your email address will not be published. Required fields are marked *