ಬೆಳಗಾವಿ-ಬೆಳಗಾವಿಗೆ ಬಂಪರ್ ಲಾಟರಿ ಯಾಕಂದ್ರೆ ಸುವರ್ಣಸೌಧಕ್ಕೆ ಮತ್ತಷ್ಟು ಕಚೇರಿಗಳನ್ನು ಸ್ಥಳಾಂತರ ಮಾಡುವಂತೆ ಸರ್ಕಾರ ಆದೇಶ ಹೊರಡಿಸಿದೆ.
ಬೆಳಗಾವಿಯ ಸುವರ್ಣ ಸೌಧಕ್ಕೆ ಮಾಹಿತಿ ಆಯೋಗದ ಕಚೇರಿ ಸ್ಥಳಾಂತರ ಮಾಡಿದ ಬೆನ್ನಲ್ಲಿಯೇ ಒಂದು ವಿಭಾಗಮಟ್ಟದ ಕಚೇರಿ ಹಾಗು 23 ಕಚೇರಿಗಳನ್ನು ಸುವರ್ಣಸೌಧಕ್ಕೆ ಸ್ಥಳಾಂತರ ಮಾಡುವಂತೆ ಸರ್ಕಾರ ಆದೇಶ ಹೊರಡಿಸಿದೆ.
ಪ್ರವಾಸೋದ್ಯಮ ಇಲಾಖೆಯ ಕಚೇರಿ ಸೇರಿದಂತೆ ,ಹಿರಿಯ ಭೂ ವಿಜ್ಞಾನ ಸಹಕಾರಿ ಸಂಘಗಳ ಲೆಕ್ಕಪರಿಶೋಧನೆ,ಕೈಮಗ್ಗ ಜವಳಿ,ಜಂಟೀ ನಿರ್ದೇಶಕರ ಕಚೇರಿ ವಿವಿಧ ನಿಗಮಗಳ ಕಚೇರಿ ಸೇರಿದಂತೆ ಒಟ್ಟು 23 ಕಚೇರಿ ಹಾಗು,ಕರ್ನಾಟಕ ನೀರಾವರಿ ನಿಗಮದ ಧಾರವಾಡ ವಿಭಾಗಿಯ ಕಚೇರಿಯನ್ನು ತಕ್ಷಣ ಸುವರ್ಣ ವಿಧಾನಸೌಧಕ್ಕೆ ಸ್ಥಳಾಂತರ ಮಾಡುವಂತೆ ಸರ್ಕಾರ ಆದೇಶ ಹೊರಡಿಸಿದೆ
ಬೆಳಗಾವಿ ಸುದ್ದಿ | Belagavi Suddi | Belagavi News ಸಮಸ್ಯಗೆ ಸ್ಪಂದನೆ