ಬೆಳಗಾವಿ- ಕನ್ನಡ ಚಿತ್ರ ನಟ ಸುದೀಪರನ್ನು ನಾವು ನೋಡಲೇ ಬೇಕು ನೋಡಲು ಸಿಗದಿದ್ದರೇ ಸಾಯಲೇ ಬೇಕು ಎಂದು ತಿರ್ಮಾನಿಸಿ ಮುತ್ಯಾನಟ್ಟಿ ಗ್ರಾಮದಿಂದ ಬೆಳಗಾವಿಗೆ ಬಂದಿದ್ದ ಸುದೀಪ ಹುಚ್ಚಾಭಿಮಾನಿಗಳು ಮೈ ಮೇಲೆ ಪೆಟ್ರೋಲ್ ಸುರಿದುಕೊಂಡು ಆತ್ಮಹತ್ಯೆ ಮಾಡಿಕೊಳ್ಳುವ ವಿಫಲ ಯತ್ನ ನಡೆಸಿದರು
ನಗರದ ಕನ್ನಡ ಸಾಹಿತ್ಯ ಭವನದ ಆರಣದಲ್ಲಿ ಹುಚ್ಚಾಟ ನಡೆಸಿದ ಹುಚ್ಚಾಭಿಮಾನಿಗಳನ್ನು ಪೋಲೀಸರು ವಶಕ್ಕೆ,ಪಡೆದರು ಸಚೀನ ಪಾಟೀಲ, ಪ್ರವೀಣ ಪಾಟೀಲ ಇಬ್ಬರನ್ನು ವಶಕ್ಕೆ ಪಡೆಯಲಾಗಿದೆ
ನಟ ಸುದೀಪ ಭೇಟಿ ಮಾಡಬೇಕು ಇಲ್ಲವಾದ್ರೆ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬಂದಿದ್ದ ಯುವಕರು..
ಬೆಳಗಾವಿ ತಾಲೂಕಿನ ಭೂತರಾಮಟ್ಟಿ ಗ್ರಾಮದವರು
ಆತ್ಮಹತ್ಯೆ ಮಾಡಲು ಪೆಟ್ರೋಲ್ ತೆಗೆದುಕೊಂಡು ಬಂದಿದ್ದ ಯುವಕರು.. ಆತ್ಮ ಹತ್ಯೆ ಮಾಡಿಕೊಳ್ಳಲು ಯತ್ನಿಸಿದಾಗ ಅಭಿಮಾನಿಗಳ ರಂಪಾಟ ನೋಡಿ ಪೋಲೀಸರು ತಕ್ಷಣ ಮದ್ಯಪ್ರವೇಶಿಸಿ ಹುಚ್ಚಾಟಕ್ಕೆ ಬ್ರೆಕ್ ಹಾಕಿದರು
ಡಿಸಿಪಿ ಜಿ.ರಾಧಿಕಾ ಯುವಕರ ವಿಚಾರಣೆ..ನಡೆಸಿದರು
ಯುವಕರನ್ನ ಸೂಕ್ತ ಸಮಾಲೋಚನೆ ಒಳಪಡಿಸುವಂತೆ ಅಧಿನ ಅಧಿಕಾರಿಗಳಿಗೆ ಸೂಚನೆ..ನೀಡಿದರು
ಬೆಳಗಾವಿ ಸುದ್ದಿ | Belagavi Suddi | Belagavi News ಸಮಸ್ಯಗೆ ಸ್ಪಂದನೆ