Breaking News

ತೈಲ ಕಂಪನಿಯ ಬಲೆಗೆ ಪೆಟ್ರೋಲ್ ಕಳ್ಳರು

 

ಬೆಳಗಾವಿಗೆ- ಬೆಳಗಾವಿಯಲ್ಲಿ ತೈಲ ಮಾಫಿಯಾ ಮತ್ತೆ ತಲೆ‌ ಎತ್ತಿದೆ. ಭಾರತ್ ಪೆಟ್ರೋಲಿಯಂ ಕಂಪನಿಗೆ ಸೇರಿದ
ಜಾಗೃತ ದಳದ ಅಧಿಕಾರಿಗಳು ಅಕ್ರಮವಾಗಿ ತೈಲ ಕದಿಯುತ್ತಿದ ೧೦ ಟ್ಯಾಂಕರ್ ಗಳು ಹಾಗೂ ಚಾಲಕರನ್ನ
ವಶಕ್ಕೆ‌ ಪಡೆದಿದ್ದಾರೆ. ಬಿಪಿಸಿಎಲ್ ನ ಡೀಪೋಗಳಿಂದ, ಬಂಕ್ ಗಳಿಗೆ ತೈಲ‌ಸಾಗಿಸುವ ಗುತ್ತಿಗೆ ಪಡದ ಅಧಿಕೃತ
ಟ್ರಾನ್ಸಪೋಟ್ ಗುತ್ತಿಗೆದಾರರೇ ಈ ಅಕ್ರಮ ದಂಧೆಯಲ್ಲಿ ಭಾಗಿಯಾಗಿರುವ ಬಯಲಾಗಿದೆ. ಹುಬ್ಬಳ್ಳಿ ‌ಮೂಲದ‌
ಹನುಮಂತ ಗೌಡ್ರ, ಹಾಗೂ ಆತನ ‌ಮಕ್ಕಳಾದ ಸಿದ್ಧು ಎಚ್.ಗೌಡರ್, ಹಾಗೂ ರಾಘು ಈ ಅಕ್ರಮ ದಂಧೆಯಲ್ಲಿ‌
ಭಾಗಿಯಾಗಿರುವುದು ಬಯಲಾಗಿದೆ. ಬೆಳಗಾವಿಯ ಬಿಪಿಸಿಎಲ್ ನ ದೆಸೂರು ಡೀಪೋದಿಂದ ಪೆಟ್ರೋಲ್
ತುಂಬಿಕೊಂಡು, ಉತ್ತರ ಕನಾ೯ಟಕದ ಹಲವು ಬ್ಯಾಂಕ್ ಗಳಿಗೆ ಸಾಗಿಸುವ ಗುತ್ತಿಗೆ ಪಡೆದಿದ್ದ ಇವರು,
ಟ್ಯಾಂಕರ್ ನಲ್ಲಿಯೆ ಕಳ್ಳ ಮಾಗ೯ ನಿಮಿ೯ಸಿ ಪ್ರತಿ ಟ್ಯಾಂಕರ್ ನಿಂದ ೨೫೦ ಲೀಟರ್ ಗೂ ಅಧಿಕ ತೈಲವನ್ನ
ಕದಿಯುತ್ತಿದ್ದರು ಎನ್ನಲಾಗಿದೆ. ಮಂಗಳೂರು, ಬೆಳಗಾವಿ ಹಾಗೂ ಹುಬ್ಬಳ್ಳಿಯ ತೈಲ ಸಂಗ್ರಹಗಾರದಿಂದ ತೈಲ
ತುಂಬಿ ಕೊಂಡು ದಾರಿ ಮಧ್ಯೆ ಟ್ಯಾಂಕರ್‌ ನಿಲ್ಲಿಸಿ, ನಕಲಿ‌ಕೀ ಬಳಸಿ ತೈಲ‌ಕದಿಯುತ್ತಿದ್ದರು ಎನ್ನಲಾಗಿದೆ. ಈ
ಕಳ್ಳದಂಧೆಯಲ್ಲಿ ಬಿಪಿಸಿಎಲ್ ಕೆಲ ಅಧಿಕಾರಿಗಳು ಭಾಗಿಯಾಗಿದ್ದು, ಅವರ ಸಹಕಾರದಿಂದ ಹಲವು ವಷ೯ದಿಂದ
ಈ ಕಳ್ಳ ದಂಧೆಯನ್ನ ಅಪ್ಪ‌ಮಕ್ಕಳು ನಡೆಸುತ್ತಿದ್ದರು ಎನ್ನಲಾಗಿದೆ. ಕಳೆದ ವಷ೯ ಹುಬ್ಬಳ್ಳಿಯ ತೈಲ
ಕದಿಯುವಾಗ ಸಿಕ್ಕಿ‌ಬಿದಿದ್ದಕ್ಕೆ ಹನುಮಂತ ಗೌಡರ್ ಹೆಸರಲ್ಲಿದ್ದ ಗುತ್ತಿಗೆಯನ್ನ ರದ್ದು ಮಾಡಲಾಗಿತ್ತು.ಇದಾದ
ಬಳಿಕ‌ ಹನುಮಂತ ತನ್ನ‌ಮಕ್ಕಳ ಹೆಸರಲ್ಲಿ ಗುತ್ತಿಗೆ ಪಡೆದು ಪೆಟ್ರೋಲ್ ಕಳ್ಳತನದ ದಂಧೆಗೆ ಇಳಿದಿದ್ದ
ಎನ್ನಲಾಗಿದೆ.
ಇದರಲ್ಲಿ ಈಗಾಗಲೆ ಕka 22c 2564, ka 25 AA 2169,
ka 25 D 9849, ka25 C 5677, KA 25 D4392
ನಂಬರಿನ ಟ್ಯಾಂಕರಗಳನ್ನು ಬೆಳಗಾವಿಯ ಭಾರತ್ ಪೇಟ್ರೋಲ್ ಸಂಗ್ರಾಹಾದಲ್ಲಿ ವಿಸಿಲೇನ್ಸ್ ಕಮಿಟಿಯು
ದಾಳಿ ಮಾಡಿ ಬಿ.ಪಿ.ಸಿ.ಎಲ್ ಕಂಪನಿಗೆ ಹಾಂಡೊವರ್ ಮಾಡಿದ್ದರೂ ಕಂಪನಿ ಈ 5 ದು ಜನ ಕಳ್ಳರ ವಿರುದ್ದ
ಯಾವದೆ ಪ್ರಕರಣ ದಾಖಲಿಸದೆ ಇದ್ದಿದ್ದು ಕಂಪನಿಯ ಅಧಿಕಾರಿಗಳೇ ಇದರಲ್ಲಿ ನೇರವಾಗಿ ಬಾಗಿಯಾಗಿದ್ದಾರೆ
ಎಂಬು ಅನುಮಾನ ಬರುತ್ತಿದ್ದು. ಪೇಟ್ರೋಲ್ ಬಂಕ ಮಾಲಿಕರು ಕಂಪನಿವಿರುದ್ದ ಹರಿಹಾಯುತ್ತಿದ್ದಾರೆ.

Check Also

ನಗರದ ಹೊರವಲಯದ ಮನೆಯಲ್ಲಿ ಕೊಳೆತ ಎರಡು ಶವ ಪತ್ತೆ….

ಅಥಣಿ- ಮನೆಯಲ್ಲಿಯೇ ಕೊಳೆತ ಸ್ಥಿತಿಯಲ್ಲಿ ದಂಪತಿಗಳ ಶವಗಳು ಪತ್ತೆಯಾಗಿವೆ.ಅಥಣಿ ಪಟ್ಟಣದ ಮದಭಾವಿ ರಸ್ತೆ ಚೌವ್ಹಾಣ್ ತೋಟದಲ್ಲಿ ಜೋಡಿ ಶವಗಳು ಪತ್ತೆಯಾಗಿವೆ. …

Leave a Reply

Your email address will not be published. Required fields are marked *