ಬೆಳಗಾವಿ- ಕಳೆದ ಐದು ವರ್ಷಗಳ ಹಿಂದೆ ಸಿದ್ರಾಮಯ್ಯನವರ ಸರ್ಕಾರ ಅಸ್ತಿತ್ವಕ್ಕೆ ಬಂದ ಮೊದಲ ವರ್ಷದ ಬಜೆಟ್ ನಲ್ಲಿ ಬೆಳಗಾವಿಗೆ ಘೋಷಣೆಯಾಗಿದ್ದ ಸೂಪರ್ ಮಲ್ಟೀ ಸ್ಪೇಶ್ಯಾಲಿಟಿ ಆಸ್ಪತ್ರೆ ನಿರ್ಮಾಣಕ್ಕೆ ಕಾಲ ಕೂಡಿ ಬಂದಿದ್ದು ಆಸ್ಪತ್ರೆ ನಿರ್ಮಾಣಕ್ಕೆ ವೈದ್ಯಕೀಯ ಶಿಕ್ಷಣ ಸಚಿವ ಡಿಕೆ ಶಿವಕುಮಾರ್ ಮುಂದಿನ ವಾರ ಶಂಕು ಸ್ಥಾಪನೆ ನೆರವೇರಿಸಲಿದ್ದಾರೆ
ಬೆಳಗಾವಿಯಲ್ಲಿ ಸೂಪರ್ ಮಲ್ಟೀ ಸ್ಪೇಶ್ಯಾಲಿಟಿ ಆಸ್ಪತ್ರೆ ನಿರ್ಮಾಣಕ್ಕೆ ಸರ್ಕಾರ 180 ಕೋಟಿ ರೂ ಮಂಜೂರು ಮಾಡಿದ್ದು ಆಸ್ಪತ್ರೆ ನಿರ್ಮಾಣಕ್ಕೆ ಜಿಲ್ಲಾ ಆಸ್ಪತ್ರೆಯ ಬದಿಯಲ್ಲಿರುವ ಹಳೆಯ ಕಟ್ಟಡಗಳನ್ನು ನೆಲಸಮ ಮಾಡುವ ಕಾರ್ಯ ಭರದಿಂದ ಸಾಗಿದೆ
ಸೂಪರ್ ಮಲ್ಟೀ ಸ್ಪೇಶ್ಯಾಲಿಟಿ ಆಸ್ಪತ್ರೆ ಆರು ಅಂತಸ್ತಿನ.200 ಹಾಸಿಗೆ,90 ಹಾಸಿಗೆಯ ಚಿಕ್ಕ ಮಕ್ಕಳ ವಾರ್ಡ,ಕಾರ್ಡಿಯಾಲಾಜಿ, ನ್ಯುರೋಲಾಜಿ, ಸೇರಿದಂತೆ ಅನೇಕ ವೈದ್ಯಕೀಯ ವಿಭಾಗಗಳನ್ನು ಹಲವಾರು ರೀತಿಯ ಹೈಟೆಕ್ ಸವಲತ್ತುಗಳನ್ನು ಈ ಆಸ್ಪತ್ರೆ ಹೊಂದಲಿದೆ
ಮುಂದಿನವಾರ ವೈದ್ಯಕೀಯ ಶಿಕ್ಷಣ ಸಚಿವ ಡಿಕೆ ಶಿವಕುಮಾರ್ ,ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ ಅವರು ಶಂಕು ಸ್ಥಾಪನೆ ನೆರವೇರಿಸಲಿದ್ದು ಬೆಳಗಾವಿ ಜಿಲ್ಲೆಯ ಶಾಸಕರು ವಿಧಾನ ಪರಿಷತ್ತಿನ ಸದಸ್ಯರು ಶಂಕು ಸ್ಥಾಪನೆ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಎಂದು ಭೀಮ್ಸ ನಿರ್ದೇಶಕ ಕಳಸದ ತಿಳಿಸಿದ್ದಾರೆ