Breaking News

ದೇವಿಯ ಆಭರಣ..ಚರ್ಚಿನ ದೇಣಿಗೆ ಪಟ್ಟೆಗೆಯ ಹಣ ದೋಚಿದ ಕಳ್ಳರು

ಬೆಳಗಾವಿ-ದೇವಸ್ಥಾನದ ಬೀಗ ಮುರಿದು ದೇವಿಯ ಆಭರಣ ಮತ್ತು ಬೆಳ್ಳಿಯ ಕೀರೀಟ ದೋಚಿದ ಘಟನೆ

ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನ ನೇಗಿನಹಾಳ ಗ್ರಾಮದಲ್ಲಿ ನಡೆದಿದೆ

ಸರ್ಕಾರಿ ಪ್ರಾಥಮಿಕ ಶಾಲೆ ಹಿಂದುಗಡೆ ಇರುವ ಬನಶಂಕರಿ ದೇವಸ್ಥಾನದಲ್ಲಿ ಕಳ್ಳತನ ನಡೆದಿದ್ದು ತಡರಾತ್ರಿ ದೇವಸ್ಥಾನದ ಬೀಗ ಒಡೆದು ಚಿನ್ನಾಭರಣ ದೋಚಲಾಗಿದೆ

ಬನಶಂಕರಿ ದೇವಿ ಮೂರ್ತಿಯ ಚಿನ್ನದ ಮಂಗಲ ಸೂತ್ರ, ಕಿವಿಯೊಲೆ, ಮೂಗುತಿ, ಬೆಳ್ಳಿ ಕೀರಿಟ ಸೇರಿದಂತೆ
40ಗ್ರಾಂ ಚಿನ್ನ, 500ಗ್ರಾಂ ಬೆಳ್ಳಿಯ ಒಡೆವೆಗಳನ್ನು ಕಳ್ಳತನ ಮಾಡಲಾಗಿದೆ

ಕಳ್ಳತನವಾದ ಬಳಿಕವೂ ದೇವಿಗೆ ಪೂಜೆಗೈದಿರುವ ಪೂಜಾರಿಯ ನಡೆ ಗ್ರಾಮಸ್ಥರಲ್ಲಿ ಅನುಮಾನ ಮೂಡಿಸಿದೆ ಬೈಲಹೊಂಗಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ

ಈ ಘಟನೆಯ ಜೊತೆಗೆ
ಧೂಪದಾಳ ಗ್ರಾಮದ ಕೇಂದ್ರ ಮೆಥೋಡಿಸ್ಟ್ ಚರ್ಚನಲ್ಲಿ ಕಳವು ಮಾಡಲಾಗಿದೆ ಬೆಳಗಾವಿ ಜಿಲ್ಲೆಯ ಗೋಕಾಕ ತಾಲೂಕಿನ ದುಪದಾಳ ಗ್ರಾಮದಲ್ಲಿ ಘಟನೆ ನಡೆದಿದೆ

ಮದ್ಯರಾತ್ರಿ ಯಾರು ಇಲ್ಲದ ಸಮಯದಲ್ಲಿ ಕೈ ಚಳ್ಳಕ ತೋರಿಸಿರುವ ಕಳ್ಳರು,ಚರ್ಚಿನ ಬಾಗಿಲು ,ಕಿಟಕಿಗಳನ್ನು ಮುರಿದು ಕಳ್ಳತನ ಮಾಡಿದ್ದಾರೆ
ಚರ್ಚಿನಲ್ಲಿದ್ದ ಕಾಣಿಕೆ ಪೆಟ್ಟಿಗೆಯಲ್ಲಿನ ಹಣ ಮತ್ತು ಹಲವು ಬೆಲೆ ಬಾಳುವ ಸಾಮಗ್ರಿಗಳ ಕಳವು ಮಾಡಲಾಗಿದೆ ಸ್ಥಳಕ್ಕೆ ಆಗಮಿಸಿದ ಘಟಪ್ರಭಾ ಪೋಲಿಸ ಅಧಿಕಾರಿಯಿಂದ ಪರಿಶಿಲನೆ ನಡೆದಿದೆ
ಘಟಪ್ರಭಾ ಪೋಲಿಸ್ ಠಾಣೆಯಲ್ಲಿ ಪ್ರಕಾರಣ ದಾಖಲಾಗಿದೆ

Check Also

ಎರಡು ಗ್ರಾಮಗಳಿಗೆ ದೀಪಾವಳಿ ಗೀಫ್ಟ್ ಕೊಟ್ಟ ಸಾಹುಕಾರ್….!!

ತಿಗಡಿ ಮತ್ತು ಅವರಾದಿ ಗ್ರಾಮಗಳಿಗೆ ದಸರಾ ಹಬ್ಬದ ಗಿಫ್ಟ್ ಕೊಟ್ಟ ಶಾಸಕ ಬಾಲಚಂದ್ರ ಜಾರಕಿಹೊಳಿ ತಿಗಡಿ, ಅವರಾದಿಗೆ ಪದವಿ ಪೂರ್ವ …

Leave a Reply

Your email address will not be published. Required fields are marked *

Sahifa Theme License is not validated, Go to the theme options page to validate the license, You need a single license for each domain name.