ಬೆಳಗಾವಿ-ಪದವಿ ಪೂರ್ವ ಕಾಲೇಜು ಉಪನ್ಯಾಸಕರ ವೇತನ ತಾರತಮ್ಯ ಹಾಗೂ 2ನೇ ವಾರ್ಷಿ ಬಡ್ತಿಯನ್ನು ಶೀಘ್ರದಲ್ಲಿ ಮಂಜೂರು ಮಾಡುವುದು ಸೇರಿದಂತೆ ವಿವಿಧ ಬೇಡಿಕೆಗಳಿಗಾಗಿ ಒತ್ತಾಯಿಸಿ ಕರ್ನಾಟಕ ರಾಜ್ಯ ಪದವಿ ಪೂರ್ವ ಕಾಲೇಜುಗಳ ಪ್ರಾಚಾರ್ಯರ ಸಂಘ ಹಾಗೂ ಪದವಿ ಪೂರ್ವ ಕಾಲೇಜುಗಳ ಉಪನ್ಯಾಸಕರ ಸಂಘ ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು.
ಶನಿವಾರ ನಗರದ ಜಿಲ್ಲಾದಿಕಾರಿ ಆವರಣದಲ್ಲಿ ಸೇರಿದ ಉಪನ್ಯಾಸಕರು ಕಳೆದ 2011 ರಿಂದ ಸತತವಾಗಿ ನ್ಯಾಯುತವಾದ ಬೇಡಿಕೆಗಳನ್ನು ಸರ್ಕಾರದ ಮುಂದೆ ಸಲ್ಲಿಸುತ್ತಾ ಬಂದಿದೆ. ಇದಕ್ಕೆ ಸ್ಫಂದಿಸಿ ಸರ್ಕಾರ ಒಂದು ವಾರ್ಷಿಕ ಬಡ್ತಿಯನ್ನು ನೀಡಿರುವುದು ಸಂತೋಷ. ಅದರಂತೆ ಇನ್ನೊಂದು ಬಡ್ತಿಯನ್ನು ನೀಡಬೇಕು ಎಂದು ಮನವಿಯಲ್ಲಿ ಒತ್ತಾಯಿಸಿದರು.
ಪದವಿ ಪೂರ್ವ ಶಿಕ್ಷಣ ಇಲಾಖೆಯನ್ನು ಸಾರ್ವಜನಿಕ ಶಿಕ್ಷಣ ಇಲಾಖೆಯಲ್ಲಿ ವಿಲೀನಗೊಳಿಸುವ ಪ್ರಕ್ರಿಯೇ ಪ್ರಾರಂಬಿಸಿದ್ದು ಖಂಡನೀಯ. ಇದನ್ನು ಪದಾಧಿಕಾರಿಗಳ ವಿಶ್ವಾಸಕ್ಕೆ ತೆಗೆದುಕೊಂಡು ಅನುಷ್ಠಾನಗೊಳಿಸಬೇಕು. ಗುತ್ತಿಗೆ ಆಧಾರದ ಉಪನ್ಯಾಸಕರ ಕಾಲ್ಪನಿಕ ವೇತನ ಬಡ್ತಿಯ ಸಮಸ್ಯೆಯನ್ನು ಶಾಶ್ವತವಾಗಿ ಬಗೆಹರಿಸಬೇಕು. 350 ಕೋಟಿ ಒದಗಿಸುವ ಮೂಲ ಅನುಧಾನಿತ ಶಿಕ್ಷಕ ಮತ್ತು ಶಿಕ್ಷಕೇತರ ಸಿಬ್ಬಂಧಿಯವರ ವೇತನ ಸಮಸ್ಯೆಯನ್ನು ಬಗೆಹರಿಸಬೇಕು.
ಜ್ಯೋತಿ ಸಂಜೀವಿನಿ ಯೋಜನೆಯನ್ನು ವಿಸ್ತರಿಸಬೇಕು. ಕುಮಾರ ನಾಯ್ಕ ವರದಿ ಪ್ರಕಾರ ಅರೆಕಾಲಿಕ ಉಪನ್ಯಾಸಕರ ಸೆವೆಯನ್ನು 5 ವರ್ಷಗಳ ಮಿತಿಯೊಂದಿಗೆ ಪಿಂಚಣಿ ಮತ್ತು ಇತರ ಸೌಲಭ್ಯಗಳಿಗೆ ವಿಸ್ತಿಸಬೇಕು. ನಾಯಕ ವರದಿ ಅನ್ವಯ ಎಂಪಿಲ್, ಪಿಎಚ್‍ಡಿ, ಉನ್ನತ ವ್ಯಾಸಂಗ ಹೊಂದಿದ ಉಪನ್ಯಾಸಕರಿಗೆ ವಿಶೇಷ ವಾರ್ಷಿಕ ಬಡ್ತಿಯನ್ನು ಮಂಜೂರು ಮಾಡಬೇಕು ಎಂದು ಒತ್ತಾಯಿಸಿದರು.
ರಾಜ್ಯದಲ್ಲಿ ಖಾಲಿ ಇರುವ 426 ಪ್ರಾಶುಪಾಲರ ಹುದ್ದೆಗಳಿಗೆ ತಕ್ಷಣ ಉಪನ್ಯಾಸಕರನ್ನು ಬಡ್ತಿಯ ಮೂಲಕ ತುಂಬಿಕೊಳ್ಳಬೇಕು. ಅಲ್ಲದೇ, ನವೆಂಬರ್ 18 ರಂದು ನಡೆದ ರಾಜ್ಯ ಕಾರ್ಯಕಾರಿಣಿ ಸಭೆಯಲ್ಲಿ ತೆಗೆದುಕೊಂಡ ಬೇಡಿಕೆಗಳನ್ನು ಈಡೇರಿಸಬೇಕು. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಜನೆವರಿ 10 ರಂದು ಬೆಂಗಳೂರಿನ ಮಹಾತ್ಮಾ ಗಾಂದಿ ಪ್ರತಿಮೆ ಎದರು ಮುಷ್ಕರ, ಪ್ರಥಮ ಹಾಗೂ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಕಪ್ಪು ಪಟ್ಟಿ ಧರಿಸಿ ಪ್ರತಿಭಟನೆ ನಡೆಸಲಾಗುವುದು ಅಂತಿಮವಾಗಿ ಇದಕ್ಕೂ ಸರ್ಕಾರ ಬೇಡಿಕೆಗಳನ್ನು ಈಡೇರಿಸದಿದ್ದರೇ ಏಪ್ರೀಲ್‍ನಲ್ಲಿ ನಡೆಯುವ ಪಿಯುಸಿ ಮೌಲ್ಯಮಾಪನ ಬಹಿಷ್ಕಾರ ಅನಿವಾರ್ಯವಾಗಿರುತ್ತದೆ ಎಂದು ಮನವಿಯಲ್ಲಿ ಎಚ್ಚರಿಸಿದ್ದಾರೆ.
ಈ ಸಂದರ್ಭದಲ್ಲಿ ಉಪನ್ಯಾಸಕರ ಸಂಘದ ರಾಜ್ಯ ಉಪಾಧ್ಯಕ್ಷ ಆರ್.ಜಿ. ಮಠ, ಪ್ರಾಚಾರ್ಯರ ಸಂಘದ ಅಧ್ಯಕ್ಷ ಎಸ್.ಬಿ. ದೊಡ್ಡಮನಿ, ಡಿ.ಎಸ್. ಶಿಂದೆ, ಮಧುಸೂದನ ಬಿಳಗಿ, ಎ.ಬಿ. ಉರಕ್ಕನವರ, ವಿ.ಜಿ. ರಜಪೂತ, ಎಂ.ವಿ. ಕೋಲಕಾರ, ಎಂ.ಎ. ಹುಕ್ಕೇರಕರ್ ಸೇರಿದಂತೆ ಪದಾಧಿಕಾರಿಗಳು ಇದ್ದರು.
Check Also
ಜ್ಞಾನೇಶ್ವರ ಮುನಿ ಮಹಾರಾಜರು (86) ವಿಧಿವಶ
ಬೆಳಗಾವಿ -ಯಮ ಸಲ್ಲೇಖನ ವೃತ್ತದ ಮೂಲಕ ಜ್ಞಾನೇಶ್ವರ ಮುನಿ ಮಹಾರಾಜರು (86) ಇಹಲೋಕವನ್ನು ತ್ಯೇಜಿಸಿದ್ದಾರೆ. ಬೈಲಹೊಂಗಲ ತಾಲೂಕಿನ ದೇವಲಾಪುರ ಕ್ಷೇತ್ರದಲ್ಲಿ …