Breaking News

ನಾಡಿನಿಂದ ಕಾಡಿಗೆ ಬಂದ ಕಾಡುಕೋಣ ಅರಣ್ಯ ಇಲಾಖೆಯ ಬಲೆಗೆ.

ಬೆಳಗಾವಿ

ಕಾಡಿನಿಂದ ನಾಡಿಗೆ ಬಂದಿದ್ದ ಕಾಡುಕೋಣವನ್ನು ಅರಣ್ಯ ಇಲಾಖೆಯ ಸಿಬ್ಬಂದಿಗಳು ಹರಸಾಹಸಪಟ್ಟು ಬಲೆಗೆ ಬೀಳಿಸಿ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.
ಕಳೆದ 10 ದಿನಗಳಿಂದ ತಾಲೂಕಿನ ಕೊಳಚಿ, ಘಟಕನೂರ, ಚಿಂಚಖಂಡಿಯಲ್ಲಿ ಕಾಣ ಸಿಕೊಂಡಿದ್ದ ಕಾಡುಕೋಣ ಕಬ್ಬಿನ ಬೆಳೆಗಳಲ್ಲಿ ವಾಸಮಾಡಿತ್ತು. ಆತಂಕಗೊಂಡಿರುವ ಜನರು ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಸುದ್ದಿ ಮುಟ್ಟಿಸಿದರು.
ನಂತರ ಕಾರ್ಯಾಚರಣೆಗೆ ಇಳಿದ ಅರಣ್ಯ ಸಿಬ್ಬಂದಿ ಕೋಣ ಹಿಡಿಯಲು ಪ್ರಯತ್ನಿಸಿದರೂ ಸಿಕ್ಕಿರಲಿಲ್ಲ. ಅರಣ್ಯ ಇಲಾಖೆಯ ಒಬ್ಬ ಸಿಬ್ಬಂದಿಗೆ ಸಣ್ಣಪುಟ್ಟ ಗಾಯವಾಗಿರುವ ಘಟನೆ ಕೂಡಾ ನಡೆದಿತ್ತು.
ಚಿಂಚಖಂಡಿ ಗ್ರಾಮದ ಹೊಲದಲ್ಲಿರುವದನ್ನು ಪತ್ತೆ ಮಾಡಿ ಶುಕ್ರವಾರ ಬೆಳಿಗ್ಗೆ ಅರಣ್ಯ ಇಲಾಖೆಯ ಹೆಚ್ಚಿನ ಸಿಬ್ಬಂದಿಯೊಂದಿಗೆ ಆಗಮಿಸಿ ಪಟ್ಟಣದ ಕುಂಚಿಕೊರಮ ಜನಾಂಗದ ಯುವಕರ ಹಾಗೂ ಗ್ರಾಮಸ್ಥರ ಸಹಕಾರದಿಂದ ಮಿಂಚಿನ ಕಾರ್ಯಾಚರಣೆ ನಡೆಸಿ ಬಲೆಗೆ ಬೀಳಿಸಿದರು. ನಂತರ ಅರವಳಿಕೆ ಚುಚ್ಚುಮದ್ದು ನೀಡಿ ವಾಹನದಲ್ಲಿ ಕೂಡುಹಾಕಿ ಖಾನಾಪೂರ ತಾಲೂಕಿನ ಅರಣ್ಯ ಪ್ರದೇಶಕ್ಕೆ ಸಾಗಿಸಲಾಯಿತು.
ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಎಸ್.ಸಿ.ಪಾಟೀಲ ಹಾಗೂ ವಲಯ ಅರಣ್ಯಾಧಿಕಾರಿ ಆರ್.ಎಸ್.ಉಪ್ಪಾರ ನೇತೃತ್ವದಲ್ಲಿ ಉಪ ವಲಯ ಅರಣ್ಯಾಧಿಕಾರಿಗಳಾದ ಆರ್.ಎಸ್.ಹೊಸಮನಿ, ಪಿ.ಬಿ.ಗೋಕಾಕ, ಎಸ್.ಎಸ್.ಮನಾಯಿಗೋಳ, ವಿ.ಬಿ.ಹಾದಿಮನಿ, ಸಿಬ್ಬಂದಿಗಳಾದ ಡಿ.ಆರ್.ದ್ಯಾಮಣ ್ಣ, ಜಿ.ಎಸ್.ಕಲ್ಯಾಣ , ಎಸ್.ಬಿ.ಪಟ್ಟೇದ, ಆರ್.ಎಸ್.ಹೊಸಕೇರಿ, ಬಿ.ಎಂ.ಕುಂಬಾರ, ಅರವಳಿಕೆ ತಜ್ಞ ಡಾ.ಸವನೂರ ಕಾಡುಕೋಣ ಹಿಡಿಯುವಲ್ಲಿ ಯಶಸ್ವಿಯಾದರು.

ಕಾಡುಕೋಣ ಎಲ್ಲಿಂದ ಬಂದಿದೆ ಎಂಬುದು ತಿಳಿದು ಬಂದಿಲ್ಲ. ಈ ಪ್ರದೇಶಕ್ಕೆ ಬಂದಿರುವ ಸುದ್ದಿ ತಿಳಿದ ಕೂಡಲೆ ಕೋಣವನ್ನು ಹಿಡಿಯಲು ಪ್ರಯತ್ನಿಸಲಾಯಿತು. ಆದರೆ ಕಬ್ಬಿನ ಬೆಳೆ ಇರುವದರಿಂದ ತಪ್ಪಿಸಿಕೊಂಡು ಬೆಳೆಯಲ್ಲಿ ಅಡಗಿಕೊಳ್ಳುತ್ತಿತ್ತು. ಶುಕ್ರವಾರ ಅರಣ್ಯ ಇಲಾಖೆಯ ಸಿಬ್ಬಂದಿ ಹಾಗೂ ಗ್ರಾಮಸ್ಥರು ಹಾಗೂ ಕುಂಚಿಕೊರಮ ಜನಾಂಗದವರ ಸಹಾಯದಿಂದ ಕಾಡುಕೋಣವನ್ನು ಬಲೆಗೆ ಬೀಳಿಸಿಲಾಯಿತು.

ಕಾಡುಕೋಣ ತುಳಿತಕ್ಕೆ ಸ್ವಲ್ಪ ಪ್ರಮಾಣದಲ್ಲಿ ಬೆಳೆ ನಷ್ಟವಾಗಿದ್ದು, ಸರ್ವೇ ಮಾಡಿಸಿ ಸರಕಾರದಿಂದ ಪರಿಹಾರ ಕೊಡಿಸಲು ಪ್ರಾಮಾಣ ಕ ಪ್ರಯತ್ನ ಮಾಡಲಾಗುವುದೆಂದು ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಎಸ್.ಸಿ.ಪಾಟೀಲ ತಿಳಿಸಿದರು.

Check Also

ಬೆಳಗಾವಿಯ ಮಾಸ್ಟರ್ ಮೈಂಡ್..ಲಕ್ಕೀ ಸಿಎಂ…ಆಗಬಹುದಾ…??

ಬೆಳಗಾವಿ-ಬೆಳಗಾವಿ ಜಿಲ್ಲೆಯ ರಾಜಕೀಯ ವಲಯದಲ್ಲಿ ಕೇವಲ ಒಂದೇ ಚರ್ಚೆ ನಡೆಯುತ್ತಿದೆ ಅದೇನಂದ್ರೆ ಸಿದ್ರಾಮಯ್ಯ ಬದಲಾದ್ರೆ ಸತೀಶ್ ಸಾಹುಕಾರ್ ಸಿಎಂ ಆಗ್ತಾರೆ …

Leave a Reply

Your email address will not be published. Required fields are marked *

Sahifa Theme License is not validated, Go to the theme options page to validate the license, You need a single license for each domain name.