ಬೆಳಗಾವಿ- ಕೋವಿಡ್ ಹಿನ್ನೆಲೆ ಬಂದ್ ಆಗಿದ್ದ 4 ಪ್ರಮುಖ ದೇವಸ್ಥಾನಗಳು ಇಂದು ಓಪನ್ ಮಾಡಲು ಬೆಳಗಾವಿ ಜಿಲ್ಲಾಧಿಕಾರಿಗಳು ಆದೇಶ ಹೊರಡಿಸಿದ್ದಾರೆ.
ಆದರೆ,ಸವದತ್ತಿ ರೇಣುಕಾ ಯಲ್ಲಮ್ಮ ದೇವಿ ದೇವಸ್ಥಾನ ಸದ್ಯಕ್ಕೆ ಓಪನ್ ಇಲ್ಲ ಯಲ್ಲಮ್ಮ ದೇವಸ್ಥಾನ ಹೊರತುಪಡಿಸಿ ನಾಲ್ಕು ಪ್ರಮುಖ ದೇವಸ್ಥಾನ ಗಳು ಭಕ್ತರ ದರ್ಶನಕ್ಕೆ ಇಂದಿನಿಂದ ಓಪನ್ ಆಗಲಿವೆ,ಇಂದಿನಿಂದ 4 ದೇವಸ್ಥಾನಗಳಿಗೆ ಭಕ್ತರ ಪ್ರವೇಶಕ್ಕೆ ಷರತ್ತುಬದ್ಧ ಅನುಮತಿ ನೀಡಲಾಗಿದೆ.
ಸವದತ್ತಿಯ ಜೋಗಳಭಾವಿ ಸತ್ಯಮ್ಮದೇವಿ ದೇವಸ್ಥಾನ,ರಾಯಬಾಗ ತಾಲೂಕಿನ ಚಿಂಚಲಿ ಮಾಯಕ್ಕದೇವಿ ದೇವಸ್ಥಾನ,ಹುಕ್ಕೇರಿ ತಾಲೂಕಿನ ಬಡಕುಂದ್ರಿ ಹೊಳೆಯಮ್ಮದೇವಿ ದೇವಸ್ಥಾನ,ಕಾಗವಾಡ ತಾಲೂಕಿನ ಮಂಗಸೂಳಿ ಮಲ್ಲಯ್ಯ ದೇವಸ್ಥಾನ ತೆರೆಯಲು ಬೆಳಗಾವಿ ಜಿಲ್ಲಾಧಿಕಾರಿ ಹಿರೇಮಠ ಅನುಮತಿ ನೀಡಿದ್ದಾರೆ.
ಆದ್ರೆ ಸವದತ್ತಿ ರೇಣುಕಾ ಯಲ್ಲಮ್ಮ ದೇವಿ ದೇವಸ್ಥಾನ ಪ್ರವೇಶಕ್ಕೆ ಅವಕಾಶ ಕೊಟ್ಟಿಲ್ಲ.ಕಳೆದ 18 ತಿಂಗಳಿಂದ ಬಂದ್ ಆಗಿರುವ ರೇಣುಕಾ ಯಲ್ಲಮ್ಮ ದೇವಿ ದೇವಸ್ಥಾನದಲ್ಲಿ ಸದ್ಯಕ್ಕೆ ದರ್ಶನಕ್ಕೆ ಅವಕಾಶ ನೀಡಿಲ್ಲ.
ಜನಸಂದಣಿ ಆಗುವಂತಹ ಉತ್ಸವ, ಜಾತ್ರೆ ಕಾರ್ಯಕ್ರಮ ನಡೆಸದಂತೆ ನಿರ್ಬಂಧ ಹೇರಲಾಗಿದೆಕೋವಿಡ್ ಹಿನ್ನೆಲೆ ಬಂದ್ ಆಗಿದ್ದ ಚಿಂಚಲಿ ಮಾಯಕ್ಕದೇವಿ ದೇಗುಲ ಓಪನ್ ಆಗಿದ್ದುಕಳೆದ 18 ತಿಂಗಳಿಂದ ಬಂದ್ ಆಗಿದ್ದ ಚಿಂಚಲಿ ಮಾಯಕ್ಕ ದೇವಿ ದೇವಸ್ಥಾನ ಇಂದು ಬೆಳಿಗ್ಗೆ ವಿಶೇಷ ಪೂಜೆ ನೆರವೇರಿಸಿ ಓಪನ್ ಮಾಡಲಾಗಿದೆ.ಭಕ್ತಿಭಾವದೊಂದಿಗೆ ದೇವಸ್ಥಾನದ ಬಾಗಿಲು ತೆರೆದ ಆಡಳಿತ ಮಂಡಳಿ,ದರ್ಶನಕ್ಕೆ ಎಲ್ಲ ರೀತಿಯ ಸಿದ್ಧತೆ ಮಾಡಿದೆ.
ಕಳೆದ 18 ತಿಂಗಳಲ್ಲಿ ಕೇವಲ 15 ದಿನ ಓಪನ್ ಆಗಿದ್ದ ದೇವಸ್ಥಾನ ಇಂದು ಮತ್ತೆ ಓಪನ್ ಆಗಿದೆ.ಜನಸಂದಣಿ ಆಗುವಂತಹ ಉತ್ಸವ, ಜಾತ್ರೆ ಕಾರ್ಯಕ್ರಮ ನಡೆಸದಂತೆ ನಿರ್ಬಂಧ ಹೇರಲಾಗಿದೆ.