
ನಿನ್ನೆ ರಾತ್ರಿ ಬೆಳಗಾವಿಯಲ್ಲಿ ಎರಡು ಕೋಮಿನ ಗುಂಪುಗಳ ಮಧ್ಯೆ ನಡೆದ ಗಲಾಟೆ ನಡೆದಿದ್ದು ಬೆಳಗಾವಿ ನಗರ ಬೂದಿ ಮುಚ್ಚಿದ ಕೆಂಡದಂತೆ ಆಗಿದೆ. ಅಯ್ಯಪ್ಪ ಸ್ವಾಮಿ ಪೇಂಡಾಲಕ್ಕೆ ದುಷ್ಕರ್ಮಿಗಳು ಕಲ್ಲು ಒಗೆದ ಹಿನ್ನಲೆ ಬೆಳಗಾವಿ ನಗರ ಹೊತ್ತಿ ಉರಿದಿದೆ. ನಗರದಲ್ಲಿ ರಾತ್ರಿ ಕಲ್ಲು, ಇಟ್ಟಿಗೆ ಮತ್ತು ಸೋಡಾ ಬಾಟಲಿ ತೂರಾಟ ನಡೆದಿದ್ದು 10 ಕ್ಕೂ ಅಧಿಕ ವಾಹನಗಳು ಜಖಂಗೊಂಡಿವೆ. ಘಟನೆಯಲ್ಲಿ ಪೊಲೀಸ್ ಅಧಿಕಾರಿಗಳಿ ಸೇರಂದಂತೆ ೭ ಜನರಿಗೆ ಗಾಯಗಳಾಗಿವೆ. ಮನೆ, ಅಟೋ ಮತ್ತು ಬೈಕ್‌ಗಳಿಗೆ ಬೆಂಕಿ ಹಚ್ಚಿದ ದುಷ್ಕರ್ಮಿಗಳು ನಗರದಲ್ಲಿ ಶಾಂತಿ ಕದಡಿದ್ದು, ಪರಿಸ್ಥಿತಿ ನಿಯಂತ್ರಿಸಲು ಪೊಲೀಸರು ಅಶ್ರುವಾಯು ಪ್ರಯೋಗ ನಡೆಸಿದ್ದಾರೆ.
ಇಷ್ಟು ದಿನ ಬೂದಿ ಮುಚ್ಚಿದ ಕೆಂಡದಂತಿದ್ದ ಬೆಳಗಾವಿಯ ಚವಾಟ ಗಲ್ಲಿ,ದರಬಾರ್ ಗಲ್ಲಿ, ಖಡಕಗಲ್ಲಿ, ಶೆಟ್ಟಿಗಲ್ಲಿ, ಕಂಜರ್ ಗಲ್ಲಿ, ಜಾಲಗಾರ್ ಗಲ್ಲಿ ಸೇರಿದಂತೆ ನಗರದಲ್ಲಿನ ಕೆಲವು ಸೂಕ್ಷ್ಮ ಪ್ರದೇಶಗಳಲ್ಲಿ ರಾತ್ರಿ ಏಕಾಏಕಿ ಎರಡು ಕೋಮಿನ ಗುಂಪುಗಳ ಮಧ್ಯೆ ಕಲ್ಲೂ ತೂರಾಟ ನಡೆದಿದೆ. ಈ ಘರ್ಷಣೆಯಲ್ಲಿ ಕಾರು,ಬೈಕ್, ಆಟೋಸೇರಿದಂತೆ 20 ಕ್ಕೂ ಅಧಿಕ ವಾಹನಗಳು ಜಖಂ ಗೊಂಡಿವೆ. ಇಷ್ಟೇ ಅಲ್ಲದೇ ಕೆಲವು ದುಷ್ಕರ್ಮಿಗಳು ರಸ್ತೆ ಬದಿ ನಿಲ್ಲಿಸಿದ್ದ ಬೈಕ್‌ಗಳಿಗೆ ಬೆಂಕಿ ಹಚ್ಚಿ ಪರಾರಿಯಾಗಿದ್ದಾರೆ. ಘಟನೆ ವೇಳೆ ಬೆಳಗಾವಿಯ ಮಾರ್ಕೆಟ್ ವಿಭಾಗದ ಎಸಿಪಿ ಶಂಕರ್ ಮಾರಿಹಾಳ್, ಸಿಪಿಐ ಪ್ರಶಾಂತ್ ಸೇರಿದಂತೆ ಒಟ್ಟು ಐವರು ಪೊಲೀಸರು ಮತ್ತು ಇಬ್ಬರ ಸಾರ್ವಜನಿಕರಿಗೆ ಗಂಭೀರ ಗಾಯವಾಗಿದ್ದು ಪರಿಸ್ಥಿತಿ ವಿಕೋಪಕ್ಕೆ ತಿರುಗುತ್ತಿದ್ದಂತೆ ಪೋಲಿಸರು ಐದು ಸುತ್ತು ಅಶ್ರುವಾಯು ಸಿಡಿಸಿ, ಲಘು ಲಾಠಿ ಪ್ರಹಾರ ನಡೆಸಿದ್ದಾರೆ. ದುಷ್ಕರ್ಮಿಗಳು ಹಚ್ಚಿದ ಬೆಂಕಿಗೆ ಅಂಗಡಿ ಸೇರಿದಂತೆ ನಾಲ್ಕು ವಾಹನಗಳು ಸುಟ್ಟು ಕರಕಲಾಗಿವೆ. ಇನ್ನು ಅಗ್ನಿ ಶಾಮಕ ದಳದಿಂದ ಬೆಂಕಿ ನಂದಿಸಲಾಗಿದೆ. ಸಧ್ಯ ಗಲಭೆ ನಡೆದ ಪ್ರದೇಶಗಳಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ
ಇನ್ನು ರಾತ್ರಿ ಸುಮಾರು 10-30ಕ್ಕೆ ಏಕಾಏಕಿ ನಡೆದ ಗಲಾಟೆಯಿಂದ ಕುಂದಾನಗರಿಯ ಜನ ಅಕ್ಷರಶಃ ಬೆಚ್ಚಿ ಬಿದ್ದಿದ್ದಾರೆ. ಗಲಾಟೆ ವೇಳೆ ಪರಸ್ಪರ ಗಾಜಿನ ಬಾಟಲಿ ಮತ್ತು ಕಲ್ಲೂ ತೂರಾಟ ನಡೆಸಿದ್ದರಿಂದ ಘಟನಾ ಸ್ಥಳದ ರಸ್ತೆಗಳಲ್ಲಿ ಎಲ್ಲಿ ನೋಡಿದ್ರು ಗಾಜಿನ ಚೂರುಗಳೇ ಕಾಣಸಿಗ್ತಾವೆ. ಇನ್ನು ಗಲಾಟೆಯನ್ನ ನೋಡಿದ್ರೆ ಇದೊಂದು ಪೂರ್ವನಿಯೋಜಿತ ಗಲಾಟೆ ಎನ್ನಲಾಗುತ್ತಿದೆ. ಹೀಗಾಗಿನೆ ಗಲಾಟೆ ವೇಳೆ ಹೆಚ್ಚಿನ ಪ್ರಮಾಣದಲ್ಲಿ ಗಾಜು-ಕಲ್ಲುಗಳನ್ನ ತೂರಲಾಗಿದೆ. ಘಟನೆಗೆ ಸಂಬಂಧಿಸಿದಂತೆ ಮಾದ್ಯಮಗಳಿಗೆ ಪ್ರತಿಕ್ರಿಯೆ ನೀಡಿರುವ ಐಜಿಪಿ ರಾಮಚಂದ್ರರಾವ್,ಸಧ್ಯ ಪರಿಸ್ಥಿತಿ ಹತೋಟಿಯಲ್ಲಿದೆ. ಗಲಾಟೆಗೆ ಕಾರಣ ತಿಳಿದು ಬಂದಿಲ್ಲ. ಎರಡು ಗುಂಪುಗಳ ನಡುವೆ ಕಲ್ಲು ತೂರಾಟ ನಡೆದಿದೆ. ಶೀಘ್ರ ಗಲಾಟೆಗೆ ಕಾರಣರಾದವರನ್ನ ಬಂಧಿಸೋದಾಗಿ ಹೇಳಿದ್ದಾರೆ
ಒಟ್ನಲ್ಲಿ ಬೆಳಗಾವಿಯಲ್ಲಿ ಪರಿಸ್ಥಿತಿ ಬಿಗಡಾಯಿಸಿದ್ದು ಸಾರ್ವಜನಿಕರು ಆತಂಕದಲ್ಲಿ ಬದುಕುವಂತಾಗಿದೆ. ಮೊನ್ನೆ ನಡೆದ ಹಿಂದೂ ಸಂಘಟನೆಗಳ ಪ್ರತಿಭಟನೆ ಹಿನ್ನೆಲೆಯಲ್ಲಿಯೇ ಈ ಗಲಭೆ ನಡೆದಿದೆ ಎನ್ನಲಾಗಿದ್ದು, ಪರಿಸ್ಥಿತಿ ಬೂದಿ ಮುಚ್ಚಿದ ಕೆಂಡದಂತಿದೆ. ಗಲೆಬೆಗೆ ಕಾರಣರಾದ ೧೫ ಕ್ಕೂ ಹೆಚ್ಚು ದುಷ್ಕರ್ಮಿಗಳನ್ನು ಪೊಲೀಸರು ಬಂದಿಸಿದ್ದು ಇನ್ನುಳ್ಳಿದ ದುಷ್ಕರ್ಮಿಗಳಿಗೆ ಪೊಲೀಸರು ಬಲೆ ಬಿಸಿದ್ದಾರೆ.
 ಬೆಳಗಾವಿ ಸುದ್ದಿ | Belagavi Suddi | Belagavi News ಸಮಸ್ಯಗೆ ಸ್ಪಂದನೆ
ಬೆಳಗಾವಿ ಸುದ್ದಿ | Belagavi Suddi | Belagavi News ಸಮಸ್ಯಗೆ ಸ್ಪಂದನೆ
				 
		 
						
					 
						
					 
						
					