
ಬೆಳಗಾವಿ- ವೀರಭದ್ರ ನಗರದ ಸಾಯಿ ಮಂದಿರ ಹತ್ತಿರದಲ್ಲಿ ಕಿಡಗೇಡಿಗಳು ಕಲ್ಲು ತೂರಾಟ ನಡೆಸಿದ ಪರಿಣಾಮ ಹಲಾವರು ಜನ ಗಾಯಗೊಂಡಿದ್ದು ವಾಹನಗಳು ಜಖಂ ಆಗಿರುವ ಘಟನೆ ನಡೆದಿದೆ
ಸಾಯಿ ಮಂದಿರದ ಹತ್ತಿರದಲ್ಲಿ ಮೆರವಣಿಗೆಯ ಮೂಲಕ ಅಲ್ಲಿಯ ಗಣೇಶ ಮೂರ್ತಿಯನ್ನು ಸಾಗಿಸುವ ಸಂಧರ್ಭದಲ್ಲಿ ಕರೆಂಟ್ ಹೋಗಿದೆ ಈ ಸಂಧರ್ಭದಲ್ಲಿ ಕಿಡಗೇಡಿಗಳು ಶಿವಾಜಿ ನಗರ ಮತ್ತು ವೀರಭದ್ರ ನಗರದ ಹಲವು ಕಡೆ ಕಲ್ಲು ತೂರಾಟ ನಡೆಸಿದಾಗ ಜನ ಓಡಾಡಿದ ಪರಿಣಾಮ ಈ ಎರಡೂ ಪ್ರದೇಶಗಳಲ್ಲಿ ತ್ವೇಷಮಯ ವಾತಾವರಣ ನಿರ್ಮಾಣವಾಗಿದೆ
ಕಲ್ಲೂ ತೂರಾಟದಲ್ಲಿ ಹಲವಾರು ಜನ ಗಾಯಗೊಂಡಿದ್ದು ಸಾಯಿ ಮಂದಿರದ ಬಳಿ ಜನ ಜಮಾಯಿಸಿದ್ದು ಪೋಲೀಸ್ ಕಮೀಶ್ನರ್ ರಾಜಪ್ಪ, ಡಿಸಿಪಿ ಸೀಮಾ ಲಾಟ್ಕರ್ ಸ್ಥಳಕ್ಕೆ ದೌಡಾಯಿಸಿ ಪರಿಸ್ಥಿತಿಯನ್ನು ನಿಯಂತ್ರಿಸಿದ್ದಾರೆ
ಶಾಸಕ ಅನೀಲ ಬೆನಕೆ ಕೂಡಾ ಸ್ಥಳಕ್ಕೆ ಭೇಟಿ ನೀಡಿ ಪರಿಸ್ಥಿತಿಯ ಪರಶೀಲನೆ ನಡೆಸಿದ್ದಾರೆ
ಗಲಬೆಯಲ್ಲಿ ಗಾಯಗೊಂಡವರನ್ನು ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ ಘಟನೆಯಲ್ಲಿ ಹಲವಾರು ದ್ವಿಚಕ್ರ ವಾಹನಗಳು ಕಾರುಗಳು ಜಖಂ ಗೊಂಡಿವೆ
ಬೆಳಗಾವಿ ಸುದ್ದಿ | Belagavi Suddi | Belagavi News ಸಮಸ್ಯಗೆ ಸ್ಪಂದನೆ