Breaking News

ದೆಹಲಿಯಲ್ಲಿ ಅಭಯ ಅವಾಜ್ …ದಕ್ಷಿಣ ಕ್ಷೇತ್ರಕ್ಕೆ ಪ್ರಧಾನ ಮಂತ್ರಿ ಅವಾಸ್ ….!!!

ಬೆಳಗಾವಿ- ಬೆಳಗಾವಿ ದಕ್ಷಿಣ ಕ್ಷೇತ್ರದ ಚಿತ್ರಣ ಬದಲಾಗುವ ಸಮಯ ಬಂದಿದೆ ಕ್ಷೇತ್ರದ ಶಾಸಕ ಅಭಯ ಪಾಟೀಲರ ಸತತ ಪ್ರಯತ್ನದ ಫಲವಾಗಿ ಸೂರಿಲ್ಲದ ಬಡ ಕುಟುಂಬಗಳಿಗೆ 500 ಮನೆಗಳು ಮಂಜೂರಾಗಿವೆ

ಪ್ರಧಾನ ಮಂತ್ರಿ ಅವಾಸ್ ಯೋಜನೆಯಡಿಯಲ್ಲಿ ಬೆಳಗಾವಿ ದಕ್ಷಿಣ ಮತಕ್ಷೇತ್ರದ ಸ್ಲಂ ಪ್ರದೇಶದ ಸೂರಿಲ್ಲದ ಬಡ ಕುಟುಂಬಗಳಿಗೆ 500 ಮನೆಗಳು ಮಂಜೂರಾಗಿದ್ದು ತಲಾ ಒಂದು ಮನೆಗೆ 4 ಲಕ್ಷ ರೂ ಅನುದಾನ ನೀಡಲಾಗುತ್ತಿದ್ದು ಮನೆ ಹಂಚಿಕೆಯ ಕಾರ್ಯ ಇಂದಿನಿಂದ ಆರಂಭವಾಗಿದೆ ಎಂದು ಶಾಸಕ ಅಭಯ ಪಾಟೀಲ ತಿಳಿಸಿದ್ದಾರೆ

ಪ್ರಾಥಮಿಕ ಹಂತದಲ್ಲಿ ಸ್ಲಂ ಪ್ರದೇಶದ ಬಡ ಕುಟುಂಬಗಳಿಗೆ 500 ಮನೆಗಳು ಮಂಜೂರಾಗಿವೆ ಶೀಘ್ರದಲ್ಲಿಯೇ ಸ್ಲಂ ಹೊರತು ಪಡಿಸಿ ಉಳಿದ ಕಡೆ ಇರುವ ಸೂರಿಲ್ಲದ ಬಡವರಿಗೆ ಒಂದು ಸಾವಿರ ಮನೆ ಮಂಜೂರು ಮಾಡಿಸುವದು,ನಾಲ್ಕು ವರ್ಷಗಳಲ್ಲಿ ದಕ್ಷಿಣ ಮತಕ್ಷೇತ್ರದಲ್ಲಿ ಸೂರಿಲ್ಲದ ಒಂದು ಬಡ ಕುಟುಂಬ ಉಳಿಯಬಾರು ಎಲ್ಲರಿಗೂ ಸೂರು ಒದಗಿಸಿ ಕೊಡುವ ಸಂಕಲ್ಪ ಮಾಡಲಾಗಿದೆ ಎಂದು ಅಭಯ ಪಾಟೀಲ ಭರವಸೆ ನೀಡಿದ್ದಾರೆ

ಬೆಳಗಾವಿ ದಕ್ಷಿಣ ಮತಕ್ಷೇತ್ರದಲ್ಲಿ ಪೀರನವಾಡಿ ಯಳ್ಳೂರ,ಮಚ್ಛೆ, ಧಾಮಣೆ ಸೇರಿದಂತೆ ಒಟ್ಟು ನಾಲ್ಕು ಗ್ರಾಮ ಪಂಚಾಯತಿ ಗಳು ಬರುತ್ತವೆ ಈ ಗ್ರಾಮಗಳಲ್ಲಿ ಬಹುಗ್ರಾಮ ಕುಡಿಯುವ ನೀರಿನ ಯೋಜನೆ ರೂಪಿಸಲಾಗಿದೆ ಮಲಪ್ರಭಾ ನದಿಯಿಂದ ಈ ಯೋಜನೆಗೆ ನೀರು ಪೂರೈಸಲು ಅನುಮೋದನೆ ನೀಡುವಂತೆ ಕರ್ನಾಟಕ ನೀರಾವರಿ ನಿಗಮಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಮುಂದಿನ ಬೋರ್ಡ್ ಮೀಟಿಂಗ್ ದಲ್ಲಿ ಈ ಯೋಜನೆಗೆ ಮಂಜೂರಾತಿ ನೀಡುವದಾಗಿ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳು ಭರವಸೆ ನೀಡಿದ್ದಾರೆ ಎಂದು ಶಾಸಕ ಅಭಯ ಪಾಟೀಲ ತಿಳಿಸಿದ್ದಾರೆ

ಸದ್ಯಕ್ಕೆ ಮಳೆಗಾಲ ಮುಗಿದಿದ್ದು ಬೆಳಗಾವಿ ದಕ್ಷಿಣ ಕ್ಷೇತ್ರದ ರಸ್ತೆ ಸುಧಾರಣೆ ,ಚರಂಡಿ ನಿರ್ಮಾಣ ,ಶಾಲೆಗಳ ಅಭಿವೃದ್ಧಿ ಸೇರಿದಂತೆ ಉಳಿದ ಎಲ್ಲ ಅಭಿವೃದ್ಧಿ ಕಾಮಗಾರಿಗಳಿಗೆ ಹಂತ ಹಂತವಾಗಿ ಚಾಲನೆ ನೀಡಲಾಗುವದು ಎಂದು ಅಭಯ ಪಾಟೀಲ ಕ್ಷೇತ್ರದ ಜನರಿಗೆ ಭರವಸೆ ನೀಡಿದ್ದಾರೆ

Check Also

ಮದ್ಯರಾತ್ರಿ ಸಾರಾಯಿ ಹುಡುಕಾಡದಿದ್ದರೆ ಅವರು ಸಿಗುತ್ತಿರಲಿಲ್ಲ……!!

ವೈನ್ ಇಸ್ ಇನ್…ಮೈಂಡ್ ಇಸ್ ಔಟ್ ಆತ ಹೇಳ್ತಾರೆ ಅದು ಸತ್ಯ…. ಆತ ಕಂಠಪೂರ್ತಿ ಕುಡುದಿದ್ದ ಬೆಳಗಾವಿಗೆ ಬರಲು ಬಸ್ …

Leave a Reply

Your email address will not be published. Required fields are marked *