ಬೆಳಗಾವಿ ಜಿಲ್ಲೆಯ 10 ವಿಧ್ಯಾರ್ಥಿಗಳು ಟಾಪರ್…
ಬೆಳಗಾವಿ- ಇವತ್ತು ಎಸ್ ಎಸ್ ಎಲ್ ಸಿ ಫಲಿತಾಂಶ ಪ್ರಕಟವಾಗಿದೆ ರಾಜ್ಯದಲ್ಲಿ 145 ವಿದ್ಯಾರ್ಥಿಗಳು 625 ಅಂಕಗಳಿಗೆ 625 ಸಂಪೂರ್ಣ ಅಂಕಗಳನ್ನು ಪಡೆದು ಟಾಪರ್ ಗಳಾಗಿದ್ದು ಈ 145 ಜನ ವಿಧ್ಯಾರ್ಥಿಗಳಲ್ಲಿ 10 ಜನ ವಿದ್ಯಾರ್ಥಿಗಳು ಬೆಳಗಾವಿ ಜಿಲ್ಲೆಯವರಾಗಿದ್ದಾರೆ.
ಬೆಳಗಾವಿ ಶೈಕ್ಷಣಿಕ ಜಿಲ್ಲೆಯ 6 ,ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯ ನಾಲ್ಕು ಜನ ವಿಧ್ಯಾರ್ಥಿಗಳು ಟಾಪರ್ ಗಳಾಗಿದ್ದು, ಜಿಲ್ಲೆಯ ಒಟ್ಟು ಹತ್ತು ಜನ ವಿಧ್ಯಾರ್ಥಿಗಳು ಸಂಪೂರ್ಣ ಅಂಕಗಳಿಸಿ ಜಿಲ್ಲೆಗೆ ಕೀರ್ತಿ ತಂದಿದ್ದಾರೆ.
ಜಿಲ್ಲೆಯ ಹತ್ತು ಜನ ಟಾಪರ್ ಗಳಲ್ಲಿ ಕನ್ನಡ ಮಾದ್ಯಮದ ಮೂವರು ಇಂಗ್ಲೀಷ್ ಮಾದ್ಯಮದ 7 ಜನ ವಿದ್ಯಾರ್ಥಿಗಳಿದ್ದಾರೆ.
ಯರಗಟ್ಟಿ,ಸತ್ತಿಗೇರಿ ಪಬ್ಲಿಕ್ ಶಾಲೆಯ ಸಹನಾ ರಾಯರ,ಖಾನಾಪೂರ ತಾಲ್ಲೂಕಿನ ನಂದಗಡ ರಾಯಣ್ಣ ಸ್ಮಾರಕ ವಸತಿ ಶಾಲೆಯ ಸ್ವಾತಿ ಸುರೇಶ್ ತೊಲಗಿ,ಚಿಕ್ಕೋಡಿ ತಾಲ್ಲೂಕಿನ ಬೋಜ್ ಗ್ರಾಮದ ನ್ಯು ಸೆಕೆಂಡ್ರಿ ಶಾಲೆಯ ವರ್ಷಾ ಅನೀಲ ಪಾಟೀಲ ಸಾಧನೆ ಮಾಡಿದ್ದಾರೆ. ಈ ಮೂವರು ವಿಧ್ಯಾರ್ಥಿಗಳು ಕನ್ನಡ ಮಾದ್ಯಮದವರು.
ಇಂಗ್ಲೀಷ್ ಮಾದ್ಯಮದಲ್ಲಿ ಚಿಕ್ಕೋಡಿ ತಾಲ್ಲೂಕಿನ ಯಕ್ಸಂಬಾದ ಮುರಾರ್ಜಿ ದೇಸಾಯಿ ವಸತಿ ಶಾಲೆಯ ಶಂಬು ಶಿವಾನಂದ ಖಾನಾಯಿ,ರಾಮದುರ್ಗ ಕ್ಯಾಂಬ್ರಿಡ್ಜ್ ಶಾಲೆಯ ಆದರ್ಶ ಬಸವರಾಜ್ ಹಾಲಬಾಂವಿ,ಬೆಳಗಾವಿ ನಗರದ ಹೇರವಾಡಕರ ಶಾಲೆಯ ಅಮೋಘ ಎನ್ ಕೌಶೀಕ್,ರಾಮದುರ್ಗ ಬಸವೇಶ್ವರ್ ಶಾಲೆಯ ರೋಹಿಣಿ ಗೌಡರ,ಹಾರೂಗೇರಿಯ ಭಗವಾನ್ ಪ್ರೌಡ ಶಾಲೆಯ ಸೃಷ್ಠಿ ಮಹೇಶ್ ಪತ್ತಾರ್.ಅಥಣಿ ವಿದ್ಯಾವರ್ದಕ ಶಾಲೆಯ ವಿವೇಕಾನಂದ ಮಹಾಂತೇಶ್ ಹೊನ್ನಾಳಿ, ಬೆಳಗಾವಿ ನಗರದ ಕೆ.ಎಲ್ ಎಸ್ ಇಂಗ್ಲಿಷ್ ಮಾದ್ಯಮ ಶಾಲೆಯ ವೆಂಕಟೇಶ್ ಯೋಗೇಶ್ ಡೋಂಗ್ರೆ ಸಂಪೂರ್ಣ ಅಂಕ ಗಳಿಸಿ ಜಿಲ್ಲೆಗೆ ಕೀರ್ತಿ ತಂದಿದ್ದಾರೆ.