ಬೆಳಗಾವಿ- ಬೆಳಗಾವಿ ಜಿಲ್ಲೆಯಲ್ಲಿ ನಿರಂತರವಾಗಿ ಮಳೆ ಸುರಿಯುತ್ತಿದೆ. ಪಕ್ಕದ ಮಹಾರಾಷ್ಟ್ರದಲ್ಲಿ ಭಯಂಕರ ಮಳೆ ಸುರಿಯುತ್ತಿರುವ ಹಿನ್ನಲೆಯಲ್ಲಿ ಬೆಳಗಾವಿ ಜಿಲ್ಲೆಯ ನದಿಗಳು ಉಕ್ಕಿ ಹರಿದು ಜಿಲ್ಲೆಯ ಜಲಪಾತಗಳು ಧುಮುಕುತ್ತಿವೆ.
ಬೆಳಗಾವಿ ಜಿಲ್ಲೆಯ ಗೋಕಾಕ್ ಫಾಲ್ಸ್, ಹಿಡಕಲ್ ಡ್ಯಾಂ,ಮತ್ತು ಗೊಡಚಿನಮಲ್ಕಿ ಜಲಪಾತಗಳ ದರ್ಶನ ಮಾಡಲು ಬೆಳಗಾವಿ ಸಾರಿಗೆ ಸಂಸ್ಥೆ ಅತ್ಯಂತ ಕಡಿಮೆ ದರದಲ್ಲಿ ಟೂರ್ ಪ್ಯಾಕೇಜ್ ಘೋಷಣೆ ಮಾಡಿದ್ದು, ವಿಶೇಷವಾದ ಬಸ್ ಸೌಲಭ್ಯ ಕಲ್ಪಿಸಿದೆ.
ಕೇವಲ 200 ₹ ದರದಲ್ಲಿ ಹಿಡಕಲ್ ಡ್ಯಾಂ, ಗೋಕಾಕ್ ಫಾಲ್ಸ್ ದರ್ಶನ ಮಾಡಿಸಲು,ಬೆಳಗಾವಿ ಬಸ್ ನಿಲ್ಧಾಣದಿಂದ ಬೆಳಗ್ಗೆ 9-00 ಗಂಟೆಗೆ ಬಸ್ ಬಿಡಲಿದೆ.ಈ ಬಸ್ ಜಿಲ್ಲೆಯ ಮೂರು ಪ್ರವಾಸಿ ತಾಣಗಳ ದರ್ಶನ ಮಾಡಿಸಿ ಈ ವಿಶೇಷ ಬಸ್ ಸಂಜೆ ಆರು ಘಂಟೆಗೆ ಮತ್ತೆ ಬೆಳಗಾವಿ ನಗರಕ್ಕೆ ತಲುಪಲಿದೆ.
ಈ ಬಸ್ ಎಷ್ಟು ಗಂಟೆಗೆ ಬಿಡುತ್ತದೆ, ಎಲ್ಲಿ ಎಷ್ಟು ಗಂಟೆಗೆ ತಲುಪತ್ತದೆ,ಎಲ್ಲ ಡಿಟೇಲ್ ಮಾಹಿತಿ ಈ ಸುದ್ದಿಯ ಜೊತೆಗೆ ಅಪಲೋಡ್ ಮಾಡಿರುವ ಹ್ಯಾಂಡಬಿಲ್ ನಲ್ಲಿದೆ.
ಈ ಬಸ್ ಸೌಲಭ್ಯ ಪ್ರತಿ ಎರಡನೇಯ ಶನಿವಾರ ಭಾನುವಾರ ಮತ್ತು ನಾಲ್ಕನೇಯ ಶನಿವಾರ ಭಾನುವಾರ,ಹಾಗೂ ಸಾರ್ವತ್ರಿಕ ರಜಾ ದಿನಗಳಲ್ಲಿ ಮಾತ್ರ ಈ ಬಸ್ ಸೌಲಭ್ಯ ಇರುತ್ತದೆ.
ಬೆಳಗಾವಿ ಸುದ್ದಿ | Belagavi Suddi | Belagavi News ಸಮಸ್ಯಗೆ ಸ್ಪಂದನೆ
