ಬೆಳಗಾವಿ-ಬೆಳಗಾವಿಯಿಂದ ಹುಬ್ಬಳ್ಳಿಗೆ ವಂದೇ ಭಾರತ ರೈಲು ಮಂಜುರಾಗಿದೆ ಎನ್ನುವ ಸುದ್ದಿ ಪ್ರಕಟವಾದಾಗ, ಈ ರೈಲು ಹುಬ್ಬಳ್ಳಿಯಿಂದ ಬೆಳಗಾವಿಯವರೆಗೆ ಪ್ರಾಯೋಗಿಕ ಸಂಚಾರ ನಡೆಸಿದಾಗ ಬೆಳಗಾವಿ ಜನರಿಗೆ ಹಂಡೆ ಹಾಲು ಕುಡಿದಷ್ಟು ಖುಷಿಯಾಗಿತ್ತು.ಆದ್ರೆ ಈ ಖುಷಿ ಈಗ ಮರೀಚಿಕೆಯಾಗಿದೆ.
ಡಿಸೆಂಬರ್ 1ರಿಂದ ವಂದೇ ಭಾರತ ರೈಲು ಬೆಳಗಾವಿಯಿಂದ ಬೆಂಗಳೂರಿಗೆ ಸಂಚಾರ ಮಾಡಲಿದೆ ಎನ್ನುವ ಮಾಹಿತಿ ಇತ್ತು,ಆದ್ರೆ ಈ ರೈಲು ಸಂಚಾರಕ್ಕೆ ತಾಂತ್ರಿಕ ತೊಂದರೆ ಇದೆ ಎಂದು ರೈಲ್ವೆ ಬೋರ್ಡ್ ತಗಾದೆ ತೆಗೆದಿದೆ ಎಂದು ತಿಳಿದು ಬಂದಿದೆ.ಈ ಕುರಿತು ಕೇಂದ್ರದ ರೇಲ್ವೆ ಸಚಿವರನ್ನು ಭೇಟಿಯಾಗಲು ಬೆಳಗಾವಿ ಸಂಸದೆ ಮಂಗಲಾ ಅಂಗಡಿ,ಮತ್ತು ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ದೆಹಲಿಗೆ ದೌಡಾಯಿಸಿದ್ದಾರೆ.
ಬೆಳಗಾವಿಯವರೆಗೆ ವಂದೇ ಭಾರತ ರೈಲು ಸಂಚಾರಕ್ಕೆ ತಾಂತ್ರಿಕ ತೊಂದರೆ ಇದೆ,ಈ ರೈಲು ಸಂಚಾರ ಸಾಧ್ಯವಿಲ್ಲ ಎಂದು ರೈಲು ಮಂತ್ರಿಗಳು ಬೆಳಗಾವಿಯ ಸಂಸದರಿಗೆ ಸ್ಪಷ್ಟ ಸಂದೇಶ ರವಾನಿಸಿದ್ದಾರೆ ಎಂದು ಗೊತ್ತಾಗಿದ್ದು ಬೆಳಗಾವಿಗೆ ವಂದೇ ಭಾರತ ರೈಲು ರದ್ದು ಮಾಡಿದ್ರೆ ರೈಲ್ವೆ ಬೋರ್ಡ ಎದುರು ಧರಣಿ ಮಾಡುವದಾಗಿ ಬೆಳಗಾವಿಯ ಸಂಸದರು ಎಚ್ಚರಿಕೆ ನೀಡಿದ್ದಾರೆ ಎಂದು ಹೇಳಲಾಗಿದೆ.
ಈ ಕುರಿತು ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಅವರನ್ನು ವಿಚಾರಿಸಿದಾಗ ವಂದೇ ಭಾರತ ರೈಲು ಸಂಚಾರಕ್ಕೆ ಟೆಕ್ನಿಕಲ್ ಪ್ರಾಬ್ಲಂ ಇದೆ ಎಂದು ರೈಲು ಮಂತ್ರಿಗಳು ಹೇಳಿದ್ದಾರೆ. ಈ ಕುರಿತು ಅವರನ್ನು ಖುದ್ದಾಗಿ ಭೇಟಿಯಾಗಿ ಯಾವ ರೀತಿಯ ಟೆಕ್ನಿಕಲ್ ಪ್ರಾಬ್ಲಂ ಇದೆ ಎನ್ನುವದರ ಬಗ್ಗೆ ಮಾಹಿತಿ ಪಡೆಯುತ್ತೇನೆ.ಆದಷ್ಟು ಬೇಗ ಸಮಸ್ಯೆ ಬಗೆ ಹರಿಸುತ್ತೇನೆ ಎಂದು ಹೇಳಿದ್ದಾರೆ.
ಬೆಳಗಾವಿಗೆ ಇಂಟರ್ ಸಿಟಿ ರೈಲು ಓಡಾಡಬೇಕು ಎನ್ನುವ ಮಹಾದಾಸೆ ಇತ್ತು ಅದು ಈಡೇರಲಿಲ್ಲ ಆದ್ರೆ ಈಗ ವಂದೇ ಭಾರತ ರೈಲು ಸಂಚಾರಕ್ಕೂ ಟೆಕ್ನಿಕಲ್ ಸಮಸ್ಯೆ ಇದೆ ಎಂದು ಪಾಲಿಟೀಕಲ್ ಸಮಸ್ಯೆ ಮಾಡಿಕೊಳ್ಳುತ್ತಿದ್ದು ಬೆಳಗಾವಿಯ ಜನಪ್ರತಿನಿಧಿಗಳು ಯಾವ ರೀತಿಯಲ್ಲಿ, ಕಾಲಮಿತಿಯಲ್ಲಿ ಸಮಸ್ಯೆ ಬಗೆಹರಿಸುತ್ತಾರಾ ? ಕಾದು ನೋಡಬೇಕು.