ಬೆಳಗಾವಿ- ನಗರದ ಗಾಂಧೀನಗರದ ಪರಿಸರದಲ್ಲಿ ನ್ಯಾಶನಲ್ ಹಾಯವೇ ಪಕ್ಕ ನಿರ್ಮಿಸಲಾಗುತ್ತಿರುವ ಹೊಸ ತರಕಾರಿ ಮಾರುಕಟ್ಟೆಯನ್ನು ಆಕ್ರಮವಾಗಿ ನಿರ್ಮಿಸಲಾಗುತ್ತಿದೆ ಎಂದು ಕೆಲವರು ಪಾಲಿಕೆಗೆ ದೂರು ನೀಡಿದ ಹಿನ್ನಲೆಯಲ್ಲಿ ಪಾಲಿಕೆ ಅಧಿಕಾರಿಗಳು ಕಾಮಗಾರಿ ನಿಲ್ಲಿಸಲು ಮುಂದಾಗಿದ್ದಾರೆ
ಮಾರುಕಟ್ಟೆಯನ್ನು ಆಕ್ರಮವಾಗಿ ನಿರ್ಮಿಸಲಾಗುತ್ತದೆ ಎಂದು ಆರೋಪಿಸಿ ಕೆವರು ಹೈಕೋರ್ಟಿನಿಂದ ತಡೆಯಾಜ್ಞೆ ತಂದಿದ್ದರು ಕಾಮಗಾರಿಗೆ ತಡೆಯಾಜ್ಞೆ ಇರುವಾಗ ಕಾಮಗಾರಿ ಮುಂದುವರೆದ ಹಿನ್ನಲೆಯಲ್ಲಿ ಪಾಲಿಕೆ ಅಧಿಕಾರಿಗಳು ಗುರುವಾರ ಸಂಜೆ ಕಾಮಗಾರಿ ನಿಲ್ಲಿಸುವಂತೆ ಸೂಚನೆ ನೀಡಲಿದ್ದಾರೆ
ಗಾಂಧಿನಗರದ ಪಕ್ಕ ಪಾಲಿಕೆಯಿಂದ ಅನುಮತಿ ಪಡೆಯದೇ ಮಾರುಕಟ್ಟೆ ನಿರ್ಮಿಸಲಾಗುತ್ತಿದ್ದು ಇದನ್ನು ಪ್ರಶ್ನಿಸಿ ಕೆಲವು ಸಾಮಾಜಿಕ ಕಾರ್ಯಕರ್ತರು ಹೈಕೋರ್ಟ ಮೊರೆ ಹೋಗಿದ್ದರು
ಪಾಲಿಕೆ ಅಧಿಕಾರಿಗಳು ಕಾಮಗಾರಿ ನಡೆಯುತ್ತಿರುವ ಸ್ಥಳಕ್ಕೆ ದಾಳಿ ಮಾಡಿ ಕಾಮಗಾರಿಯ ಸಲಕರಣೆ ಗಳನ್ನು ತಮ್ಮ ವಶಕ್ಕೆ ಪಡೆಯಲಿದ್ದಾರೆ
ಬೆಳಗಾವಿ ಸುದ್ದಿ | Belagavi Suddi | Belagavi News ಸಮಸ್ಯಗೆ ಸ್ಪಂದನೆ