ಬೆಳಗಾವಿ-ತಲವಾರ,ಬರ್ಚಿ ಹಿಡಿದುಕೊಂಡು ಬಂದ ಕಿಡಗೇಡಿಗಳು ರಾಯಣ್ಣ ಸರ್ಕಲ್ ನಲ್ಲಿದ್ದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನ ಮೂರ್ತಿಯ ಮೇಲೆ ದಾಳಿ ಮಾಡಿ ಮೂರ್ತಿಯ ಮುಖವನ್ನು ಭಗ್ನಗೊಳಿಸಿ,ಖಡ್ಗವನ್ನು ಮುರಿದು ಮೂರ್ತಿಯ ಕೈಯನ್ನು ಧ್ವಂಸ ಮಾಡಿದ ಘಟನೆ ಮದ್ಯರಾತ್ರಿ ಅನಿಗೋಳದಲ್ಲಿ ನಡೆದಿದೆ
ತಡರಾತ್ರಿ ಏಕಾಏಕಿ ದಾಳಿ ಮಾಡಿದ ಕಿಡಗೇಡಿಗಳು ರಾಯಣ್ಣನ ಮೂರ್ತಿಯ ಮೇಲೆ ದಾಳಿ ಮಾಡಿ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನ ಮೂರ್ತಿಯನ್ನು ಸಂಪೂರ್ಣವಾಗಿ ಭಗ್ನಗೊಳಿಸಿದ್ದಾರೆ.
ರಾಯಣ್ಣನ ಮೂರ್ತಿ ಭಗ್ನಗೊಳಿಸಿ ವಿಚಾರವನ್ನು ಪೋಲೀಸರಿಗೆ ತಿಳಿಸುತ್ತಿದ್ದಂತೆಯೇ ಪೋಲೀಸರು ಸ್ಥಳಕ್ಕೆ ದೌಡಾಯಿಸಿ, ಮೂರ್ತಿಯನ್ನೇ ಅಲ್ಲಿಂದ ತೆರವು ಮಾಡಿದ್ದಾರೆ
ರಾಯಣ್ಣನ ಅಭಿಮಾನಿಗಳು ಬೆಳಗಾವಿಯ ಅನಿಗೋಳದಲ್ಲಿ ಸಮಾವೇಶಗೊಳ್ಳುತ್ತಿದ್ದು, ಪರಿಸ್ಥಿತಿ ಉದ್ವಿಗ್ನವಾಗಿದೆ. ಸ್ಥಳಕ್ಕೆ ಪೋಲೀಸ್ ಫೋರ್ಸ್ ದೌಡಾಯಿಸಿದೆ.
 ಬೆಳಗಾವಿ ಸುದ್ದಿ | Belagavi Suddi | Belagavi News ಸಮಸ್ಯಗೆ ಸ್ಪಂದನೆ
ಬೆಳಗಾವಿ ಸುದ್ದಿ | Belagavi Suddi | Belagavi News ಸಮಸ್ಯಗೆ ಸ್ಪಂದನೆ
				 
		 
						
					 
						
					 
						
					




