ಬೆಳಗಾವಿ-ಬೆಳಗಾವಿ ಕುಡಿಯುವ ನೀರು ಸರಬರಾಜು ಮಂಡಳಿ ಈಗ ಕುಡಿಯುವ ನೀರಿನ ಜೊತೆಗೆ ಎರೆಹುಳಗಳನ್ನು ಸರಬರಾಜು ಮಾಡುತ್ತಿದೆ ನಗರದ ವಿಜಯನಗರ ಬಡಾವಣೆಯಲ್ಲಿ ನಲ್ಲಿಗಳಲ್ಲಿ ನೀರಿನ ಜೊತೆಗೆ ಎರೆ ಹುಳಗಳು ಬರುತ್ತಿದ್ದು ಇಲ್ಲಿಯ ಜನ ಹೈರಾಣಾಗಿದ್ದಾರೆ
ಜಲಮಂಡಳಿ ಕುಡಿಯುವ ನೀರಿನ ಗುಣಮಟ್ಟದ ಬಗ್ಗೆ ಯಾವತ್ತೂ ತೆಲೆ ಕೆಡಿಸಿಕೊಂಡಿಲ್ಲ ನೀರು ಕೊಡಿ ಅಂತಾ ಜನ ಕೇಳಿದ್ರೆ ಮಂಡಳಿ ಎರೆ ಹುಳಗಳನ್ನು ಬಿಡುತ್ತಿದ್ದು ಬುಧವಾರ ಬೆಳಿಗ್ಗೆ ವಿಜಯ ನಗರದ ನಿವಾಸಿಗಳಿಗೆ ನಲ್ಲಿ ನೀರಿನ ಜೊತೆಗೆ ಎರೆ ಹುಳಗಳು ಪ್ರತ್ಯಕ್ಷವಾಗಿವೆ
ವಿಜಯನಗರ ಪೈಪ್ ಲೈನ್ ರಸ್ತೆಯಲ್ಲಿರುವ ಮನೆ ಗಳಿಗೆ ಜಲಮಂಡಳಿ ಯವರು ಪೂರೈಕೆ ಮಾಡುತ್ತಿರುವ ಕುಡಿಯುವ ನೀರಿನಲ್ಲಿ ಎರೆಹುಳುಗಳು ಪತ್ತೆಯಾಗಿವೆ. ಎಲ್.ಎಸ್.ಬೀಳಗಿ ಅವರ ಮನೆಯಲ್ಲಿ ನೀರು ತುಂಬುವಾಗ ದೊರೆತ ಎರೆ ಹುಳಗಳು.
Check Also
ಜಿಲ್ಲೆಯಲ್ಲಿ ಸುರಿದ ಮೊದಲ ಮಳೆಗೆ ಮೊದಲ ಬಲಿ…
ಬೆಳಗಾವಿ- ಸವದತ್ತಿಯಲ್ಲಿ ಧಾರಾಕಾರ ಮಳೆ ಸುರಿದಿದ್ದು ಸಿಡಿಲು ಬಡಿದು ಬೈಕ್ ಸವಾರನೊಬ್ಬ ಸ್ಥಳದಲ್ಲಿಯೇ ಮೃತ ಪಟ್ಟಿದ್ದು ಮಹಿಳೆಯೊಬ್ಬಳು ಗಂಭೀರವಾಗಿ ಗಾಯಗೊಂಡ …