Breaking News

ಬೆಳಗಾವಿಗೂ ಬಂತು…ವಾಟರ್ ಪಾರ್ಕ..

ಬೆಳಗಾವಿ- ನಗರಕ್ಕೆ ಹೊಂದಿಕೊಂಡಿರುವ ಪೀರನವಾಡಿ ಗ್ರಾಮದ ಪರಿಸರದಲ್ಲಿ ಜೈನ್ ಕಾಲೇಜಿನ ಹತ್ತಿರ ಆಕರ್ಚಕವಾದ ಅತ್ಯಾಧುನಿಕ ಶೈಲಿಯ ವಾಟರ್ ಪಾರ್ಕ ನಿರ್ಮಾಣಗೊಳ್ಳುತ್ತಿದೆ

ಬೆಳಗಾವಿಯ ಉದ್ಯಮಿಯೊಬ್ಬರು ಈ ಭಾಗದ ಮಕ್ಕಳ ಮನರಂಜನೆಗಾಗಿ ವಾಟರ್ ಪಾರ್ಕ ನಿರ್ಮಿಸುತ್ತಿದ್ದಾರೆ ಯುದ್ದೋಪಾದಿಯಲ್ಲಿ ಪಾರ್ಕ ಕಾಮಗಾರಿ ನಡೆದಿದ್ದು ಎಪ್ರೀಲ್ ತಿಂಗಳ ಅಂತ್ಯದವರೆಗೆ ಬೆಳಗಾವಿ ಚಿಣ್ಣರ ರಂಜನೆಗೆ ವಾಟರ್ ಪಾರ್ಕ ಸಿದ್ಧಗೊಳ್ಳಲಿದೆ

ಬೆಳಗಾವಿಯ ಮಕ್ಕಳು ಕೊಲ್ಹಾಪುರ ಮತ್ತು ಹುಬ್ಬಳ್ಳಿಯ ವಾಟರ್ ಪಾರ್ಕಗಳಿಗೆ ಹೋಗುವದು ತಪ್ಪಿದಂತಾಗಿದೆ ನಗರದಿಂದ ಕೇವಲ ಹತ್ತು ಕೀಮಿ ಅಂತರದಲ್ಲಿ ವಾಟರ್ ಪಾರ್ಕ ಆಗುತ್ತಿರವದು ಸಂತಸದ ಸಂಗತಿಯಾಗಿದೆ

ಬೆಳಗಾವಿ ನಗರ ದಿನಕಳೆದಂತೆ ಫುಲ್ ಹೈಟೆಕ್ ಆಗುತ್ತಿದೆ ದೊಡ್ಡ ದೊಡ್ಡ ಬ್ರಾಂಡೆಡ್ ಮಾರ್ಟಗಳು ಶಾಪಿಂಗ್ ಮಾಲ್ ಗಳು ನಗರಕ್ಕೆ ಲಗ್ಗೆ ಇಟ್ಟಿವೆ ಜೊತೆಗೆ ನಗರದ ಹೃದಯ ಭಾಗದಲ್ಲಿ ಭೀಮ್ಸ ಮೆಡಿಕಲ್ ಕಾಲೇಜಿನ ಬಳಿ ಪಂಚತಾರಾ ಹೊಟೆಲ್ ನಿರ್ಮಾಣವಾಗುತ್ತಿದೆ

ಕುಂದಾನಗರಿ ಮೆಟ್ರೋಪಾಲಿಟನ್ ಸಿಟಿಯಾಗಿ ಬೆಳೆಯುತ್ತಿದೆ ಜೊತೆಗೆ ಸ್ಮಾರ್ಟ್ ರಸ್ತೆಗಳೂ ನಿರ್ಮಾಣಗೊಳ್ಳುತ್ತವೆ ಮೈದಾನಗಳು ಹೊಸ ಸ್ವರೂಪ ಪಡೆದುಕೊಳ್ಳುತ್ತಿವೆ

ಪೀರನವಾಡಿ ಸಮೀಪ ನಿರ್ಮಾಣಗೊಳ್ಳುತ್ತಿರುವ ವಾಟರ್ ಪಾರ್ಕನಲ್ಲಿ ಸ್ವೀಮಿಂಗ್ ಫೂಲ್ ಗಳು ಮಕ್ಕಳ ಆಟಿಕೆ ಐಟಂ ಗಳು ಸೇರಿದಂತೆ ಮಕ್ಕಳ ಮನರಂಜನೆಗಾಗಿ ಬೇಕಾಗುವ ಎಲ್ಲ ವ್ಯೆವಸ್ಥೆಯನ್ನು ವಾಟರ್ ಪಾರ್ಕನಲ್ಲಿ ಮಾಡಲಾಗುತ್ತಿದೆ

Check Also

ಹಾಡು‌ ಹಗಲೇ ಯುವಕನ ಬರ್ಬರ ಹತ್ಯೆ.

ಬೆಳಗಾವಿ- ಹಾಡು‌ ಹಗಲೇ ಯುವಕನ ಬರ್ಬರ ಹತ್ಯೆ ಮಾಡಿದ ಘಟನೆ, ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ಮುರಗೋಡ ಗ್ರಾಮದ ಹೊರ …

Leave a Reply

Your email address will not be published. Required fields are marked *