ಬೆಳಗಾವಿ- ನವ್ಹೆಂಬರ 13 ರಿಂದ ಬೆಳಗಾವಿಯ ಸುವರ್ಣ ವಿಧಾನ ಸೌಧದಲ್ಲಿ ಚಳಿಗಾಲದ ಅಧಿವೇಶನ ನಡೆಯಲಿದ್ದು ಅಧಿವೇಶನದಲ್ಲಿ ಭಾಗವಹಿಸಲು ಬರುವ ಗಣ್ಯರಿಗೆ ಉಟ,ವಸತಿ ಮತ್ತು ವಾಹನದ ವ್ಯೆವಸ್ಥೆ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ಜಿಯಾವುಲ್ಲಾ ತಿಳಿಸಿದ್ದಾರೆ
ಪತ್ರಿಕಾಗೋಷ್ಠಿ ನಡೆಸಿ ಅಧಿವೇಶನದ ಸಿದ್ಧತೆ ಬಗ್ಗೆ ಮಾಹಿತಿ ನೀಡಿದ ಅವರು ಅಧಿವೇಶನದಲ್ಲಿ ಸುಮಾರು ನಾಲ್ಕು ಸಾವಿರ ಅಧಿಕಾರಿಗಳು ಆರು ಸಾವಿರ ಪೋಲೀಸರು ಸೇರಿದಂತೆ ನೂರಾರು ಜನ ಗಣ್ಯರು ಭಾಗವಹಿಸುತ್ತಿದ್ದಾರೆ ಅವರ ವಸತಿ ವ್ಯೆವಸ್ಥೆಗಾಗಿ ಬೆಳಗಾವಿ ಹುಬ್ಬಳ್ಳಿ ಧಾರವಾಡ ನಗರಗಳಲ್ಲಿ 1700 ಕ್ಕೂ ಹೆಚ್ಚು ರೂಮ್ ಗಳನ್ನು ಬುಕ್ ಮಾಡಲಾಗಿದೆ ಅಧಿಕಾರಿಗಳಿಗೆ,ಶಾಸಕರಿಗೆ ಮಂತ್ರಿಗಳಿಗೆ ವಾಹನದ ವ್ಯೆವಸ್ಥೆ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿಗಳು ಹೇಳಿದರು
ಯಾವ ಶಾಸಕರು ಯಾವ ಲಾಡ್ಜನಲ್ಲಿ ಇದ್ದಾರೆ ಯಾವ ಮಂತ್ರಿ ಯಾವ ಹೊಟೇಲ್ ನಲ್ಲಿ ತಂಗಿದ್ದಾರೆ ಎಂಬುದರ ಬಗ್ಗೆ ಸಾರ್ವಜನಿಕರ ಮಾಹಿತಿಗಾಗಿ ಚಿಕ್ಕ ಕೈಪಿಡಿ ಮುದ್ರಿಸಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಜಿಯಾವುಲ್ಲಾ ಮಾಹಿತಿ ನೀಡಿದರು
ವಿವಿಧ ಲಾಡ್ಜಗಳಲ್ಲಿ ತಂಗುವ ಅಧಿಕಾರಿಗಳಿಗೆ ಮತ್ತು ಗಣ್ಯರಿಗೆ ಬೆಳಗಿನ ಉಪಹಾರ ಮತ್ತು ಡಿನ್ನರ್ ವ್ಯೆವಸ್ಥೆ ಮಾಡಲಾಗಿದೆ ಸುವರ್ಣ ಸೌಧದ ಹೊರಾಂಗಣದಲ್ಲಿ ಉಟದ ವ್ಯೆವಸ್ಥೆ ಕೂಡಾ ಮಾಡಲಾಗಿದ್ದು ಸುವರ್ಣ ಸೌಧದ ಒಳಗಡೆ ವಿಧಾನಸೌಧದ ಸಚಿವಾಲಯ ಉಟದ ವ್ಯೆವಸ್ಥೆ ಮಾಡಿದೆ
ಭದ್ರತಾ ವ್ಯೆವಸ್ಥೆ ಸಿಸಿ ಟಿವ್ಹಿ ಮತ್ತು ಬ್ಯಾರಿಕೇಡ್ ಗಾಗಿ ಪೋಲೀಸ್ ಇಲಾಖೆಗೆ ಪ್ರತ್ಯೇಕ ಅನುದಾನ ಬಿಡುಗಡೆ ಮಾಡಲಾಗಿದೆ ಎಂದು ಡಿಸಿ ಜಿಯಾವುಲ್ಲಾ ಮಾಹಿತಿ ನೀಡಿದರು
ಈ ಬಾರಿ ನಗರದ ಸಮೀಪದಲ್ಲಿರುವ ಮ್ಯಾರಿಯೇಟ್ ಹೊಟೇಲ್ ನಲ್ಲಿ 80 ರೂಮ್ ಗಳನ್ನು ಬುಕ್ ಮಾಡಲಾಗಿದ್ದು ಇಲ್ಲಿ ಸರ್ಕಾರದ ಹಿರಿಯ ಸಚಿವರುಗಳಿಗೆ ವಸತಿ ವ್ಯವಸ್ಥೆ ಕಲ್ಪಿಸಲಾಗಿದೆ ಈಫಾ ಮತ್ತು ಸಂಕಮ ಹೊಟೇಲ್ ದಲ್ಲಿ ಶಾಸಕರಿಗೆ ಆದರ್ಶ ಪ್ಯಾಲೇಸ್ ಮತ್ತು ಸನ್ಮಾನ ಹೊಟೇಲ್ ದಲ್ಲಿ ಕಾರ್ಯದರ್ಶಿ ಮತ್ತು ಪ್ರಧಾನ ಕಾರ್ಯದರ್ಶಿಗಳಿಗೆ ವಸತಿ ವ್ಯೆವಸ್ಥೆ ಕಲ್ಪಿಸಲಾಗಿದೆ
ನಗರದ ಸರ್ಕ್ಯುಟ್ ಹೌಸ್ ನಲ್ಲಿ ಮುಖ್ಯಮಂತ್ರಿ,ಲೋಕೋಪಯೋಗಿ ಇಲಾಖೆ ಮಂತ್ರಿ ಇಂಧನ ಮಂತ್ರಿ ಮತ್ತು ಕಂದಾಯ ಇಲಾಖೆಯ ಮಂತ್ರಿ ಮತ್ತು ಮುಖ್ಯಮಂತ್ರಿ ಸಚಿವಾಲಯದ ಅಧಿಕಾರಿಗಳು ತಂಗಲಿದ್ದಾರೆ ಎಂದು ಜಿಲ್ಲಾಧಿಕಾರಿ ಜಿಯಾವುಲ್ಲಾ ಮಾಹಿತಿ ನೀಡಿದರು
ಅಧಿವೇಶನ ವೀಕ್ಷಣೆಗಾಗಿ ಬರುವ ಶಾಲಾ ಮಕ್ಕಳಿಗೆ ಸುವರ್ಣ ಸೌಧದ ದ್ವಾರ ಬಾಗಿಲಿನಿಂದ ಸೌಧದವರೆಗೆ ಬಸ್ ವ್ಯೆವಸ್ಥೆ ಮಾಡಲಾಗುವದು ಎಂದು ಜಿಲ್ಲಾಧಿಕಾರಿಗಳು ಹೇಳಿದರು
ಬೆಳಗಾವಿ ಸುದ್ದಿ | Belagavi Suddi | Belagavi News ಸಮಸ್ಯಗೆ ಸ್ಪಂದನೆ