Breaking News
Home / Breaking News / ಟಿಪ್ಪು ಸುಲ್ತಾನರ ಬಗ್ಗೆ ಅಪಸ್ವರ ಸಹಿಸಲಾಗದು- ರಮೇಶ ಜಾರಕಿಹೊಳಿ

ಟಿಪ್ಪು ಸುಲ್ತಾನರ ಬಗ್ಗೆ ಅಪಸ್ವರ ಸಹಿಸಲಾಗದು- ರಮೇಶ ಜಾರಕಿಹೊಳಿ

November 10, 2017 Breaking News, LOCAL NEWS Leave a comment 2,247 Views

ಬೆಳಗಾವಿ-ಮೈಸೂರ ಹುಲಿ ಟಿಪ್ಪು ಸುಲ್ತಾನ ಅಪ್ಪಟ ಕನ್ನಡ ಪ್ರೇಮಿ ,ಅಪ್ರತಿಮ ಹಿಂದೂ ಪ್ರೇಮಿ ಅವರ ಬಗ್ಗೆ ಅಪಸ್ವರ ಸಹಿಸಲಾಗದು ಟಿಪ್ಪು ಅವರ ಆಡಳಿತ ಸರ್ವ ಧರ್ಮ ಸಮಬಾಳು ಸಮಪಾಲೀನ ಪ್ರತೀಕವಾಗಿದೆ ಕೆಲವರು ಅವರ ಬಗ್ಗೆ ಹಗುರವಾಗಿ ಮಾತನಾಡುವದರಿಂದ ಟಿಪ್ಪು ಅವರ ಇತಿಹಾಸದ ಸತ್ಯಾಂಶ ಅಳಿಸಲಾಗದು ಎಂದು ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ ಹೇಳಿದರು
ಬೆಳಗಾವಿಯ ಕುಮಾರ ಗಂಧರ್ವ ರಂಗಮಂದಿರದಲ್ಲಿ ಹಜರತ್ ಟಿಪ್ಪು ಸುಲ್ತಾನ ಅವರ ಭಾವ ಚಿತ್ರಕ್ಕೆ ಪುಷ್ಪಗೌರವ ಸಲ್ಲಿಸಿ ಮಾತನಾಡಿದ ಅವರು ಎಲ್ಲ ಜಾತಿ ಧರ್ಮಗಳ ಬೀಡಾಗಿರುವ ಭಾರತದಲ್ಲಿ ಮಾತ್ರ ಜಾತ್ಯಾತೀತ ಸಂಸ್ಕಾರ ನೋಡಲು ಸಾಧ್ಯ ಈ ರೀತಿಯ ಸಂಸ್ಕಾರ ಪಾಕಿಸ್ತಾನ,ಅಮೇರಿಕಾ ಸೌಧಿ ಸೇರಿದಂತೆ ಯಾವ ದೇಶದಲ್ಲಿಯೂ ನೋಡಲು ಸಾಧ್ಯ ಆದರೆ ಕೆವರು ಕೋಮು ಭಾವನೆ ಕೆರಳಿಸುವ ಪ್ರಯತ್ನ ಮಾಡುತ್ತಿದ್ದಾರೆ ಅವರಿಗೆ ತಾತ್ಕಾಲಿಕ ಜಯ ಸಿಗಲು ಸಾಧ್ಯ ಶಾಶ್ವತವಾಗಿ ಈ ವಿಷಯದಲ್ಲಿ ಅವರು ಜಯಶಾಲಿ ಆಗಲು ಸಾಧ್ಯವಿಲ್ಲ ಎಂದು ರಮೇಶ ಜಾರಕಿಹೊಳಿ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು
ಟಿಪ್ಪು ಸುಲ್ತಾನ ಅವರ ರಾಜ್ಯಭಾರದಲ್ಲಿ ಮುಖ್ಯ ಸ್ಥಾನದಲ್ಲಿ ಹಿಂದೂಗಳೇ ತುಂಬಿಕೊಂಡಿದ್ದರು ಶೀಥೀಲಗೊಂಡ ಅನೇಕ ಮಂದಿರಗಳನ್ನು ದೇವಾಲಯಗಳನ್ನು ಜಿರ್ಣೋದ್ಧಾರ ಮಾಡಿದ್ದಾರೆ ಬೆಳಗಾವಿಯ ಶಾಸಕರೊಬ್ಬರು ಟಿಪ್ಪು ಸುಲ್ತಾನರ ಬಗ್ಗೆ ಹಗುರವಾಗಿ ಮಾತನಾಡಿದ್ದು ಕ್ಷೇತ್ರದ ಜನ ಅವರಿಗೆ ತಕ್ಕಪಾಠ ಕಲಿಸುತ್ತಾರೆ ಎಂದು ರಮೇಶ ಜಾರಕಿಹೊಳಿ ಶಾಸಕ ಸಂಜಯ ಪಾಟೀಲ ವಿರುದ್ಧ ಕಿಡಿಕಾರಿದರು
ವಿಶೇಷ ಉಪನ್ಯಾಸ ನೀಡಿದ ಮುಫ್ತಿ ಮಂಜೂರ ಆಲಂ ಕೆಲವು ವಿರೋಧಿಗಳು ಇವತ್ತು ಹಜರತ್ ಟಿಪ್ಪು ಸುಲ್ತಾನ ಅವರ ಹೆಸರನ್ನು ಜಪ ಮಾಡುತ್ತಿದ್ದಾರೆ ಟಿಪ್ಪು ಸುಲ್ತಾನ ಎರಡು ನೂರು ವರ್ಷಗಳ ಹಿಂದೆ ಪಂಚಾಯತ್ ವ್ಯೆವಸ್ಥೆಯನ್ನು ತಮ್ಮ ಆಡಳಿತದಲ್ಲಿ ಜಾರಿಗೊಳಿಸುವ ಜೊತೆಗೆ ಮೈಸೂರಿನಲ್ಲಿ ಉತ್ಪಾದನೆಯಾದ ವಸ್ತುಗಳನ್ನು ವಿದೇಶಕ್ಕೆ ರಪ್ತು ಮಾಡಲು ಆಗಲೇ ಟ್ರೇಡ್ ಯುನಿಯನ್‌ ಸ್ಥಾಪಿಸಿದರು
ಟಿಪ್ಪು ಸುಲ್ತಾನರ ಆಡಳಿತದ ದೂರದೃಷ್ಠಿ ಎಲ್ಲರಿಗೂ ಮಾದರಿಯಾಗಿದೆ ಎಂದು ಮುಫ್ತಿ ಮಂಜೂರ ಆಲಂ ಉಪನ್ಯಾಸ ನೀಡಿದರು

About BGAdmin

Check Also

ಪತ್ರಿಕಾ ಛಾಯಾಗ್ರಾಹಕನ ಮನೆ ದೋಚಿದ. ಕಳ್ಳರು

ಬೆಳಗಾವಿ- ಬೆಳಗಾವಿಯ ಖ್ಯಾತ ಪತ್ರಿಕಾ ಛಾಯಾಗ್ರಾಹಕ ಸದಾಶಿವ ಸಂಕಪ್ಪಗೋಳ ಮನೆ ಕಳುವಾಗಿದ್ದು ಸುಮಾರು ಐದು ಲಕ್ಷ ರೂ ಬೆಲೆಬಾಳುವ ಸಾಮುಗ್ರಿಗಳು …

Leave a Reply

Your email address will not be published. Required fields are marked *