ಬೆಳಗಾವಿ- ಬೆಳಗಾವಿಹಾನಗರ ಪಾಲಿಕೆಯ ಮೇಯರ್ ಉಪ ಮೇಯರ್ ಮತ್ತು ಆಯುಕ್ತರಿಗೆ ಹೊಸ ವೇರನಾ ಕಾರು ಹತ್ತುವ ಭಾಗ್ಯ ಒದಗಿ ಬಂದಿದೆ ಆದರೆ ಜಿಪಂ ಅಧ್ಯಕ್ಷ ಆಶಾ ಐಹೊಳೆ ಮಾತ್ರ ಡಕೋಟಾ ಕಾರಿನಲ್ಲಿ ಓಡಾಡುತ್ತಿದ್ದಾರೆ
ರಾಜ್ಯ ಸರ್ಕಾರ ಜಿಪಂ ಅಧ್ಯಕ್ಷರಿಗೆ ಕ್ಯಾಬಿನೆಟ್ ದರ್ಜೆಯ ಸ್ಥಾನ ಮಾನ ನೀಡುವದಾಗಿ ಹೇಳಿಕೊಂಡಿತ್ತು ಆದರೆ ಬೆಳಗಾವಿ ಜಿಲ್ಲಾ ಪಂಚಾಯತಿಯ ಅಧ್ಯಕ್ಷೆ ಆಶಾ ಐ ಹೊಳೆ ಮಾತ್ರ ಹೊಸ ಕಾರಿಗಾಗಿ ತಮ್ಮ ಹೋರಾಟ ಮುಂದುವರೆಸಿದ್ದಾರೆ
ಹೊಸ ಕಾರು ಖರೀದಿಗಾಗಿ ಸರ್ಕಾರ ಪ್ರತ್ಯೇಕವಾಗಿ ಅನುದಾನ ಕೊಡಬೇಕು ಬೇರೆ ಹೆಡ್ ನಲ್ಲಿ ಕಾರು ಖರೀದಿ ಮಾಡಲು ಅವಕಾಶ ಇಲ್ಲ ಅಂತ ಅಧಿಕಾರಿಗಳು ಇಲ್ಲ ಸಲ್ಲದ ಸಬೂಬು ಹೇಳುತ್ತಿದ್ದಾರೆ
ಆಶಾ ಐಹೊಳೆ ಅವರು ಗ್ರಾಮೀಣಾಭಿವೃದ್ಧಿ ಸಚಿವರನ್ನು ಭೇಟಿಯಾಗಿ ಹೊಸ ಕಾರ್ ಖರೀದಿಗೆ ಅಧಿಕಾರಿಗಳಿಗೆ ಸೂಚನೆ ಕೊಡಿ ಎಂದು ಹತ್ತು ಹಲವು ಬಾರಿ ಮನವಿ ಮಾಡಿಕೊಂಡರೂ ಕ್ಯಾಬಿನೇಟ್ ದರ್ಜೆ ನೀಡುವ ಸಚಿವರು ಅಧ್ಯಕ್ಷರಿಗೆ ಒಂದು ಹೊಸ ಕಾರಿನ ಭಾಗ್ಯವನ್ನು ಒದಗಿಸಿಕೊಡುವ ಮನಸ್ಸು ಮಾಡಿಲ್ಲ
ಬೆಳಗಾವಿ ಜಿಲ್ಲೆ ರಾಜ್ಯದಲ್ಲಯೇ ಅತೀ ದೊಡ್ಡ ಜಿಲ್ಲೆಯಾಗಿದೆ ಭೌಗೋಳಿಕವಾಗಿ ವಿಶಾಲವಾಗಿರುವ ಜಿಲ್ಲೆಯಲ್ಲಿ ಓಡಾಡಲು ಜಿಪಂ ಅಧ್ಯಕ್ಷರಿಗೆ ಅಧಿಕಾರಿಗಳು ಹೊಸ ವಾಹನ ಕೊಡಿಸಲು ಹಿಂದೇಟು ಹಾಕುತ್ತಿರುವದು ದುರ್ದೈವದ ಸಂಗತಿಯಾಗಿದೆ
ಈ ಹಿಂದೆ ಮೇಯರ್ ಸರೀತಾ ಪಾಟೀಲ ಅವರು ನನಗೆ ಅಂಬ್ಯಸಿಡರ್ ಕಾರ್ ಬೇಡ ಹೊಸ ಹೊಂಡಾ ಸಿಟಿ ಬೇಕು ಅಂತ ಪಾಲಿಕೆಯ ಕಾರ್ ಬಿಟ್ಟು ಸ್ಕೂಟರ್ ಹತ್ತಿ ಪಾಲಿಕೆಗೆ ಬಂದು ದೊಡ್ಡ ಸುದ್ಧಿ ಮಾಡಿದ್ದರು ಈಗ ಬೆಳಗಾವಿ ಜಿಪಂ ಅಧ್ಯಕ್ಷರು ಇದೇ ರೀತಿ ಏನಾದರು ಮಾಡಿದರೆ ಅವರಿಗೂ ಹೊಸ ಕಾರಿನ ಭಾಗ್ಯ ಒದಗಿ ಬರಬಹುದು ಇಲ್ಲದಿದ್ದರೆ ದೊಡ್ಡ ಜಿಲ್ಲೆಯ ಜಿಪಂ ಅಧ್ಯಕ್ಷರಿಗೆ ಡಕೋಟಾ ಕಾರ್ ವೇ ಗತಿ