ಉತ್ತರ ಕರ್ನಾಟಕಕ್ಕೆ ಕಚೇರಿಗಳ
ಸ್ಥಳಾಂತರದತ್ತ ಮತ್ತೊಂದು ಹೆಜ್ಜೆ
ಕೃಷ್ಣಾ ಭಾಗ್ಯ ಜಲನಿಗಮ
ಆಲಮಟ್ಟಿಗೆ ಸ್ಥಳಾಂತರಿಸಲು
ಅಧಿಕೃತ ಆದೇಶ!
ಪ್ರಮುಖ ಕಚೇರಿಗಳನ್ನು
ಬೆಂಗಳೂರಿನಿಂದ ಉತ್ತರ ಕರ್ನಾಟಕಕ್ಕೆ
ಸ್ಥಳಾಂತರಿಸುವ ಸಂಬಂಧ ತಾವು
ನೀಡಿದ ಭರವಸೆಯಂತೆ ಮುಖ್ಯಮಂತ್ರಿ
ಶ್ರೀಬಸವರಾಜ ಬೊಮ್ಮಾಯಿ ಅವರು
ನಡೆದುಕೊಳ್ಳುತ್ತಿದ್ದು ಕೃಷ್ಣಾ ಭಾಗ್ಯ
ಜಲನಿಗಮದ ಕಚೇರಿಗಳನ್ನು
ಬೆಂಗಳೂರಿನಿಂದ ವಿಜಯಪುರ
ಜಿಲ್ಲೆಯ ಆಲಮಟ್ಟಿಗೆ ಸ್ಥಳಾಂತರಿಸಲು
ಇಂದು ಶನಿವಾರ ಅ.30 ರಂದು
ಸಂಜೆ ಅಧಿಕೃತ ಆದೇಶ ಹೊರಬಿದ್ದಿದೆ.
ಸಕ್ಕರೆ ನಿರ್ದೇಶನಾಲಯ ಆಯುಕ್ತರ
ಕಚೇರಿಯು ಈಗಾಗಲೇ ಬೆಳಗಾವಿಗೆ
ಸ್ಥಳಾಂತಗೊಂಡಿದ್ದು ಕಾರ್ಯಾರಂಭ
ಮಾಡಿದೆ.
ಬರುವ ಡಿಸೆಂಬರ್ ತಿಂಗಳಲ್ಲಿ
ಬೆಳಗಾವಿಯಲ್ಲಿ ವಿಧಾನ ಮಂಡಲದ
ಚಳಿಗಾಲ ಅಧಿವೇಶನ ನಡೆಯಲಿದ್ದು
ಅಷ್ಟರೊಳಗೆ ಪ್ರಮುಖ ಕಚೇರಿಗಳನ್ನು
ಸ್ಥಳಾಂತರಿಸಲು ಕ್ರಮ ಕೈಕೊಳ್ಳುವದಾಗಿ
ಮುಖ್ಯಮಂತ್ರಿಗಳು ಭರವಸೆ ನೀಡಿದ್ದಾರೆ.
ಬೊಮ್ಮಾಯಿ ಅವರು
ಮುಖ್ಯಮಂತ್ರಿಯಾಗಿ ಅಧಿಕಾರ
ವಹಿಸಿಕೊಂಡ ಕೂಡಲೇ ಅವರನ್ನು
ಬೆಂಗಳೂರಿನಲ್ಲಿ ಸನ್ಮಾನಿಸಿದ ಬೆಳಗಾವಿ ಜಿಲ್ಲಾ ಕನ್ನಡ ಸಂಘಟನೆಗಳ ಕ್ರಿಯಾ ಸಮಿತಿಯು ಬೆಂಗಳೂರಿನಲ್ಲಿಯ ಕಚೇರಿಗಳನ್ನು ಉತ್ತರ ಕರ್ನಾಟಕಕ್ಕೆ ,ವಿಶೇಷವಾಗಿ ಸುವರ್ಣ ಸೌಧಕ್ಕೆ,ಸ್ಥಳಾಂತರಿಸಲು ಮನವಿ ಮಾಡಿತ್ತು.
ಕೃಷ್ಣಾ ಭಾಗ್ಯ ಜಲನಿಗಮವನ್ನು ಆಲಮಟ್ಟಿಗೆ ಸ್ಥಳಾಂತರಿಸಲು
ಅಧಿಕೃತ ಆದೇಶ ಹೊರಡಿಸಿದ್ದಕ್ಕಾಗಿ
ಮುಖ್ಯಮಂತ್ರಿಗಳನ್ನು ಕನ್ನಡ ಕ್ರಿಯಾ ಸಮಿತಿ ಅಧ್ಯಕ್ಷ ಶ್ರೀ ಅಶೋಕ ಚಂದರಗಿ ಅವರು
ಅಭಿನಂದಿಸಿದ್ದಾರೆ.