ಬೆಳಗಾವಿ -ಬೆಳಗಾವಿ ಮಹಾನಗರ ಪಾಲಿಕೆಯಲ್ಲಿ ಜನನ ಹಾಗು ಮರಣ ಪ್ರಮಾನ ಪತ್ರಗಳನ್ನು ನೀಡಲು ಸಾರ್ವಜನಿಕರಿಗೆ ಅನಕೂಲವಾಗುವಂತೆ ಹೆಚ್ಚುವರಿ ಕೌಂಟರ್ ಗಳನ್ನು ಆರಂಭಿಸಲು ನಿರ್ಧರಿಸಲಾಗಿದೆ
ಬೆಳಗಾವಿ ಪಾಲಿಕೆಯ ಆರಗ್ಯ ವಿಭಾಗದಲ್ಲಿರುವ ಜನನ ಹಾಗು ಮರಣ ಪ್ರಮಾಣ ಪತ್ರಗಳ ವಿಭಾಗವನ್ನು ಪಾಲಿಕೆ ಕಚೇರಿಯ ಹೊರಗಡೆ ಇರುವ ಬ್ಯಾಂಕ್ ಕಟ್ಟಡದಲ್ಲಿಯೇ ಈ ವಿಭಾಗವನ್ನು ತೆರಯಲು ಭರದ ಸಿದ್ಧತೆಗಳು ನಡೆಯುತ್ತಿವೆ ಜನನ ಹಾಗು ಮರಣ ಪ್ರಮಾಣ ಪತ್ರಗಳನ್ನು ಪಡೆಯಲು ಪಾಲಿಕೆ ಕಚೇರಿಯಲ್ಲಿ ಫುಲ್ ರಶ್ ಆಗುತ್ತಿದೆ ಇದನ್ನು ಮನವರಿಕೆ ಮಾಡಿಕೊಂಡಿರುವ ಪಾಲಿಕೆ ಆಯುಕ್ತ ಶಶಿಧರ ಕುರೇರ ಅವರು ಸಾರ್ವಜನಿಕರಿಗೆ ಅನಕೂಲ ಮಾಡಿಕೊಡಲು ಹೆಚ್ಚುವರಿ ಕೌಂಟರ್ ತೆರೆಯಲು ನಿರ್ಧರಿಸಿದ್ದಾರೆ
ಬೆಳಗಾವಿ ಪಾಲಿಕೆಯಲ್ಲಿ ಇನ್ನು ಮುಂದೆ ಸಾರ್ವಜನಿಕರು ಜನನ ಮರಣಕ್ಕಾಗಿ ಕಾಯಬೇಕಾಗಿಲ್ಲ ಅರ್ಜಿ ಸಲ್ಲಿಸಿದ ಕೆಲವ4 ಘಂಟೆಗಳಲ್ಲಿಯೇ ಜನನ ಹಾಗು ಮರಣದ ಪ್ರಮಾಣ ಪತ್ರಗಳು ಸಾರ್ವಜನಿಕರ ಕೈಸೇರಲಿವೆ