Breaking News

ಸ್ನೇಹ ಜೀವಿ ರಾಜು ಜಿಕ್ಕನಗೌಡರ ಇನ್ನಿಲ್ಲ…

ಬೆಳಗಾವಿ- ಹೊಸ ವರ್ಷದ ಮೊದಲ ದಿನವೇ ಶಾಕಿಂಗ್ ಸುದ್ಧಿ ಹೊರಬಿದ್ದಿದೆ. ಸ್ನೇಹಿತರೂ, ಭಾರತೀಯ ಜನತಾ ಪಾರ್ಟಿಯ ಬೆಳಗಾವಿ ಗ್ರಾಮೀಣ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾಗಿದ್ದ ರಾಜು ಚಿಕ್ಕನಗೌಡರ್ ಅವರ‌ಉ ಅಕಾಲಿಕ ನಿಧನರಾಗಿದ್ದಾರೆ.

ಪಕ್ಷದ ಕಾರ್ಯದ ನಿಮಿತ್ಯ ಬೆಂಗಳೂರಿಗೆ ತೆರಳಿದ್ದ ಅವರು,ತೀವ್ರ ಹೃದಯಾಘಾತದಿಂದ ನಿಧನರಾಗಿದ್ದಾರೆ.
ವಿದ್ಯಾರ್ಥಿ ದೆಸೆಯಲ್ಲಿಯೇ ನಾಯಕತ್ವ ಬೆಳೆಸಿಕೊಂಡು ಎಬಿವಿಪಿಯ‌ ಮುಂಚೂಣಿ ನಾಯಕರಾಗಿದ್ದ ರಾಜು, ಜಿಕ್ಕನಗೌಡರ ರಾಣಿ ಚೆನ್ನಮ್ಮ ವಿವಿಯ ಸಿಂಡಿಕೇಟ್ ಸದಸ್ಯರಾಗಿ 2 ಬಾರಿ ನೇಮಕಗೊಂಡು ವಿಶ್ವವಿದ್ಯಾಲಯದ ಉನ್ನತಿಗಾಗಿ ಕೆಲಸ‌ ಮಾಡಿದ್ದರು.

ಭಾರತೀಯ ಜನತಾ ಪಾರ್ಟಿಯ ಯುವ ಮೋರ್ಚಾದ ಸಕ್ರಿಯ ಕಾರ್ಯಕರ್ತರಾಗಿದ್ದ ರಾಜು, ಬೆಳಗಾವಿ ಗ್ರಾಮೀಣ ಜಿಲ್ಲಾ ಅಧ್ಯಕ್ಷರಾಗಿ, ಯುವ ಮೋರ್ಚಾ ರಾಜ್ಯ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು.

ಉತ್ತಮ ಸಂಘಟಕರಾಗಿದ್ದ ರಾಜು, ದೇಶದ ಮತ್ತು ರಾಜ್ಯದ ಅಭ್ಯುದಯದ ಕನಸನ್ನು ಕಟ್ಟಿಕೊಂಡು ಕುಟುಂಬದ ಪೊರೆ ಕಳಚಿ ಅವಿವಾಹಿತರಾಗಿ, ಪಕ್ಷದ ಕೆಲಸ‌ ಮಾಡುತ್ತಿದ್ದರು. ಸ್ನೇಹಜೀವಿಯಾಗಿದ್ದ ಇವರು ಉತ್ತಮ ವಾಗ್ಮಿಯೂ ಆಗಿದ್ದರು.

2020ರ ಕಹಿ ಘಟನೆಗಳನ್ನು ಮರೆತು ಹೊಸ ವರ್ಷಕ್ಕೆ ಕಾಲಿಟ್ಟ‌ ಘಳಿಗೆಯಲ್ಲಿಯೇ ಇವರ ಅಕಾಲಿಕ ಮರಣದ ಸುದ್ದಿ ಬರಸಿಡಿಲಿನಂತೆ ಬಂದಿದೆ.

ದಿ. ರಾಜು‌ ಚಿಕ್ಕನಗೌಡರ ಅವರಿಗೆ ಭವಿಷ್ಯದಲ್ಲಿ ರಾಜ್ಯ ಮಟ್ಟದ ನಾಯಕರಾಗಿ ಎಲ್ಲಾ ಅವಕಾಶಗಳಿತ್ತು. ಅಕಾಲಿಕ ನಿಧನ ಎಲ್ಲರಿಗೂ ಶಾಕ್

.

Check Also

ಎಪ್ರಿಲ್ ಮತ್ತು ಮೇ ತಿಂಗಳಲ್ಲಿ ಹೆಚ್ಚು ಮಳೆ

ಬೆಂಗಳೂರು: ರಾಜ್ಯದಲ್ಲಿ ಮುಂಗಾರು ಪೂರ್ವದಲ್ಲಿ ಸಾಮಾನ್ಯಕ್ಕಿಂತ ಹೆಚ್ಚು ಮಳೆಯಾಗುವ ನಿರೀಕ್ಷೆಯಿದ್ದು, ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ಉತ್ತಮ ಮಳೆಯಾಗುವ ಸಾಧ್ಯತೆ …

Leave a Reply

Your email address will not be published. Required fields are marked *