ಬೆಳಗಾವಿ- ಲಾರಿಯಲ್ಲಿ ಬೆಂಗಳೂರಿನಿಂದ, ಕದ್ದು ಮುಚ್ಚಿ ರಾಜಸ್ತಾನಕ್ಕೆ ಹೊರಟಿದ್ದ 99 ಕಾರ್ಮಿಕರನ್ನು ಪೋಲೀಸರು ಹಿರೇಬಾಗೇವಾಡಿ ಟೀಲ್ ಬಳಿ ವಶಕ್ಕೆ ಪಡೆದುಕೊಂಡು ಅವರ ಆರೋಗ್ಯ ತಪಾಸಣೆ ಮಾಡಿ ಅವರನ್ನು ಸಮಾಜ ಕಲ್ಯಾಣ ಇಲಾಖೆಯ ಹಾಸ್ಟೇಲ್ ನಲ್ಲಿ ಕ್ವಾರಂಟೈನ್ ಮಾಡಲಾಗಿದೆ
ರಾಜಸ್ತಾನ ಮೂಲದ 99 ಕಾರ್ಮಿಕರನ್ನು ವಶಕ್ಕೆ ಪಡೆದು ಬೆಳಗಾವಿ ನಗರದ ಸಿಪಿಎಡ್ ಮೈದಾನದಲ್ಲಿ ಅವರ ಆರೋಗ್ಯ ತಪಾಸಣೆ ಮಾಡಿ ನಂತರ ಎಲ್ಲ ಕಾರ್ಮಿಕರನ್ನು ಕ್ವಾರಂಟೈನ್ ಮಾಡಲಾಗಿದೆ.
ಜಿಲ್ಲೆಯ ಚಿಕ್ಕೋಡಿಯಲ್ಲಿ
ಬೆಂಗಳೂರಿನಿಂದ ಉತ್ತರ ಪ್ರದೇಶದ ಗೊರಖಪುರಕ್ಕೆ ಕಾಲ್ನಡಿಗೆ ಮೂಲಕ ಮಂಗಳವಾರ ತೆರಳುತ್ತಿದ್ದ 13 ಜನ ಕೂಲಿ ಕಾರ್ಮಿಕರನ್ನು ಚಿಕ್ಕೋಡಿ ಪೋಲಿಸ್‍ರು ಇಲ್ಲಿನ ಹಾಲಟ್ಟಿ ಬಳಿ ಇರುವ ಚೆಕ್ ಪೋಸ್ಟ್ ಬಳಿ ತಡೆದು ಕೊರೊನಾ ಸೋಂಕು ತಪಾಸಣೆ ನಡೆಸಿದ್ದಾರೆ
ಪಿಎಸ್‍ಐ ರಾಕೇಶ ಬಗಲಿ ಕೂಲಿ ಕಾರ್ಮಿಕರನ್ನು ತಡೆದು ಅವರಿಗೆ ಅಲ್ಪೋಹಾರ ನೀಡಿ ಮಾನವೀಯತೆ ಮೇರೆದಿದ್ದಾರೆ.
ಬೆಳಗಾವಿ ಸುದ್ದಿ | Belagavi Suddi | Belagavi News ಸಮಸ್ಯಗೆ ಸ್ಪಂದನೆ