Breaking News

ಮರಾಠಿಗರ ಕನ್ನಡ ಪ್ರೇಮ,ಕನ್ನಡ ಪತ್ರಕರ್ತರಿಗೂ ಪ್ರಶಸ್ತಿ…

ಕನ್ನಡ ಮರಾಠಿ ಎಷ್ಟು ಸೌಹಾರ್ದತೆಯಿಂದ ಇದೆ ಅನ್ನೋದಕ್ಕೆ ಈ ಪೋಟೋ ನೋಡಿದ್ರೆ ಸಾಕು ,ಪ್ರತಿ ವರ್ಷ ಈ ಕಾರ್ಯಕ್ರಮ ನಡೆಯುತ್ತದೆ,ಮರಾಠಿ ವಾಚನಾಲಯ ಸಂಘಟನೆ ಪ್ರತಿ ವರ್ಷ ಉದಯೋನ್ಮುಖ ಕನ್ನಡ ಪತ್ರಕರ್ತರ ನ್ನು ಗುರುತಿಸಿ ಅವರನ್ನು ಗೌರವಿಸುತ್ತಾ ಬಂದಿದೆ ಈ ವರ್ಷ ಕನ್ನಡಿಗರ ಮುಖವಾಣಿ ಕನ್ನಡಮ್ಮ ದಿನಪತ್ರಿಕೆಯ ಮುಖ್ಯ ವರದಿಗಾರ ರಾಜ್ ಹಿರೇಮಠ ಅವರಿಗೆ ಸಮ್ಮಾನ ಮಾಡಿರುವದು ವಿಶೇಷ….

ಬೆಳಗಾವಿ-ಕನ್ನಡ ಮತ್ತು ಮರಾಠಿ ಪತ್ರಕರ್ತರು ಜಿಲ್ಲೆಯ ಸಮಸ್ಯೆಯನ್ನು ಬೆಳಕು ಚೆಲ್ಲುವ ಕಾರ್ಯ ಮಾಡಬೇಕು ಎಂದು ಮಾಜಿ ಮೇಯರ್ ಮಾಲೋಜಿರಾವ್ ಅಷ್ಟೆಕರ್ ಹೇಳಿದರು.

ಸೋಮವಾರ ನಗರದ ಗಣಪತಿ ಗಲ್ಲಿಯಲ್ಲಿರುವ ಸಾರ್ವಜನಿಕ ವಾಚನಾಲಯ ಪಂ. ನಾಥ್ ಪೈ ವಾಕ್ಯನಮಾಲಾ ಸಭಾಂಗಣದಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದವರಿಗೆ ಗೌರವಿಸಿ ಮಾತನಾಡಿದರು.
ಬೆಳಗಾವಿ ಮಹಾಷ್ಟ್ರದ ಗಡಿ ಸಮಸ್ಯೆಯ ಮೊದಲಿನಿಂದಲೂ ಇದೆ. ಆದರೆ ಬೆಳಗಾವಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಕನ್ನಡ ಹಾಗೂ ಮರಾಠಿ ಪತ್ರಕರ್ತರು ತಮ್ಮ ಭಾಷಿಕರಿಗೆ ಸುದ್ದಿ ತಲುಪಿಸುವ ಕಾರ್ಯ ಪ್ರಾಮಾಣಿಕವಾಗಿ ಮಾಡುತ್ತಿದ್ದಾರೆ. ಅಲ್ಲದೆ ಬೆಳಗಾವಿ ಜಿಲ್ಲೆಯ
1956 ರಲ್ಲಿ ಜೈಲು ಬರೋ ಚಳವಳಿಯಲ್ಲಿ ಬ್ಯಾರಿಸ್ಡರ್ ನಾಥ್ ಪೈ ಅವರು ನಾಲ್ಕು ವರ್ಷ ಜೈಲುವಾಸ ಅನುಭವಿಸಿದ್ದರು. ಅದು ಬೆಳಗಾವಿಯ ಸಲುವಾಗಿ. ಬೆಳಗಾವಿ ಜನರ ಸಮಸ್ಯೆ ಬಗ್ಗೆ ಗಮನ ಸೆಳೆದಿದ್ದರು ಎಂದರು.
1966ರಲ್ಲಿ ದೆಹಲಿಯಲ್ಲಿ ಗಡಿ ಸಮಸ್ಯೆಯ ಸಂದರ್ಭದಲ್ಲಿ ಸಾಯಿನಾಕ್, ಸುಂಟ್ಕರ್, ಸೇನಾಪತಿ ಬಾಪಟ ದೊಡ್ಡ ಸೇನಾಪತಿಗೆ ಬೇಟಿ ಮಾಡಿದ ಸಂದರ್ಭದಲ್ಲಿ ಅಂದಿನ ಪ್ರಧಾನಿಯಾಗಿದ್ದ ಇಂದಿರಾ ಗಾಂಧಿ ಅವರು ನಾಥ್ ಪೈ ಅವರ ಹೆಸರು ಪ್ರಸ್ತಾಪ ಮಾಡಿದ್ದು ಇತಿಹಾಸ. ಅಂಥ ಗಣ್ಯರ ಹೆಸರಿನಲ್ಲಿ ಸಾಧನೆ ಮಾಡಿದ ಕನ್ನಡ ಹಾಗೂ ಮರಾಠಿ ಪತ್ರಕರ್ತರು, ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗಳಿಗೆ ಸನ್ಮಾನ ಮಾಡುತ್ತಿರುವುದು ಸಂತಸ ತಂದಿದೆ ಎಂದರು.
ಸಾರ್ವಜನಿಕ ವಾಚನಾಲಯದ ಅತ್ಯುತ್ತಮ ಪತ್ರಕರ್ತರ ಪ್ರಶಸ್ತಿಗೆ ಕನ್ನಡ ವಿಭಾಗದಲ್ಲಿ ಕನ್ನಡಮ್ಮ ದಿನಪತ್ರಿಕೆಯ ಹಿರಿಯ ವರದಿಗಾರ ರಾಜಶೇಖರಯ್ಯ ಹಿರೇಮಠ, ಮರಾಠಿ ವಿಭಾಗದಲ್ಲಿ ರಣಜುಂಝಾರ್ ಪತ್ರಿಕೆಯ ಸಂಪಾದಕ ಮನೋಹರ ಕಾಲಕುಂದ್ರಿಕರ, ಸ್ವತಂತ್ರ ಪ್ರಗತಿಯ ಸಂಪಾದಕಿ ಬಬಿತಾ ಪವಾರ್, ಬಿಗ್ ನ್ಯೂಸ್ ವಾಹಿನಿಯ ಭಾಗ್ಯಶ್ರೀ ಸುಣಗಾರ ಅವರಿಗೆ ಪ್ರಶಸ್ತಿ ಪ್ರಧಾನ ಮಾಡಲಾಯಿತು.
ಈ ಸಂದರ್ಭದಲ್ಲಿ ಮಾಜಿ ಮೇಯರ್ ಗೋವಿಂದ ರಾವುತ್, ದೀಪಕ ದವಳಿ, ಸಾರ್ವಜನಿಕ ವಾಚಲನಾಯಲದ ಅಧ್ಯಕ್ಷೆ ಸುನಿತಾ ಮೋಹಿತೆ, ರಘುನಾಥ ಬಾಂಡಗಿ, ನೇತಾಜಿ ಜಾಧವ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Check Also

ವೀಕ್ಲಿ ಮ್ಯಾರೇಜ್,ಇದು ಲಕ್ಷ ಲಕ್ಷ ರೂಗಳ ಪ್ಯಾಕೇಜ್ ಹುಡುಗರ ಲೈಫ್ ಡ್ಯಾಮೇಜ್ …..!!!

ಬೆಳಗಾವಿ – ಹೆಣ್ಣು ಮಕ್ಕಳ ಮಾರಾಟ ಆಯ್ತು,ಹನಿ ಟ್ರ್ಯಾಪ್ ಗೋಳಾಟ ಆಯ್ತು ಈಗ ಹೊಸದೊಂದ ಆಟ ಶುರುವಾಗಿದೆ ಇದು ಮದ್ಯ …

Leave a Reply

Your email address will not be published. Required fields are marked *