ಬೆಳಗಾವಿ – ನಿನ್ನೆ ಸಂಜೆ ಬೈಕ್ ನೀರಿನಲ್ಲಿ ಕೊಚ್ವಿಹೋಗಿ ಮಾರ್ಕಂಡೆಯ ನದಿಯಲ್ಲಿ ನಾಪತ್ತೆಯಾಗಿದ್ದ ಯುವಕನ ಶವ ಇಂದು ಬೆಳಗ್ಗೆ ಪತ್ತೆಯಾಗಿದೆ.
ನಿನ್ನೆ ಸಂಜೆ ಹೊತ್ತಿಗೆ ಮಾರ್ಕಂಡೇಯ ನದಿಯ ನೀರಿನ ರಭಸಕ್ಕೆ 24 ವರ್ಷದ ಓಂಕಾರ ಪಾಟೀಲ ಎಂಬ ಯುವಕ ನದಿಯಲ್ಲಿ ಕೊಚ್ಚಿ ಹೋಗಿದ್ದ, ನಿನ್ನೆ ಸಂಜೆಯಿಂದ NDRF ತಂಡ ಹಾಗೂ ಕಾಕತಿ ಪೋಲೀಸರು ಯುವಕನ ಶೋಧಕ್ಕೆ ಕಾರ್ಯಾಚರಣೆ ನಡೆಸಿದ್ದರು ಇಂದು ಮದ್ಯಾಹ್ನ ಒಂದು ಗಂಟೆ ಸುಮಾರಿಗೆ ಯುವಕನ ಶವ ಪತ್ತೆಯಾಗಿದೆ.
ಇಂದಿನಿಂದ ಶ್ರಾವಣ ಮಾಸ ಶುರು ಆಗುತ್ತದೆ ಎಂದು ನಿನ್ನೆ ಸಂಜೆ ಕಟೀಂಗ್ ಮಾಡಿಸಿಕೊಳ್ಳಲು ಅಲತಗಾ ಗ್ರಾಮದಿಂದ ಕಂಗ್ರಾಳಿ ಗ್ರಾಮಕ್ಕೆ ಇಬ್ಬರು ಯುವಕರು ಬೈಕ್ ಮೇಲೆ ಹೋಗಿದ್ದರು.ನದಿಯ ಪಕ್ಕದ ಕಾಲುವೆ ದಾಟುವಾಗ ಬೈಕ್ ನೀರಿನ ಸುಳಿವುನಲ್ಲಿ ಸಿಲುಕಿ ಇಬ್ಬರು ಯುವಕರು ಕೊಚ್ವಿಹೋದ್ದರು.ಆದ್ರೆ ನಿನ್ನೆ ಸಂಜೆಯೇ ಇಬ್ಬರಲ್ಲಿ ಒಬ್ಬ ಯುವಕ ದಡ ಸೇರಿ ಬದುಕುಳುದಿದ್ದ ಆದ್ರೆ ನಿನ್ನೆ ನಾಪತ್ತೆಯಾದ ಓಂಕಾರ ಪಾಟೀಲನ ಶವ ಇಂದು ಪತ್ತೆಯಾಗಿದೆ. ಬೆಳಗಾವಿ ನಗರ ಪೋಲೀಸ್ ಆಯುಕ್ತ ಮಾರ್ಟಿನ್ ಅವರು ಸ್ಥಳಕ್ಕೆ ಭೇಟಿ ನೀಡಿ ಪರಶೀಲಿಸಿದ್ದಾರೆ
ಬೆಳಗಾವಿ ಸುದ್ದಿ | Belagavi Suddi | Belagavi News ಸಮಸ್ಯಗೆ ಸ್ಪಂದನೆ