Breaking News

IPS, IAS ಅಧಿಕಾರಿಗಳ ಫೇಸ್ ಬುಕ್ ಅಕೌಂಟ್ ಹ್ಯಾಕ್ ಮಾಡಿದ ಹ್ಯಾಕರ್ಸ್ ಖಾಲಿ ಬಲೆಗೆ.

ಬೆಳಗಾವಿ: ಐಪಿಎಸ್, ಐಎಎಸ್ ಅಧಿಕಾರಿಗಳ ಹೆಸರಿನಲ್ಲಿ ನಕಲಿ ಫೇಸಬುಕ್ ಖಾತೆ ತೆರೆದು ಮೋಸ ಮಾಡುತ್ತಿದ್ದ ಇಬ್ಬರು ಖತರ್ನಾಕ್ ಖದೀಮರನ್ನು ವಶಕ್ಕೆ ಪಡೆದುಕೊಳ್ಳುವಲ್ಲಿ ಬೆಳಗಾವಿ ಪೊಲೀಸರು ಯಶಸ್ವಿಯಾಗಿದ್ದಾರೆ.

ಹೌದು, ಬೆಳಗಾವಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಭೀಮಾಶಂಕರ ಗುಳೇದ ಅವರ ಹೆಸರಿನಲ್ಲಿ ನಕಲಿ ಖಾತೆ ತೆರೆದಿದ್ದ ಆರೋಪಿಗಳು ಎಸ್ಪಿ ಅವರ ಸ್ನೇಹಿತರ ಬಳಿ ಹಣಕ್ಕೆ ಬೇಡಿಕೆ ಇಟ್ಟಿದ್ದರು. ಬೆಂಗಳೂರಿನಿಂದ ಸಿಆರ್ ಪಿಎಫ್ ಅಧಿಕಾರಿಯೊಬ್ಬರು ಬೇರೆಡೆ ವರ್ಗಾವಣೆ ಆಗಿದ್ದಾರೆ. ಅವರ ಮನೆಯಲ್ಲಿ‌ 12 ಲಕ್ಷ ರೂ. ಮೌಲ್ಯದ ಫರ್ನಿಚರ್ಸ್, ಟಿವ್ಹಿ, ಫ್ರೀಡ್ಜ್, ವಾಸಿಂಗ್ ಮಶಿನ್ ಸೇರಿ ಮತ್ತಿತರ ವಸ್ತುಗಳಿವೆ. ಅವುಗಳನ್ನು ಕೇವಲ 90 ಸಾವಿರದಿಂದ 1.20 ಲಕ್ಷ ರೂ. ವರೆಗೆ ಕಡಿಮೆ ದರದಲ್ಲಿ ನಿಮಗೆ ಮಾರಾಟ ಮಾಡುತ್ತೇವೆ. ನನ್ನ ಬ್ಯಾಂಕ್ ಅಕೌಂಟ್ ಗೆ ಹಣ ಹಾಕುವಂತೆ ಡಾ.ಭೀಮಾಶಂಕರ ಗುಳೇದ ಅವರ ಹೆಸರಿನಲ್ಲಿ ಮೆಸೆಜ್ ಕಳಿಸಿದ್ದರು. ಈ ಸಂಬಂಧ ಬೆಳಗಾವಿ ಜಿಲ್ಲಾ ಸಿಇಎನ್ ಠಾಣೆಯಲ್ಲಿ ಅವರು ದೂರು ದಾಖಲಿಸಿದ್ದರು.

ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ ಪಿಐ ಸುನೀಲಕುಮಾರ ನಂದೀಶ್ವರ ನೇತೃತ್ವದ ತಂಡವು ಮಧ್ಯಪ್ರದೇಶ ಮೂಲದ ವಿಜಯಕುಮಾರ ತಿವಾರಿ, ರಾಜಸ್ಥಾನ ಮೂಲದ ಅರ್ಬಾಜ್ ಖಾನ್ ಎಂಬುವವರನ್ನು ಪೊಲೀಸರು ವಶಕ್ಕೆ ಪಡೆದು ಬೆಳಗಾವಿಗೆ ಕರೆ ತಂದಿದೆ.

ಡಾ. ಭೀಮಾಶಂಕರ ಎಸ್. ಗುಳೇದ ಹೆಸರಿನ ಒಂದು ನಕಲಿ ಫೇಸಬುಕ್ ಖಾತೆ ತೆರೆಯಲಾಗಿತ್ತು. ಬೆಳಗಾವಿ ಜಿಲ್ಲಾ ಎಸ್ಪಿ ಅವರ ಹೆಸರಿನ ಫೇಸಬುಕ್ ಅಕೌಂಟ್ ಫಾಲೋವರ್ಸ್ ಎಲ್ಲರಿಗೂ ಕೂಡ ಫ್ರೇಂಡ್ ರಿಕ್ವೇಸ್ಟ್ ಕಳಿಸಿ ಫ್ರೇಂಡ್ ಮಾಡಿಕೊಂಡಿದ್ದ. ಅದಾದ ಬಳಿಕ ಒಂದು ದಿನ ನನ್ನ ಬರ್ತಡೇ ಇದೇ ಎಂದು ಪೋಸ್ಟ್ ಹಾಕಿದ್ದ. ಆಗ ವಯಕ್ತಿಕವಾಗಿ ಇನ್ ಬಾಕ್ಸ್ ನಲ್ಲಿ ಶುಭಾಶಯ ಕಳಿಸಿದವರನ್ನೆ ಗುರಿಯಾಗಿಸಿಕೊಂಡು ಬೆಂಗಳೂರಿನಲ್ಲಿ ನನ್ನ ಗೆಳೆಯ ಓರ್ವ ಸಿಆರ್ ಪಿಎಫ್ ಅಧಿಕಾರಿಯಿದ್ದು, ಅವನು ಇತ್ತಿಚೆಗೆ ಬೇರೆ ಕಡೆ ವರ್ಗಾವಣೆಯಾಗಿದ್ದಾನೆ. ಅವನ ಬಳಿಕ ಒಳ್ಳೊಳ್ಳೆ ಫರ್ನಿಚರ್ಸ್, ಎಲೆಕ್ಟ್ರಾನಿಕ್ ವಸ್ತುಗಳು ಇವೆ. ಇವುಗಳ ಮೌಲ್ಯ 12 ಲಕ್ಷ ರೂ. ಆಗುತ್ತದೆ. ಈ ಎಲ್ಲಾ ವಸ್ತುಗಳನ್ನು ನಾನು ತೆಗೆದುಕೊಂಡು ಹೋಗಲು ಕಷ್ಟವಾಗುತ್ತಿದ್ದು, 90 ಸಾವಿರ ರೂ. ಇಲ್ಲವೇ 1.20 ಲಕ್ಷ ರೂ‌. ಮಾರಾಟ ಮಾಡುತ್ತೇವೆ. ನೀವು ನಮ್ಮ ಬೆಳಗಾವಿ ಎಸ್ಪಿ ಅವರ ಒಳ್ಳೆಯ ಸ್ನೇಹಿತರು. ಹಾಗಾಗಿ, ನಿಮಗೆ ಕಡಿಮೆ ದರದಲ್ಲಿ ಇವುಗಳನ್ನು ಕೊಡುತ್ತಿದ್ದೇವೆ ಎಂದು ಮೆಸೆಜ್ ಹಾಕಿಸಿದ್ದ. ಈ ಮೂಲಕ ಜನರಿಂದ ದುಡ್ಡು ಹೊಡೆಯಲು ಆರೋಪಿಗಳು ಪ್ರಯತ್ನಿಸಿದ್ದರು ಎಂದು ಬೆಳಗಾವಿ ಎಸ್ಪಿ ಮಾಧ್ಯಮಗಳಿಗೆ ವಿವರಿಸಿದರು.

ಇದು ನನ್ನ ಗಮನಕ್ಕೆ ಬರುತ್ತಿದ್ದಂತೆ ಫೇಕ್ ಫೇಸಬುಕ್ ಅಕೌಂಟ್ ವಿರುದ್ಧ ಎಫ್ಐಆರ್ ದಾಖಲಿಸಿದ್ದೆ. ಅಲ್ಲದೇ ತನಿಖೆ ಆರಂಭಿಸಲಾಗಿತ್ತು.‌ ಒಂದು ತಂಡವನ್ನು ಉತ್ತರಪ್ರದೇಶಕ್ಕೆ ಕಳಿಸಿಕೊಡಲಾಗಿತ್ತು. ಅಲ್ಲಿ ಒಬ್ಬ ವ್ಯಕ್ತಿಯನ್ನು ವಿಚಾರಣೆ ಮಾಡಿದಾಗ ಆತನ ಮೊಬೈಲ್ ನಂಬರ್ ಬಳಸಿಕೊಂಡು ರಾಜಸ್ಥಾನ ಮೂಲದ ವ್ಯಕ್ತಿ ಈ ಫೇಕ್ ಅಕೌಂಟ್ ತೆರೆದಿದ್ದು ಸ್ಪಷ್ಟವಾದ ಹಿನ್ನೆಲೆಯಲ್ಲಿ ಆತನನ್ನು ನಮ್ಮ ಪೊಲೀಸರು ವಶಕ್ಕೆ ಪಡೆದು ಬೆಳಗಾವಿಗೆ ಕರೆ ತಂದಿದ್ದಾರೆ. ಈ ಪ್ರಕರಣದಲ್ಲಿ ಇಬ್ಬರು ಆರೋಪಿಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಡಾ. ಭೀಮಾಶಂಕರ ಗುಳೇದ ತಿಳಿಸಿದರು.

ಈ ಆರೋಪಿ ನನ್ನ ಹೆಸರಿನಲ್ಲಿ ಅಷ್ಟೇ ಅಲ್ಲದೇ ಗದಗ ಎಸ್ಪಿ ಬಿ.ಎಸ್.ನೇಮಗೌಡ, ಮಂಡ್ಯ ಎಸ್ಪಿ ಮಲ್ಲಿಕಾರ್ಜುನ ಬಾಲದಂಡ ಮತ್ತು ಐಎಎಸ್ ಅಧಿಕಾರಿಗಳಾದ ಎಂ.ಅರುಣಾ, ಅನುಕುಮಾರಿ ಅವರ ಹೆಸರಿನಲ್ಲೂ ಈ ರೀತಿ ನಕಲಿ ಫೇಸಬುಕ್ ಖಾತೆಗಳನ್ನು ತೆರೆದು ಜನರಿಗೆ ಮೋಸ ಮಾಡುತ್ತಿರುವುದು ವಿಚಾರಣೆ ವೇಳೆ ಸ್ಪಷ್ಟವಾಗಿದ್ದು, ಹೆಚ್ಚಿನ‌ ತನಿಖೆ ಮುಂದುವರಿಸಿದ್ದೇವೆ ಎಂದು ಡಾ. ಭೀಮಾಶಂಕರ ಗುಳೇದ ತಿಳಿಸಿದರು.

ಸಾಮಾಜಿಕ ಜಾಲತಾಣದಲ್ಲಿ ಯಾವ ಪೊಲೀಸ್‌ ಅಧಿಕಾರಿಗಳೂ ಹಣ ಕೇಳುವುದಿಲ್ಲ. ಎಲ್ಲರಿಗೂ ಸರ್ಕಾರ ಒಳ್ಳೆಯ ಸಂಬಳ ನೀಡುತ್ತದೆ. ಅಲ್ಲದೇ ಇದು ಕೇವಲ ಅಧಿಕಾರಿಗಳಿಗೆ ಮಾತ್ರ ಸಂಬಂಧಿಸಿದ್ದಲ್ಲ. ಇನ್ನು ಸಾರ್ವಜನಿಕರಿಗೆ ದುಡ್ಡಿನ ಅವಶ್ಯಕತೆ ಇದ್ದರೆ ವಯಕ್ತಿಕವಾಗಿ ಭೇಟಿಯಾಗಿ ದುಡ್ಡು ಕೇಳುತ್ತಾರೆ. ಈ ರೀತಿ ಸಾಮಾಜಿಕ ಜಾಲತಾಣಗಳಲ್ಲಿ ಯಾರೂ ಕೇಳುವುದಿಲ್ಲ. ಹಾಗಾಗಿ, ಈ ರೀತಿ ಆನ್ ಲೈನ್ ನಲ್ಲಿ ದುಡ್ಡು ಕೇಳಿದವರಿಗೆ ಯಾವುದೇ ಕಾರಣಕ್ಕೂ ಯಾರೂ ದುಡ್ಡು ಕೊಟ್ಟು, ಮೋಸ ಹೋಗಬೇಡಿ ಎಂದು ಸಾರ್ವಜನಿಕರಿಗೆ ಡಾ. ಭೀಮಾಶಂಕರ ಗುಳೇದ ಕಿವಿಮಾತು ಹೇಳಿದರು.

Check Also

ಅತ್ತೆಯನ್ನು ಬರ್ಬರವಾಗಿ ಹತ್ಯೆ ಮಾಡಿದ ಅಳಿಯ

ಬೆಳಗಾವಿ- ಸಂಕ್ರಮಣ ಹಬ್ಬದ ನಿಮತ್ಯ ಮಗಳು ನೋಡಲು ಬಂದಿದ್ದ ತಾಯಿ ಹೆಣವಾಗಿದ್ದಾಳೆ ಪಾಪಿ ಅಳಿಯ ಅತ್ತೆಯನ್ನೇ ಬರ್ಬರವಾಗಿ ಹತ್ಯೆ ಮಾಡಿದ …

Leave a Reply

Your email address will not be published. Required fields are marked *