Breaking News

ಬೆಳಗಾವಿಯ ನೀರಾವರಿ ಇಲಾಖೆ ಕಚೇರಿ ಆಗಲಿದೆ ಪೋಲೀಸ್ ಆಯುಕ್ತರ ಕಚೇರಿ

ಬೆಳಗಾವಿ- ಬೆಳಗಾವಿ ನಗರದ ಕ್ಲಬ್ ರಸ್ರೆಯಲ್ಲಿರುವ ನೀರಾವರಿ ಇಲಾಖೆಯ ಮುಖ್ಯ ಅಭಿಯಂತರರ ಕಚೇರಿ ಪೋಲೀಸ್ ಆಯುಕ್ತರ ಕಚೇರಿ ಆಗೋದು ಗ್ಯಾರಂಟಿ ಆಗಿದೆ

ವಿಧಾನಸಭೆಯ ಸ್ಪೀಕರ್ ಕೋಳಿವಾಡ್ ಅವರು ಕ್ಲಬ್ ರಸ್ತೆಯ ನೀರಾವರಿ ಇಲಾಖೆಯ ಕಚೇರಿಯನ್ನು ಬೆಳಗಾವಿ ಪೋಲೀಸ್ ಆಯುಕ್ತರ ಕಚೇರಿಗೆ ಹಸ್ತಾಂತರ ಮಾಡಬೇಕು ಎಂದು ಸ್ಪೀಕರ್ ಕೋಳಿವಾಡ್ ಅವರು ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರಿಗೆ ಪತ್ರ ಬರೆದಿದ್ದು ಮುಖ್ಯಮಂತ್ರಿ ಸಿದ್ಧರಾಮಯ್ಯ ಅದಕ್ಕೆ ಹಸೀರು ನಿಶಾನೆ ತೋರಿಸಿದ್ದಾರೆ
ಬೆಳಗಾವಿ ಕ್ಲಬ್ ರಸ್ತೆ ಯಲ್ಲಿರುವ ನೀರಾವರಿ ಇಲಾಖೆಯ ಕಚೇರಿ ಬೆಳಗಾವಿ ಪೋಲೀಸ್ ಕಮಿಷ್ನರೇಟ್ ಕಚೇರಿ ಆಗಬೇಕು ಎಂದು ಕೆಲವು ರಾಜಕೀಯ ಮುಖಂಡರು ಸ್ಪೀಕರ್ ಕೋಳಿವಾಡ ಅವರಿಗೆ ಮನವರಿಕೆ ಮಾಡಿಸಿ ಕೊಟ್ಟಿರುವ ಹಿನ್ನಲೆಯಲ್ಲಿ ಕೋಳಿವಾಡ್ ಅವರು ಮುಖ್ಯಮಂತ್ರಿ ಸಿದ್ರಾಮಯ್ಯ ಅವರಿಗೆ ಪತ್ರ ಬರೆದು ಕ್ಲಬ್ ರಸ್ತೆಯ ನೀರಾವರಿ ಇಲಾಖೆಯ ಕಚೇರಿ ಪೋಲೀಸ್ ಇಲಾಖೆಗೆ ಕೊಡಿ ಎಂದು ಶಿಫಾರಸ್ಸು ಮಾಡಿದ್ದು ಮುಖ್ಯಮಂತ್ರಿಗಳು ಸ್ಪೀಕರ್ ಪತ್ರಕ್ಕೆ ಸಹಿ ಹಾಕಿ ಕಚೇರಿ ಬಿಟ್ಟು ಕೊಡುವಂತೆ ನೀರಾವರಿ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳಿಗೆ ಸೂಚಿಸಿ ನೋಟ್ ಬರೆದಿದ್ದಾರೆ

Check Also

ನಮ್ಮೂರಲ್ಲಿ ಹಂಗೇನಿಲ್ಲ,ರಸ್ತೆಯ ಮೇಲೆ ಗಿಡ ಹಚ್ತಾರೇ….!!!

ಬೆಳಗಾವಿ-ಬೆಳಗಾವಿಯಲ್ಲಿ ನಡು ರಸ್ತೆಯಲ್ಲೇ ತೆಂಗಿನಮರ,ಬಾಳೆಗಿಡ ನೆಟ್ಟು ದಿಢೀರ್ ಪ್ರತಿಭಟನೆ ನಡೆಸುವ ಮೂಲಕ ಗ್ರಾಮಸ್ಥರು ತಮ್ಮ ಆಕ್ರೋಶವನ್ಬು ಹೊರಹಾಕಿದ ಘಟನೆ ಬೆಳಗಾವಿಯಲ್ಲಿ …

Leave a Reply

Your email address will not be published. Required fields are marked *

Sahifa Theme License is not validated, Go to the theme options page to validate the license, You need a single license for each domain name.