ಬೆಳಗಾವಿ- ಬೆಳಗಾವಿ ಜಿಲ್ಲೆ ಮತ್ತು ವಿಶೇಷವಾಗಿ ಬೆಳಗಾವಿ ತಾಲ್ಲೂಕಿನ ಕ್ವಾರಿಗಾಗಿ ಕೊರೆದ ಹೊಂಡಗಳು ಮೃತ್ಯುಕೂಪವಾಗಿವೆ ಕ್ವಾರಿ ತಗ್ಗಿನಲ್ಲಿ ಈಜಲು ಹೋದ ಮೂವರು ಬಾಲಕರು ನೀರು ಪಾಲಾದ ಹೃದಯ ವಿದ್ರಾವಕ ಘಟನೆ ಬೆಳಗಾವಿ ತಾಲ್ಲೂಕಿನ ಮನ್ನೂರ ಗ್ರಾಮದಲ್ಲಿ ನಡೆದಿದೆ
ಮನ್ನೂರ ಗ್ರಾಮದಲ್ಲಿ ಕ್ವಾರಿಯಲ್ಲಿ ಬೆನ್ನಿಗೆ ಖಾಲಿ ಪ್ಲಾಸ್ಟಿಕ ಡಬ್ಬಿ ಕಟ್ಟಿಕೊಂಡು ಈಜಲು ಹೊಂಡಕ್ಕಿಳಿದ ಮೂವರು ಬಾಲಕರು ಡಬ್ಬಿಯಲ್ಲಿ ನೀರು ತುಂಬಿಕೊಂಡ ಕಾರಣ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ ಘಟನೆ ನಡೆದಿದೆ
ಇಂದು ಮಧ್ಯಾಹ್ನ ಬಿಸಿಲಿನ ಧಗೆಯನ್ನು ಸಹಿಸಲಾಗದ ಈ ಮೂವರು ಬಾಲಕರು ನೀರಿನ ಹೊಂಡಕ್ಕಿಳ್ಳಿದು ಈಜಲು ಬಾರದೇ ಪರಸ್ಪರ ಅಪ್ಪಿಕೊಂಡು ಈಹಲೋಕ ತ್ಯೇಜಿಸಿದ್ದಾರೆ
ಮನ್ನೂರ ಗ್ರಾಮದ ೧೪ ವರ್ಷದ ಸಾಹಿಲ್ ಮನೋಹರ ಬಾಳೆಕುಂದ್ರಿ, 12ವರ್ಷದ ಕಲ್ಲಪ್ಪ ಭೂಷಣ ಚೌಗಲೆ,14 ವರ್ಷದ ಆಕಾಶ ಚೌಗಲೆ ಎಂಬಾತರು ಮೃತಪಟ್ಟ ದುರ್ದೈವಿಗಳಾಗಿದ್ದಾರೆ
ಇಂದು ಸಂಜೆ 4 ಘಂಟೆಗೆ ಈ ಘಟನೆ ನಡೆದಿದ್ದು ಮನ್ನೂರ ಗ್ರಾಮದಲ್ಲಿ ಸೂತಕದ ಛಾಯೆ ಆವರಿಸಿದೆ
ಬೆಳಗಾವಿ ಸುದ್ದಿ | Belagavi Suddi | Belagavi News ಸಮಸ್ಯಗೆ ಸ್ಪಂದನೆ