ಬೆಳಗಾವಿ- ಕುರಿ ಮೇಯಿಸಲು ಹೋದ ವೃದ್ಧ ಮಹಿಳೆಯನ್ನು ಕಲ್ಲಿನಿಂದ ಜಜ್ಜಿ ಕೊಲೆ ಮಾಡಿ ಕುರಿಗಳನ್ನು ಕಳುವು ಮಾಡಿದ ಹುಕ್ಕೇರಿ ತಾಲೂಕಿನ ಕುರಣೆ ಗ್ರಾಮದ ಆರೋಪಿಗೆ ಮುಖ್ಯ ಜಿಲ್ಲಾ ಸತ್ರ ನ್ಯಾಯಾಲಯ ಜೀವಾವಧಿ ಶಿಕ್ಷೆ ಹಾಗು ಐವತ್ತು ಸಾವಿರ ದಂಡ ವಿಧಿಸಿ ತೀರ್ಪು ನೀಡಿದೆ
70 ವರ್ಷದ ಯಮಕನಮರಡಿ ಗ್ರಾಮದ ಪ್ರಭಾವತಿ ಮಾರುತಿ ಸೂಜಿ ಎಂಬ ಮಹಿಳೆಯನ್ನು ಕಲ್ಲಿನಿಂದ ಜಜ್ಜಿ ಕೊಲೆ ಮಾಡಿದ ಆರೋಪಿ ಕುರುಣೆ ಗ್ರಾಮದ ಶಿವಪ್ಪ ಉರ್ಪ ಶಿವಾನಂದ ವಿಠ್ಠಲ ಹಿಟ್ಟಣಗಿ ನ್ಯಾಯಾಧೀಶ ಆರ್ ಜೆ ಸತೀಶ ಸಿಂಗ್ ಅವರು ಜೀವಾವಧಿ ಶಿಕ್ಷೆ ಹಾಗು ಐವತ್ತು ಸಾವಿರ ದಂಡ ವಿಧಿಸಿ ತೀರ್ಪು ನೀಡಿದ್ದಾರೆ
3-2-2014 ರಂದು ಪ್ರಭಾವತಿ ಸೂಜಿ ಎಂಬ ಮಹಿಳೆ ತನ್ನ ಕುರಿಗಳನ್ನು ಮೇಯಿಸಲು ಹೋದ ಸಂಧರ್ಭದಲ್ಲಿ ಆರೋಪಿ ಶಿವಪ್ಪ ಮಹಿಳೆಯ ಮೇಲೆ ದೊಣ್ಣೆಯಿಂದ ಹಲ್ಲೆ ಮಾಡಿ ಕಲ್ಲಿನಿಂದ ಜಜ್ಜಿ ಕೊಲೆ ಮಾಡಿ ಆರು ಕುರಿ ಮತ್ತು ಮಹಿಳೆಯ ಬೋರಮಾಳ ಮತ್ತು ಕಿವಿಯ ಆಭರಣ ದೋಚಿದ್ದ
ಪ್ರಕರಣ ದಾಖಲಿಸಿಕೊಂಡ ಯಮಕನಮರ್ಡಿ ಪೋಲೀಸರು ಸಂಕೇಶ್ವರದಲ್ಲಿ ಆರೋಪಿ ಶಿವಪ್ಪ ಕುರಿ ಮಾರಾಟ ಮಾಡುವಾಗ ಬಂಧಿಸಿ ಕೊಲೆ ಪ್ರಕರಣವನ್ನು ಪತ್ತೆ ಮಾಡಿ ಆರೋಪಿ ಶಿವಪ್ಪ ಉರ್ಫ ಶಿವಾನಂದನನ್ನು ನ್ಯಾಯಾಂಗ ವಶಕ್ಕೆ ಒಪ್ಪಿಸಿದ್ದರು
ವಿಚಾರಣೆ ನಡೆಸಿದ ಮುಖ್ಯ ಜಿಲ್ಲಾ ಸತ್ರ ನ್ಯಾಯಾಲಯ ಆರೋಪಿ ಶಿವಪ್ಪನಿಗೆ ಜೀವಾವಧಿ ಶಿಕ್ಷೆ ನೀಡಿದೆ
ಬೆಳಗಾವಿ ಸುದ್ದಿ | Belagavi Suddi | Belagavi News ಸಮಸ್ಯಗೆ ಸ್ಪಂದನೆ