Breaking News

ಮುಂದಿನ ತಿಂಗಳಿನಿಂದ ಮತದಾರ ಪಟ್ಟಿ ಪರಿಷ್ಕರಣೆ ವಿಶೇಷ ಅಭಿಯಾನ

ಬೆಳಗಾವಿ-

ಬೆಳಗಾವಿ ಜಿಲ್ಲೆಯಲ್ಲಿ ಮುಂದಿನ ತಿಂಗಳು ಜುಲೈ ಒಂದರಿಂದ ಮೂವತ್ತೊಂದರವರೆಗೆ ಮತದಾರರ ಪಟ್ಟಿ ಪರಿಷ್ಕರಣೆ ವಿಶೇಷ ಅಭಿಯಾನವನ್ನು ಚುನಾವಣಾ ಆಯೋಗ ಜಿಲ್ಲಾಡಳಿತದ ಮೂಲಕ ಹಮ್ಮಿಕೊಂಡಿದೆ ಎಂದು ಜಿಲ್ಲಾಧಿಕಾರಿ ಎನ್ ಜಯರಾಂ ತಿಳಿಸಿದರು
ಈ ವಿಶೇಷ ಅಭಿಯಾನದಲ್ಲಿ ೧೮ ರಿಂದ ೨೧ ವರ್ಷ ತುಂಬಿದ ಯುವಕ ಯುವತಿಯರು ಸಮಂಧಿಸಿದ ದಾಖಲೆಗಳೊಂದಿಗೆ ತಮ್ಮ ಹೆಸರನ್ನು ಮತದಾರ ಪಟ್ಟಿಯಲ್ಲಿ ನೊಂದಾಯಿಸಿ ಕೊಳ್ಳಬಹುದು
ಇದಗೋಸ್ಕರ ಜಿಲ್ಲೆಯಾದ್ಯಂತ ೪೦೪೦ ವಿಶೇಷ ಭೂತಗಳನ್ನು ತೆರೆಯಲಾಗುವದು ಪ್ರತಿ ಮತಗಟ್ಟೆಗೆ ಒಬ್ಬ ಅಧಿಕಾರಿಯನ್ನು ನಿಯೋಜನೆ ಮಾಡಲಾಗುತ್ತದೆ
ಜಿಲ್ಲೆಯ ಸಾರ್ವಜನಿಕರು ಈ ವಿಶೇಷ ಅಭಿಯಾನದಲ್ಲಿ ಪಾಲ್ಗೊಂಡು ಹೊಸದಾಗಿ ಹೆಸರು ಸೇರ್ಪಡೆ,ವರ್ಗಾವಣೆವಿಳಾಸ ಬದಲಾವಣೆ,ನಿಧನ ಹೊಂದಿದವರ ಹೆಸರು ತೆಗೆದು ಹಾಕುವದು,ಹೆಸರು ತಿದ್ದುಪಡಿ ಮಾಡುವದರ ಜೊತೆಗೆ ಇನ್ನಿತರ ಸೌಲಭ್ಯಗಳನ್ನು ಸಮಂಧಿಸಿದ ದಾಖಲೆಗಳನ್ನು ಒದಗಿಸಿ ವಿವಿಧ ಅರ್ಜಿ ನಮೂನೆಗಳ ಮೂಲಕ ಸದುಪಯೋಗ ಪಡಿಸಿಕೊಳ್ಳಲು ಜಿಲ್ಲಾಧಿಕಾರಿ ಎನ್ ಜಯರಾಂ ಮನವಿ ಮಾಡಿಕೊಂಡಿದ್ದಾರೆ
ಮುಂದಿನ ವರ್ಷವೇ ವಿಧಾನ ಸಭೆ ಚುನಾವಣೆ ಇರುವದರಿಂದ ಯಾವುದಾದರು ರಾಜಕೀಯ ಪಕ್ಷಗಳು ಅಥವಾ ವ್ಯೆಕ್ತಿಗಳು ಈ ಅಭಿಯಾನದ ದುರುಪಯೋಗ ಪಡಿಸಿಕೊಂಡರೆ ಅನಧಿಕೃತ ಹೆಸರುಗಳನ್ನು ಪಟ್ಟಿಯಲ್ಲಿ ಸೇರ್ಪಡೆ ಮಾಡಿಕೊಳ್ಳಲು ಪ್ರಯತ್ನ ಮಾಡಿದರೆ ಅವರ ವಿರುದ್ಧ ಶಿಸ್ತಿನ ಕ್ರಮ ಜರುಗಿದಲಾಗುವದು ಎಂದು ಜಿಲ್ಲಾಧಿಕಾರಿ ಗಳು ಎಚ್ಚರಿಕೆ ನೀಡಿದರು

Check Also

ಅವರು ಶುರು ಮಾಡಿದ್ದಾರೆ.ನೀವೂ ಅದನ್ನೇ ಮಾಡೋದು ಒಳ್ಳೆಯದು…!!!

ಬೆಂಗಳೂರು-ಕನ್ನಡ ಉಳಿಯಬೇಕು ಬೆಳೆಯಬೇಕು,ಡಾಕ್ಟರ್ ಬರೆದಿದ್ದು ರೋಗಿಗೆ ತಿಳಿಯಬೇಕು ತಪಾಸಣೆ ಮಾಡಿದ ಬಳಿಕ ಡಾಕ್ಟರ್ ಸಾಹೇಬ್ರು ಔಷಧಿ ಬರೆದು ಕೊಡ್ತಾರೆ ಅದು …

Leave a Reply

Your email address will not be published. Required fields are marked *

Sahifa Theme License is not validated, Go to the theme options page to validate the license, You need a single license for each domain name.