ಪೋಲೀಸರ ಬಲೆಗೆ ಬಿದ್ದ ಬೆಳಗಾವಿಯ ಫೇಸ್ ಬುಕ್ ರೋಮಿಯೋ…

ಬೆಳಗಾವಿ- ಫೇಸ್‌ಬುಕ್‌ ನಲ್ಲಿ ಯುವತಿಯ ಪರಿಚಯ ಮಾಡ್ಕೊಂಡು, ಆಕೆಯ ಜೊತೆ ಲವ್ವಿಡವ್ವಿ ನಾಟಕವಾಡಿದ ಬಳಿಕ ಕಾಮುಕ ಯುವಕ, ಯುವತಿಯನ್ನೆ ಬ್ಲ್ಯಾಕ್ ಮೇಲ್ ಮಾಡಲು ಮುಂದಾಗಿ ಈಗ ಪೊಲೀಸ ಅತಿಥಿಯಾದ ಘಟನೆ ಬೆಳಗಾವಿಯಲ್ಲಿ ನಡೆದಿದೆ. ಹೌದು ಬೆಳಗಾವಿ ತಾಲೂಕಿನ ಕೆ.ಕೆ.ಕೊಪ್ಪ ಗ್ರಾಮದ ಮಹೇಶ ಚಿಣ್ಣನ್ನವರ್ ಎಂಬಾತ ತನ್ನ ಜೊತೆ ತೆಗಿಸಿಕೊಂಡ ಪೋಟೋ ಇಟ್ಟುಕೊಂಡು ಹಣಕ್ಕಾಗಿ ಬ್ಲಾಕ್ ಮೇಲ್ ಮಾಡುತ್ತಿದ್ದ. ಹಣ ಕೊಡದೆ ಹೋದರೆ ಸಾಮಾಜಿಕ ಜಾಲತಾಣದಲ್ಲಿ ಪೋಟೋ ಹರಿ ಬಿಟ್ಟು ಮರ್ಯಾದೆ ಕಳಿಯುವುದಾಗಿ ಹೆದರಿಸುತ್ತಿದ್ದ. ಇಷ್ಟಕ್ಕೆ ಸುಮ್ಮನಾಗದ ಖದೀಮ ಯುವತಿಗೆ ಬೆತ್ತಲೆ ಪೋಟೋ ಕಳಿಸುವಂತೆ ಕೇಳಿದ್ದಾನೆ. ಇತನಿಗೆ ಹೇದರಿ ಎಲ್ಲಿ ನನ್ನ ಪೋಟೋ ಸಾಮಾಜಿಕ ಜಾಲತಾನದಲ್ಲಿ ಹರಿ ಬಿಟ್ಟಾನೆ ಎಂದು ತಿಳಿದ ಯುವತಿ ಬೆತ್ತಲೆ ಪೋಟೋ ಕಳಿಸಿದ್ದಾನೆ. ಇದನ್ನೆ ಬಂಡವಾಳ ಮಾಡಕೊಂಡ ದುಷ್ಕರ್ಮಿ ಯುವಕ ಮಹೇಶ ಚಿನ್ನನ್ನವರ್ ಹಣಕ್ಕಾಗಿ ಬೇಡಿಕೆ ಇಟ್ಟಿದ್ದಾನೆ. ಅಲ್ಲದೆ ಇತ ಮೊನ್ನೆಯಷ್ಟೇ ಬ್ಯಾಂಕ್ ಉದ್ಯೋಗಿಗೆ ಇದೇ ರೀತಿ ಲವ್ವಿಡವ್ವಿ ನಾಟಕವಾಡಿ ವಂಚಿಸಿದ್ದ ಪ್ರಕರಣದಲ್ಲಿ ಪೊಲೀಸರು ವಿಚಾರಣೆ ನಡೆಸಿ ಬಿಟ್ಟುಕಳಿಸಿದ್ದರು. ಇತನನ್ನು ಪೊಲೀಸರು ಠಾಣೆಗೆ ಕರೆದು ವಿಚಾರಣೆ ನಡೆಸಿದ್ದಾರೆ ಎಂದು ತಿಳಿದ ನೊಂದ ಯುವತಿ ಧೈರ್ಯ ಮಾಡಿ ಬೆಳಗಾವಿಯ ಮಾಳಮಾರುತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ‌ದಾಖಲಿಸಿದ್ದಾಳೆ. ತಕ್ಷಣ ಎಚ್ಚತ್ತ ಪೊಲೀಸರು ಮೊದಲಿನ ಪ್ರಕರಣದಲ್ಲಿ ಬಿಟ್ಟುಕಳಿಸಿದ ಒಂದು ದಿನದ ನಂತರ‌ ಮತ್ತೆ ಎತ್ತಾಕಿಕೊಂಡು ಬಂದು ಯುವತಿಗೆ ವಂಚನೆ . ಲೈಂಗಿಕ ಕಿರುಕುಳ ಪ್ರಕರಣ ದಾಖಲಿಸಿಕೊಂಡು ಬೆಳಗಾವಿ ಹಿಂಡಲಗಾ ಜೈಲಿಗೆ ರೊಟ್ಟಿಮುರಿಯಲು ಕಳಿಹಿಸಿದ್ದಾರೆ.

Check Also

ಅನಾಹುತ ಮಳೆಗೆ ಗೋಡೆ ಕುಸಿದು ಮಹಿಳೆ ಸಾವು

ಗೋಕಾಕ: ಗೋಕಾಕದ ಸಂಗಮ ನಗರದ ಫರೀದಾ ಎಂಬ ಮಹಿಳೆ ಗೋಡೆ ಕುಸಿದ ಪರಿಣಾಮ ಮೃತಪಟ್ಟಿದ್ದಾರೆ. ಇವರು ತಮ್ಮ ಮಗ ರಿಯಾಜ್ …

Leave a Reply

Your email address will not be published. Required fields are marked *