Breaking News

ಕಿತ್ತೂರ ಅಭಿವೃದ್ಧಿ ಪ್ರಾಧಿಕಾರಕ್ಕೆ ಐದು ಕೋಟಿ ರೂ ಪ್ರಸ್ತಾವನೆ- ಜಾರಕಿಹೊಳಿ

ಬೆಳಗಾವಿ:

ಸ್ವಾಭಿಮಾನದ ಸಂಕೇತವಾದ ಐತಿಹಾಸಿಕ ಕಿತ್ತೂರು ಉತ್ಸವವನ್ನು ವಿಜೃಂಭಣೆಯಿಂದ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಅರ್ಥಪೂರ್ಣವಾಗಿ ಆಚರಿಸಲು ಸಿದ್ದತೆ ಮಾಡಿಕೊಳ್ಳಬೇಕೆಂದು ಜಿಲ್ಲಾ ಉಸ್ತುವಾರಿ ಹಾಗೂ ಸಹಕಾರ ಸಚಿವರಾದ ರಮೇಶ ಜಾರಕಿಹೊಳಿ ಅವರು ಹೇಳಿದರು. ಅವರು ಇಂದು ಮಧ್ಯಾಹ್ನ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಜರುಗಿದ್ದ, ಕಿತ್ತೂರು ಉತ್ಸವ-2017ರ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಕಿತ್ತೂರು ಉತ್ಸವವನ್ನು ಮಾದರಿಗೊಳಿಸಲು ಸರ್ಕಾರಕ್ಕೆ ಕಿತ್ತೂರು ಅಭಿವೃದ್ಧಿ ಪ್ರಾಧಿಕಾರದಿಂದ 5ಕೋಟಿ ರೂ.ಗಳ ಪ್ರಸ್ತಾವನೆಯನ್ನು ಸಲ್ಲಿಸಲಾಗಿದೆ. ಪ್ರತಿ ವರ್ಷದಂತೆ ಕಿತ್ತೂರು ಉತ್ಸವ ಆಯೋಜಿಸಲು ಸರ್ಕಾರ ಈಗಾಗಲೇ 30 ಲಕ್ಷ ರೂ.ಗಳನ್ನು ಬಿಡುಗಡೆ ಮಾಡಿದೆ. ಇನ್ನು ಹೆಚ್ಚಿನ ಅನುದಾನಕ್ಕಾಗಿ ಸರ್ಕಾರಕ್ಕೆ ಬೇಡಿಕೆ ಸಲ್ಲಿಸಲಾಗಿದೆ. ಅಧಿಕಾರಿಗಳು ಸ್ಥಳೀಯ ಜನಪ್ರತಿನಿಧಿಗಳನ್ನು, ಮುಖಂಡರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕಾರ್ಯಕ್ರಮದ ರೂಪರೇಶಗಳನ್ನು ಮಾಡಬೇಕು. ಶಿಷ್ಟಾಚಾರದ ಪ್ರಕಾರ ಉತ್ಸವವನ್ನು ಆಯೋಜಿಸಬೇಕು.ಉತ್ಸವದಲ್ಲಿ ಸ್ಥಳೀಯ ಕಲಾವಿದರಿಗೆ ಆದ್ಯತೆ ನೀಡಬೇಕೆಂದು ಅವರು ತಿಳಿಸಿದರು.

ಈ ಸಲದ ಕಿತ್ತೂರು ಉತ್ಸವದ ಉದ್ಘಾಟನೆಗೆ ಮುಖ್ಯಮಂತ್ರಿಗಳನ್ನು ಆಹ್ವಾನಿಸಲು ನಿರ್ಧರಿಸಿದ್ದು, ಶೀಘ್ರದಲ್ಲೇ ಮುಖ್ಯಮಂತ್ರಿಗಳನ್ನು ಬೇಟಿಯಾಗಿ ಈ ಕುರಿತು ಮನವಿ ಸಲ್ಲಿಸಲಾಗುವುದು ಎಂದು ಅವರು ತಿಳಿಸಿದರು.

ಉತ್ಸವದ ಅಂಗವಾಗಿ ಆಯೋಜಿಸುವ ಭವ್ಯ ಚನ್ನಮ್ಮ ವಿಜಯಜ್ಯೋತಿಯ ಮೆರವಣಿಗೆ, ನಾಡಿನ ಸಂಸ್ಕøತಿಯನ್ನು ಬಿಂಬಿಸುವ ಸಾಂಸ್ಕøತಿಕ ಜಾನಪದ ಕಲಾವಾಹಿನಿಗಳ ಸಂಭ್ರಮ ಮತ್ತು ವಸ್ತು ಪ್ರದರ್ಶನ ಮಳಿಗೆ ಸೇರಿದಂತೆ ಸರ್ಕಾರದ ಜನ ಕಲ್ಯಾಣ ಮಾಹಿತಿಯುಳ್ಳ ಮಳಿಗೆಗಳನ್ನು ಸುಸಜ್ಜಿತವಾಗಿ ಆಯೋಜಿಸಬೇಕೆಂದು ಇದೇ ಸಂದರ್ಭದಲ್ಲಿ ಅವರು ಅಧಿಕಾರಿಗಳಿಗೆ ಸೂಚಿಸಿದರು.

ಮುಂದಿನ ಎರಡು ಮೂರು ದಿನಗಳಲ್ಲಿ ಉತ್ಸವದ ಪೂರ್ಣ ಕಾರ್ಯಕ್ರಮಗಳ ಕುರಿತು ಕಿತ್ತೂರು ಭಾಗದ ಸ್ಥಳೀಯ ಜನಪ್ರತಿನಿಧಿಗಳನ್ನು ಸೇರಿಸಿ ಸಭೆ ಜರುಗಿಸುವಂತೆ ಬೈಲಹೊಂಗಲ ಉಪವಿಭಾಗಾಧಿಕಾರಿಗಳಿಗೆ ಸಚಿವರು ಸೂಚಿಸಿದರು.

ಜಿಲ್ಲಾಧಿಕಾರಿ ಜಿಯಾವುಲ್ಲಾ ಎಸ್ ಮಾತನಾಡಿ, ಉತ್ಸವದ ಸಂದರ್ಭದಲ್ಲಿ ಪಟ್ಟಣದ ಸ್ವಚ್ಛತೆಗೆ ಆಧ್ಯತೆ ನೀಡಬೇಕು. ರಸ್ತೆ ದುರಸ್ಥಿ ಕಾರ್ಯವನ್ನು ಕೈಗೊಳ್ಳಬೇಕೆಂದು. ಮತ್ತು ಪ್ರಾಧಿಕಾರದ ಅನುದಾನವನ್ನು ಅಭಿವೃದ್ಧಿ ಕಾಮಗಾರಿಗಳಿಗೆ ಬಳಸಿಕೊಳ್ಳಲು ಸೂಚಿಸಿದರು.

ಅಪರ ಜಿಲ್ಲಾಧಿಕಾರಿ ಸುರೇಶ ಇಟ್ನಾಳ ಅವರು ಕಿತ್ತೂರು ಉತ್ಸವದಲ್ಲಿ ಸಂಘಟಿಸುವ ವಿವಿಧ ಕಾರ್ಯಕ್ರಮ ಹಾಗೂ ಉಪ ಸಮಿತಿಗಳ ಕಾರ್ಯಗಳ ಕುರಿತು ಸಭೆಗೆ ವಿವರಿಸಿದರು. ಸಭೆಯಲ್ಲಿ ವಿಧಾನ ಪರಿಷತ್ ಸದಸ್ಯರಾದ ವಿವೇಕರಾವ ಪಾಟೀಲ, ಜಿಲ್ಲಾಧಿಕಾರಿ ಜಿಯಾವುಲ್ಲಾ ಎಸ್, ಬೈಲಹೊಂಗಲ ತಾಲೂಕಾ ಪಂಚಾಯತ ಅಧ್ಯಕ್ಷರಾದ ಶ್ರೀಮತಿ ಶೈಲಾ ಸಿದ್ರಾಮನಿ, ಕಿತ್ತೂರು ಪಟ್ಟಣ ಪಂಚಾಯತ ಅಧ್ಯಕ್ಷ ಮಹ್ಮದ ಹನಿಫ್ ಸುತಗಟ್ಟಿ ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು, ಜನಪ್ರತಿನಿಧಿಗಳು ಮತ್ತು ನಾಗರಿಕ ಸದಸ್ಯರು ಉಪಸ್ಥಿತರಿದ್ದರು.

Check Also

ಬೆಳಗಾವಿ- ಗೋಕಾಕ್ ರಸ್ತೆಯಲ್ಲಿ ಪೋಲೀಸರಿಗೆ ಸಿಕ್ಕಿದ್ದೇನು ಗೊತ್ತಾ.?

ಬೆಳಗಾವಿ- ಬೆಳಗಾವಿ- ಗೋಕಾಕ್ ರಸ್ತೆಯಲ್ಲಿ ಬೆಳಗಾವಿಗೆ ಸಾಗಿಸಲಾಗುತ್ತಿದ್ದ ಗಾಂಜಾ ,ಬೆಳಗಾವಿಯ ಸಿಇಎನ್ ಸೈಬರ್ ಕ್ರೈಂ ಪೋಲೀಸರು ವಶಪಡಿಸಿಕೊಂಡಿದ್ದಾರೆ. ಬೆಳಗಾವಿ ನಗರದ …

Leave a Reply

Your email address will not be published. Required fields are marked *

Sahifa Theme License is not validated, Go to the theme options page to validate the license, You need a single license for each domain name.