ಬೆಳಗಾವಿ- ಬೆಳಗಾವಿಯ ಗಾಲ್ಫ್ ಮೈದಾನದಲ್ಲಿ ಚಿರತೆ ಮನೆ ಮಾಡಿ ಎರಡು ವಾರಗಳು ಕಳೆದಿವೆ,ಈ ಚಿರತೆ ಆಗೊಮ್ಮೆ ,ಈಗೊಮ್ಮೆ ಬೆಳಗಾವಿ ಜನತೆಗೆ ಕಾಣಿಸಿಕೊಳ್ಳುತ್ತಲೇ ಇದೆ.
ನಿನ್ನೆ ರಾತ್ರಿ ಹನ್ನೆರಡು ಗಂಟೆ ಸುಮಾರಿಗೆ ಬೆಳಗಾವಿ- ಹಿಂಡಲಗಾ ರಸ್ತೆಯ ಕ್ಯಾಂಪ್ ಪ್ರದೇಶದ ಮಹಾತ್ಮಾ ಗಾಂಧಿ ಸರ್ಕಲ್ ನಲ್ಲಿ ಈ ಚಿರತೆ,ಹಿಂಡಲಗಾ ಗ್ರಾಮದ ಅಜಯ ಮಾಸ್ತಿ ಎಂಬುವವರಿಗೆ ಪ್ರತ್ಯಕ್ಷವಾಗಿದ್ದು, ಬೆಳಗಾವಿ – ಹಿಂಡಲಾ ರಸ್ತೆಯಲ್ಲಿ ಈಗ ಚಿರತೆ ಆತಂಕ ಶುರುವಾಗಿದೆ.
ಕಾರಿನಲ್ಲಿ ಈ ರಸ್ತೆಯ ಮೂಲಕ ಸಂಚರಿಸುವಾಗ ಅಜಯ ಮಾಸ್ತಿ ಅವರಿಗೆ ಮಹಾತ್ಮಾ ಗಾಂಧಿ ಸರ್ಕಲ್ ಬಳಿ ಚಿರತೆ ಕಾಣಿಸಿಕೊಂಡಿದೆ. ಕಾರಿನ ಸದ್ದು ಕೇಳಿದಾಕ್ಷಣ ಈ ಚಿರತೆ ಪಕ್ಕದ ಕಂಪೌಂಡ್ ಗೆ ಜಂಪ್ ಮಾಡಿದೆ.ಎಂದು ಹಿಂಡಲಗಾ ಗ್ರಾಮದ ಅಜಯ ಮಾಸ್ತಿ ಬೆಳಗಾವಿ ಸುದ್ದಿ ಡಾಟ್ ಕಾಮ್ ಗೆ ಮಾಹಿತಿ ನೀಡಿದ್ದಾರೆ.
ಚಿರತೆ ಕಂಡು ಹೆದರಿದ ಅಜಯ ಮಾಸ್ತಿ ಚಿರತೆ ಜಂಪ್ ಮಾಡಿದ ವಿಚಾರವನ್ನು ಹಿಂಡಲಗಾ ಗಣಪತಿ ಮಂದಿರದ ಬಳಿ ಕರ್ತವ್ಯನಿರತ ಪೋಲೀಸರಿಗೆ ಮಾಹಿತಿ ನೀಡಿದ್ದಾರೆ.
ದಿನದಿಂದ ದಿನಕ್ಕೆ ಬೆಳಗಾವಿಯಲ್ಲಿ ಚಿರತೆ ಆತಂಕ ಹೆಚ್ಚಾಗುತ್ತಲೇ ಇದೆ.ಅರಣ್ಯ ಇಲಾಖೆಯ ಅಧಿಕಾರಿಗಳು ಹಿಂಡಲಗಾ ರಸ್ತೆಯಲ್ಲಿರುವ ಮಹಾತ್ಮಾ ಗಾಂಧಿ ಸರ್ಕಲ್ ನಲ್ಲಿ ಅಳವಡಿಸಿರುವ ಸಿಸಿ ಟಿವ್ಹಿ ಪೋಟೇಜ್ ಗಮನಿಸಿ ಚಿರತೆಯ ಚಲನವಲನಗಳ ಬಗ್ಗೆ ನಿಗಾ ಇಡವದು ಸೂಕ್ತ.
ಈ ಸುದ್ದಿಯಲ್ಲಿ ಬಳಿಸಿರುವ ಚಿರತೆಯ ಚಿತ್ರ ಸಾಂಧರ್ಭಿಕ ಚಿತ್ರ.