ಬೆಳಗಾವಿ:ತೋಟಗಾರಿಕಾ ಇಲಾಖೆ, ಜಿಲ್ಲಾಡಳಿತ ಮತ್ತು ದ್ರಾಕ್ಷಾರಸ ಮಂಡಳಿ ವತಿಯಿಂದ ಬೆಳಗಾವಿ ದ್ರಾಕ್ಷಾರಸ ಉತ್ಸವ ಅಕ್ಟೋಬರ್ ೨೧ ರಿಂದ ೨೩ರವರೆಗೆ ಮೂರು ದಿನ ನಗರದ ಮಿಲೇನಿಯಂ ಉದ್ಯಾನದಲ್ಲಿ ನಡೆಯಲಿದೆ.
ಸುದ್ದಿಗೋಷ್ಠಿ ಯಲ್ಲಿ ವಿಷಯ ತಿಳಿಸಿದ ದ್ರಾಕ್ಷಾರಸ ಮಂಡಳಿ ವ್ಯವಸ್ಥಾಪಕ ನಿರ್ದೇಶಕ ಟಿ. ಸೋಮು ಆರೋಗ್ಯಕರ ಪೇಯ ವೈನ್ ಬಳಕೆ ಉತ್ತೇಜಿಸುವ ದೃಷ್ಟಿಯಿಂದ, ವೈನ್ ದ್ರಾಕ್ಷಿ ಬೆಳೆಗಾರರ ಅಭಿವೃದ್ಧಿ ಗಾಗಿ ಮತ್ತು ಸಾರ್ವಜನಿಕ ರಿಗೆ ಉದ್ಯಮದ ಬಗ್ಗೆ ತಿಳಿವಳಿಕೆ ನೀಡಲು ನಗರದಲ್ಲಿ ಸತತ ಮೂರನೇ ಬಾರಿ ಉತ್ಸವ ಆಯೋಜಿಸಲಾಗುತ್ತಿದೆ ಎಂದರು.
ಅ. ೨೧ರ ಸಂಜೆ ೪:೩೦ಕ್ಕೆ ತೋಟಗಾರಿಕೆ ಸಚಿವ ಎಸ್. ಎಸ್. ಮಲ್ಲಿಕಾರ್ಜುನ ದ್ರಾಕ್ಷಾ ಉತ್ಸವ ಉದ್ಘಾಟಿಸಲಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ ಮಳಿಗೆಗಳನ್ನು ಉದ್ಘಾಟಿಸಲಿದ್ದಾರೆ. ಶಾಸಕ ಸಂಭಾಜಿ ಪಾಟೀಲ ಅಧ್ಯಕ್ಷತೆ ವಹಿಸಲಿದ್ದಾರೆ. ಎಲ್ಲ ವೈನ್ ಬ್ರಾಂಡ್ ಗಳ ಮೇಲೆ ಗ್ರಾಹಕರಿಗೆ ಶೇ. ೧೦ ರಷ್ಟು ರಿಯಾಯಿತಿ ನೀಡಲಾಗುವುದು. ಅ. ೨೨ ರಂದು ಸಂಜೆ ೬:೩೦ಕ್ಕೆ ಗೋವಾದ ಬ್ರದರ್ ಇನ್ ಆರ್ಮ್ಸ ಅವರಿಂದ ಸಾರ್ವಜನಿಕರಿಗೆ ಸಂಗೀತ ಕಾರ್ಯಕ್ರಮ ನಡೆಯಲಿದೆ. ಸುಮಾರು ೧೫೦ ಕ್ಕೂ ಹೆಚ್ಚು ಬ್ರಾಂಡ್ ಗಳ ಪ್ರದರ್ಶನ ನಡೆಯಲಿದೆ. ೧೦ಕ್ಕೂ ಹೆಚ್ಚು ಪ್ರಸಿದ್ಧ ವೈನ್ ಕಂಪನಿಗಳು ಭಾಗವಹಿಸಲಿವೆ. ಮುಂದಿನ ವರ್ಷ ಬೆಳಗಾವಿಯಲ್ಲಿ ಅಂತಾರಾಷ್ಟ್ರೀಯ ವಆಯೋಜಿಸಲು ಆಯೋಜಿಸಲು ಮಂಡಳಿ ನಿರ್ಧರಿಸಿದೆ. ಮಂಡಳಿ ಸುಮಾರು ೨೦೦ ಕೋಟಿ ಆದಾಯ ಹೊಂದಿದೆ. ಕಳೆ ಬಾರಿ ಬೆಳಗಾವಿಯಲ್ಲಿ ೨೫ ಲಕ್ಷ ವಹಿವಾಟು ಆಗಿದ್ದು ಈ ಬಾರಿ ೩೦ ಲಕ್ಷ ವಹಿವಾಟು ಗುರಿ ಹೊಂದಲಾಗಿದೆ. ಬೆಳಗಾವಿಯಲ್ಲಿ ವೈನ್ ಮೇಳಕ್ಕೆ ಉತ್ತಮ ಪ್ರತಿಕ್ರಿಯೆ ಇದೆ ಎಂದರು.