ಬೆಳಗಾವಿ- ಇತ್ತೀಚಿಗೆ ಟ್ಯುಶನ್ ಮುಗಿಸಿ ಮನೆಗೆ ಹೋಗುತ್ತಿದ್ದ ಬಾಲಕಿಯನ್ನು ಕಿಡ್ನಾಪ್ ಮಾಡಲು ಯತ್ನಿಸಿದ ಘಟನೆ ಬೆಳಗಾವಿಯ ಹಿಂದವಾಡಿಯ ಮಹಾವೀರ ಗಾರ್ಡನ್ ಬಳಿ ನಡೆದಿದೆ.
ಬಾಲಕಿಯನ್ನು ಹಿಂಬಾಲಿಸಿದ ಅನಾಮಿಕನೊಬ್ಬ ನಿನ್ನ ತಾಯಿಯ ಕಿಡ್ನಾಪ್ ಆಗಿದೆ ನಿನ್ನನ್ನು ಮನೆಗೆ ಬಿಡುವೆ ಎಂದು ಬಾಲಕಿಯನ್ನು ಎತ್ತಾಕಿಕೊಂಡು ಹೋಗುತ್ತಿರುವಾಗ ಬಾಲಕಿ ಕಿರುಚಾಡಿ,ರಂಪ ಮಾಡಿದಾಗ ಅಲ್ಲಿ ಜನ ಸೇರಿದ್ದಾರೆ,ಜನ ಸೇರುತ್ತಿರುವದನ್ನು ಗಮನಿಸಿದ ಅನಾಮಿಕ ಅಲ್ಲಿಂದ ಪರಾರಿಯಾಗಿದ್ದಾನೆ.ಈ ಕುರಿತು ಬಾಲಕಿಯ ಪೋಷಕರು ಬೆಳಗಾವಿಯ ತಿಲಕವಾಡಿ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಹಾಡಹಗಲೇ ಬಾಲಕಿ ಕಿಡ್ನಾಪ್‌ಗೆ ಯತ್ನಿಸಿದ ಪ್ರಕರಣವನ್ನು ಪೋಲೀಸರು ಗಂಭೀರವಾಗಿ ಪರಗಣಿಸಿದ್ದಾರೆ.
ಉತ್ತರ ವಲಯ ಐಜಿಪಿ ವಿಕಾಸ್ ಕುಮಾರ್ ಈ ಕುರಿತು ಮಾದ್ಯಮಗಳಿಗೆ ಹೇಳಿಕೆ ನೀಡಿದ್ದಾರೆ.
ಟಿಳಕವಾಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕಿಡ್ನಾಪ್‌ಗೆ ಯತ್ನ ಘಟನೆ ನಡೆದಿದೆ.ಹತ್ತು ವರ್ಷದ ಬಾಲಕಿಗೆ ಕಿಡ್ನಾಪ್ ಮಾಡುವ ಘಟನೆ ನಡೆದಿದೆ.ಆ ಬಾಲಕಿ ವಿರೋಧಿಸಿ, ಕಿರುಚಾಡಿದ್ದರಿಂದ ಆರೋಪಿ ಓಡಿ ಹೋಗಿದ್ದಾನೆ.ಈ ಸಂಬಂಧ ಟಿಳಕವಾಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಈಗಾಗಲೇ ಒಂದು ಟೀಮ್ ಮಾಡಿ ಆರೋಪಿ ಶೋಧ ಮಾಡುತ್ತಿದ್ದೇವೆ ಎಂದು ಐಜಿಪಿ ಹೇಳಿದ್ದಾರೆ.
ಆರೋಪಿಯ ಸುಳಿವು ಸಿಕ್ಕಿದ್ದು ಶೀಘ್ರದಲ್ಲೇ ಬಂಧಿಸುತ್ತೇವೆ.ಎಂದು ಐಜಿಪಿ ತಿಳಿಸಿದ್ದಾರೆ.
ಬೆಳಗಾವಿ ಸುದ್ದಿ | Belagavi Suddi | Belagavi News ಸಮಸ್ಯಗೆ ಸ್ಪಂದನೆ