ಬೆಳಗಾವಿ- ಮಹಾರಾಷ್ಡ್ರದ ಪ್ರಸಿದ್ದ ಪಂಡರಪೂರ ವಿಠ್ಠಲನ ದರ್ಶನ ಪಡೆದು ಮರಳುತ್ತಿರುವಾಗ ಬೆಳಗಾವಿಯ ಭಕ್ತರ ಮೇಲೆ ಮಹಾರಾಷ್ಟ್ರದ ಪುಂಡರು ಹಲ್ಕೆ ನಡೆಸಿದ್ದು ಮೂವರು ಜನ ಗಾಯಗೊಂಡ ಘಟನೆ ತಡರಾತ್ರಿ ನಡೆದಿದೆ.
ಬೆಳಗಾವಿಯ ಭಕ್ತರು ಲಾರಿಯಲ್ಲಿ ಪಂಢರಪುರಕ್ಕೆ ಹೋಗಿದ್ದರು. ದರ್ಶನ ಪಡೆದು ಬೆಳಗಾವಿಗೆ ವಾಪಸ್ ಬರುವಾಗ ಇವರು ದಾರಿ ತಪ್ಪಿ ಅನ್ಯ ಮಾರ್ಗದಿಂದ ಬಂದಿದ್ದಾರೆ ಅಲ್ಲಿಯ ಗ್ರಾಮವೊಂದರಲ್ಲಿ ರಸ್ತೆಯ ಮೇಲೆ ಕಾರು ನಿಂತಿದೆ.ದಾರಿ ಚಿಕ್ಕದಾಗಿರುವದರಿಂದ ಕಾರು ತೆಗೆಯುವಂತೆ ಲಾರಿ ಚಾಲಕ ಮನವಿ ಮಾಡಿಕೊಂಡಿದ್ದಾನೆ ಈ ಸಂಧರ್ಭದಲ್ಲಿ ಲಾರಿ ಚಾಲಕ ಮತ್ತು ಕಾರಿನಲ್ಲಿ ಇದ್ದವರ ಜೊತೆ ಮಾತಿನ ಚಕಮಕಿ ನಡೆದಿದೆ. ಹೇಗಾದ್ರು ಮಾಡಿ ಲಾರಿ ಅಲ್ಲಿಂದ ಪಾಸ್ ಆಗಿದೆ.ನಂತರ ಕಾರಿನಲ್ಲಿದ್ದವರು ಲಾರಿಯನ್ನು ಫಾಲೋ ಮಾಡಿ ಲಾರಿಯನ್ನು ನಿಲ್ಲಿಸಿ ಲಾರಿ ಚಾಲಕನ ಮೇಲೆ ಕಾರಿನಲ್ಲಿದ್ದ ಮಹಾರಾಷ್ಟ್ರದ ಪುಂಡರು ಹಲ್ಲೆ ಮಾಡಿದ್ದಾರೆ. ಈ ಸಂಧರ್ಭದಲ್ಲಿ ನಡೆದ ಮಾರಾಮಾರಿಯಲ್ಲಿ ಬೆಳಗಾವಿಯ ಮೂವರು ಜನ ಭಕ್ತರು ಗಾಯಗೊಂಡಿದ್ದಾನೆ.
ಲಾರಿ ಚಾಲಕನ ಮೇಲೆ ಮಹಾರಾಷ್ಟ್ರದ ಪುಂಡರು ಹಲ್ಲೆ ಮಾಡುವಾಗ ಜಗಳ ಬಿಡಿಸಲು ಹೋದ ಬೆಳಗಾವಿಯ ಎಂಇಎಸ್ ನಾಯಕನೊಬ್ಬನೂ ಗಾಯಗೊಂಡಿದ್ದಾನೆ. ಇಬ್ಬರು ಚಿಕಿತ್ಸೆ ಪಡೆದು ಬೆಳಗಾವಿಗೆ ವಾಪಸ್ ಆಗಿದ್ದಾರೆ. ಓರ್ವ ಮಹಾರಾಷ್ಡ್ರದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು.ಮಹಾರಾಷ್ಟ್ರದಲ್ಲಿ ಪುಂಡರ ವಿರುದ್ಧ ಕೇಸ್ ದಾಖಲಾಗಿದೆ.