ಮೃತದೇಹವನ್ನು ಪೀಸ್ ಪೀಸ್ ಮಾಡಿ ಕತ್ತರಿಸಿರುವ ಕ್ರೂರಿಗಳು..!!

ಚಿಕ್ಕೋಡಿ-ಹಿರೇಕೋಡಿಯ ಜೈನಮುನಿ ಕಾಮಕುಮಾರ ನಂದಿ ಮಹಾರಾಜರ ಹತ್ಯೆ ಕೇಸ್ ರಹಸ್ಯ ಬಯಲಾಗಿದೆ.ಜೈನಮುನಿ ಕಾಮಕುಮಾರ ನಂದಿ ಮಹಾರಾಜರ ಮೃತದೇಹದ 9 ಭಾಗಗಳನ್ನ ಕೊಳವೆಬಾವಿಯಿಂದ ಹೊರ ತೆಗೆಯಲಾಗಿದೆ.

ಎರಡು ಕೈ, ಎರಡು ಕಾಲು, ಎರಡು ಭಾಗ ತೊಡೆ, ತಲೆಯ ಎರಡು ಭಾಗ, ಹೊಟ್ಟೆ ಪ್ರತ್ಯೇಕವಾಗಿ ಕತ್ತರಿಸಿರುವ ಕ್ರೂರಿಗಳು,ಜೈನಮುನಿಗಳ ಹತ್ಯೆಗೈದು ಮೃತದೇಹ ಪೀಸ್ ಪೀಸ್ ಮಾಡಿ ಹಂತಕರು ಕೊಳವೆಬಾವಿಗೆ ಎಸೆದಿದ್ದರು.

ಖಟಕಬಾವಿ ಗ್ರಾಮದ ಗದ್ದೆಯಲ್ಲಿರುವ 400 ಅಡಿ ಆಳದ ಕೊಳವೆಬಾವಿಗೆ ಎಸೆದಿದ್ದ ಹಂತಕರು ಸಾಕ್ಷ್ಯ ನಾಶಕ್ಕೆ ಯತ್ನಿಸಿದ್ದರು.ಕೊಳವೆಬಾವಿಯ 25ನೇ ಅಡಿ ಆಳಕ್ಕೆ ರಕ್ತಸಿಕ್ತ ಸೀರೆ, ಟವೆಲ್ ಮೊದಲು ಪತ್ತೆಯಾಗಿದೆ.
ಕೊಳವೆಬಾವಿಯ 30ಅಡಿ ಆಳದಲ್ಲಿ ದೇಹದ 9 ಭಾಗಗಳು ಪತ್ತೆಯಾಗಿವೆ.

ಜೈನಮುನಿಗಳ ಮೃತದೇಹ ಬೆಳಗಾವಿಗೆ ರವಾನೆ

ಹತ್ಯೆಯಾದ ಜೈನಮುನಿಗಳ ಮೃತದೇಹವನ್ನುಖಟಕಬಾವಿಯಿಂದ ಬೆಳಗಾವಿ ಜಿಲ್ಲಾಸ್ಪತ್ರೆಗೆ ರವಾನೆ ಮಾಡಲಾಗಿದೆ.ಬೆಳಗಾವಿ ಜಿಲ್ಲಾಸ್ಪತ್ರೆಯಲ್ಲಿ ಇಂದು ಮರಣೋತ್ತರ ಪರೀಕ್ಷೆ ನಡೆಯಲಿದೆ.ನಾಳೆ ಹಿರೇಕೋಡಿಯ ನಂದಿಪರ್ವತ ಆಶ್ರಮದಲ್ಲಿ ಅಂತ್ಯಕ್ರಿಯೆ ನೆರವೇರಿಸಲು ಭಕ್ತಾದಿಗಳ ನಿರ್ಧಾರ ಮಾಡಿದ್ದಾರೆ.

ಮೃತದೇಹ ಪತ್ತೆಯಾದ ಬಳಿಕ SP ಹೇಳಿದ್ದು.

ಶುಕ್ರವಾರ ಮಧ್ಯಾಹ್ನ ದೂರು ಸ್ವೀಕರಿಸಿ ಚಿಕ್ಕೋಡಿ ಪೊಲೀಸರು ತನಿಖೆ ಆರಂಭಿಸಿದ್ದರು.ತನಿಖೆ ವೇಳೆ ಸಿಕ್ಕ ಸಾಕ್ಷ್ಯಾಧಾರ ಪಡೆದುಕೊಂಡು ಮಾಹಿತಿ ಕಲೆ ಹಾಕಿದ್ವಿ.ಸ್ವಾಮೀಜಿ ಜೊತೆ ಪರಿಚಯ ಇದ್ದ ವ್ಯಕ್ತಿ ಅದೇ ರಾತ್ರಿ ಭೇಟಿಯಾಗಲು ಬಂದಿದ್ದ ಮಾಹಿತಿ ಇತ್ತು,ಬಳಿಕ ವಿಚಾರಣೆ ನಡೆಸಿದಾಗ ಅದೇ ವ್ಯಕ್ತಿ ಕೊಲೆ ಮಾಡಿದ ಮಾಹಿತಿ ಬಂತು.ನಾಪತ್ತೆ ಪ್ರಕರಣ ಕೊಲೆ ಪ್ರಕರಣವಾಯಿತು.ಆರೋಪಿ ತೋರಿಸಿದ ಜಾಗದ ಮೇರೆಗೆ ಪರಿಣಿತರ ತಂಡದಿಂದ ಶೋಧಕಾರ್ಯ ನಡೆಸಿದ್ದೇವೆ.ಪೂಜ್ಯರ ಪಾರ್ಥಿವ ಶರೀರ ಹೊರತಗೆಯಲು ಸಫಲರಾಗಿದ್ದೇವೆ.ಸದ್ಯ ಸ್ವಾಮೀಜಿಗಳ ಪಾರ್ಥಿವ ಶರೀರ ಶವಪರೀಕ್ಷೆಗೆ ರವಾನಿಸಲಾಗಿದೆ.ಈ ಕೃತ್ಯಕ್ಕೆ ಕಾರಣವೇನು ಎಂಬ ಬಗ್ಗೆ ತನಿಖೆ ನಡೆಸಲಾಗುವುದು ಎಂದು ಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಿ ಸಂಜೀವ ಪಾಟೀಲ ಹೇಳಿದ್ರು.

ಮೃತದೇಹ ಶೋಧ ಕಾರ್ಯಾಚರಣೆ, ಭದ್ರತೆಗೆ 500 ಕ್ಕೂ ಹೆಚ್ಚು ಸಿಬ್ಬಂದಿ ನಿಯೋಜಿಸಲಾಗಿತ್ತು‌.ಬೆಳಗಾವಿ ಉತ್ತರ ವಲಯದ ಹುಬ್ಬಳ್ಳಿ, ಧಾರವಾಡ ನಗರ, ಉತ್ತರ ಕನ್ನಡ ಜಿಲ್ಲೆಯಿಂದ ಸಿಬ್ಬಂದಿ ಬಂದಿದ್ರು,ಎಸ್‌ಡಿಆರ್‌ಎಫ್, ಎಫ್‌ಎಸ್‌ಎಲ್, ನಮ್ಮ ಸ್ಥಳೀಯ ಆರೋಗ್ಯ ಇಲಾಖೆ ವೈದ್ಯರು ಸಹಕಾರ ನೀಡಿದ್ದಾರೆ.ಇಬ್ಬರು ಆರೋಪಿಗಳನ್ನು ಬಂಧಿಸಿದ್ದೇವೆ.30 ಅಡಿ ಆಳದಲ್ಲಿ ಸ್ವಾಮೀಜಿ ಪಾರ್ಥಿವ ಶರೀರ ದೊರೆತಿದೆ.ಆರೋಪಿಗಳ ಹೆಸರು ಬಹಿರಂಗ ಪಡಿಸಲು ಬೆಳಗಾವಿ ಎಸ್‌ಪಿ ನಿರಾಕರಿಸಿದರು.

Check Also

ನಿಶ್ಚಿತವಾಗಿದ್ದ ಮದುವೆ ರದ್ದು ಯುವಕನ ಆತ್ಮಹತ್ಯೆ

ಬೆಳಗಾವಿ-ನಿಶ್ಚಿತಯಗೊಂಡ ಮದುವೆ ರದ್ದಾಗಿ, ಸಂಬಂಧಗಳೆಲ್ಲವೂ ಮುರಿದು ಹೋದಕಾರಣ ಯುವಕ ಆತ್ಮಹತ್ಯೆಗೆ ಶರಣಾದ ಘಟನೆ ಬೆಳಗಾವಿ ತಾಲೂಕಿನ ಕೆಕೆಕೊಪ್ಪ ಗ್ರಾಮದಲ್ಲಿ ನಡೆದಿದೆ. …

Leave a Reply

Your email address will not be published. Required fields are marked *