ಎಸ್ಪಿ ಸಂಜೀವ್ ಪಾಟೀಲರು ತೋರಿದ ಕರ್ತವ್ಯ ಪ್ರಜ್ಞೆಗೆ ಸಲಾಂ..!!

ಚಿಕ್ಕೊಡಿ: ಹಿರೇಕೋಡಿಯ ನಂದಿ ಪರ್ವತ ಆಶ್ರಮದ ಆಚಾರ್ಯ ಶ್ರೀ 108 ಕಾಮಕುಮಾರ ನಂದಿ ಮಹಾರಾಜರ ಹತ್ಯೆ ಪ್ರಕರಣವನ್ನು ಕೆಲವೇ ಗಂಟೆಯೊಳಗೆ ಭೇದಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದು, ಇದರ ಯಶಸ್ಸು ನಿಸ್ಸಂದೇಹವಾಗಿ ಎಸ್ಪಿ ಸಂಜೀವ್ ಪಾಟೀಲ ಅವರಿಗೆ ಸಲ್ಲಬೇಕು.

ಜೈನಮುನಿಯ ನಾಪತ್ತೆಯಾದ ದೂರು ದಾಖಲಾದ ಸುದ್ದಿ ತಿಳಿಯುತ್ತಿದ್ದಂತೆ ಆಶ್ರಮಕ್ಕೆ ದೌಡಾಯಿಸಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಂಜೀವ್ ಪಾಟೀಲ ಆರೋಪಿಗಳ ಪತ್ತೆ ಹಾಗೂ ಬಂಧನದಿಂದ ಹಿಡಿದು ಮುನಿಗಳ ಮೃತದೇಹ ಹೊರತೆಗೆದು ಮರಣೋತ್ತರ ಪರೀಕ್ಷೆಗೆ ಕಳಿಸುವ ತನಕ ಸ್ಥಳದಲ್ಲೇ ಮೊಕ್ಕಾಂ ಹೂಡಿ ಸಂಪೂರ್ಣ ಕಾರ್ಯಾಚರಣೆ ಯ ನೇತೃತ್ವ ವಹಿಸಿ ಮಾರ್ಗದರ್ಶನ ನೀಡಿದರು.
ವಿಷಯ ತಿಳಿದ ತಕ್ಷಣ ಕಾರ್ಯ ಪ್ರವೃತ್ತರಾದ ಎಸ್ಪಿಯವರು ಆಶ್ರಮಕ್ಕೆ ಭೇಟಿ ನೀಡಿ ಅಗತ್ಯ ಸಾಕ್ಷ್ಯಾಧಾರ ಕಲೆ ಹಾಕಿದರು. ಕೂಡಲೇ ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿ ಕೊಲೆಯ ರಹಸ್ಯ ಬಾಯ್ಬಿಡಿಸುವಲ್ಲಿ ಯಶಸ್ವಿಯಾದರು.

ಮೃತದೇಹದ ಕುರಿತು ಆರೋಪಿ ನೀಡಿದ ಮಾಹಿತಿಯ ಜಾಡು ಹಿಡಿದು ರಾತ್ರಿಯೇ ಸಹೋದ್ಯೋಗಿಗಳ ಜತೆಗೆ ರಾಯಬಾಗ ತಾಲೂಕಿನ ಕಟಕಭಾವಿಯ ತೋಟಕ್ಕೆ ಆಗಮಿಸಿ ಶೋಧ ಕಾರ್ಯಕ್ಕೆ ಬೇಕಾದ ಅಗತ್ಯ ಸಿದ್ಧತೆ ನಡೆಸಿದರು.ಬೆಳಗ್ಗೆ 4 ಗಂಟೆ ಗೊತ್ತಿಗೆ ಮೃತದೇಹ ಕಾರ್ಯಾಚರಣೆ ಆರಂಭದಿಂದ ಮೃತದೇಹ ಹೊರತೆಗೆದು ಶವವನ್ನು ಬೆಳಗಾವಿ ಜಿಲ್ಲಾಸ್ಪತ್ರೆಗೆ ಸಾಗಿಸುವವರೆಗೂ ಎಸ್ಪಿ ಸಂಜೀವ್ ಪಾಟೀಲ ಅವರು ವಿಶ್ರಾಂತಿ ಪಡೆಯದೇ ಸ್ಥಳದಲ್ಲೆ ಬೀಡುಬಿಟ್ಟು ಮಾನಿಟರ್ ಮಾಡಿದ್ದು, ಗಮನ ಸೆಳೆಯಿತು.

ಜೈನ  ಮುನಿಗಳ ಮೃತದೇಹ ಪತ್ತೆ ಕಾರ್ಯಾಚರಣೆಯಲ್ಲಿ ಗದಗ ಎಸ್ಪಿ,ಬೆಳಗಾವಿಯ ಅಡಿಷ್ನಲ್ ಎಸ್ಪಿ,ಡಿಎಸ್ಪಿ ಬಸವರಾಜ್ ಯಲಿಗಾರ್ ವಿರೇಶ್ ದೊಡಮನಿ,ಸಿಪಿಐ ಆರ್ ಆರ್ ಪಾಟೀಲ,ಹಾಗೂ ಬೆಳಗಾವಿ ಜಿಲ್ಲಾ ಸೈಬರ್ ಕ್ರೈಮ್ ಸಿಪಿಐ ಗಡ್ಡೇಕರ ಸೇರಿದಂತೆ ಸುಮಾರು 500 ಜನ ಪೋಲೀಸ್ ಸಿಬ್ಬಂದಿ ಗಳು ಬೆಳಗಾವಿ ಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಿಗಳಿಗೆ ಸಾಥ್ ನೀಡಿದ್ದು ಪ್ರಶಂಸನೀಯ.

ಒಟ್ಟಾರೆ  ಈ ಪ್ರಕರಣ   ಮುಗಿಯುವತನಕ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ತೋರಿದ ಕರ್ತವ್ಯ ಪ್ರಜ್ಞೆ ಜನಮೆಚ್ಚುಗೆಗೆ ಪಾತ್ರವಾಗಿದೆ.

Check Also

ನಿಶ್ಚಿತವಾಗಿದ್ದ ಮದುವೆ ರದ್ದು ಯುವಕನ ಆತ್ಮಹತ್ಯೆ

ಬೆಳಗಾವಿ-ನಿಶ್ಚಿತಯಗೊಂಡ ಮದುವೆ ರದ್ದಾಗಿ, ಸಂಬಂಧಗಳೆಲ್ಲವೂ ಮುರಿದು ಹೋದಕಾರಣ ಯುವಕ ಆತ್ಮಹತ್ಯೆಗೆ ಶರಣಾದ ಘಟನೆ ಬೆಳಗಾವಿ ತಾಲೂಕಿನ ಕೆಕೆಕೊಪ್ಪ ಗ್ರಾಮದಲ್ಲಿ ನಡೆದಿದೆ. …

Leave a Reply

Your email address will not be published. Required fields are marked *