ಬೆಳಗಾವಿ-ಕೊರೋನಾ ಮಹಾಮಾರಿ ಪ್ರಕೋಪದಿಂದ ಅದೆಷ್ಟು ಬದುಕುಗಳು ಬೀದಿಗೆ ಬಂದಿವೆ ಅನ್ನೋದು ಲೆಕ್ಕವೇ ಇಲ್ಲ ,ಬೆಳಗಾವಿಯ ನೇಕಾರನೊಬ್ಬ ಲಾಕ್ ಡೌನ್ ನಿಂದ ಸಾಲ ತೀರಿಸಲಾಗದೇ ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ.
ಸಿದ್ದಲಿಂಗೇಶ್ವರ ಗಂಗಪ್ಪ ಹೊರಕೇರಿ ವಯಸ್ಸು: 47 ವರ್ಷ ಸಾ: ತಗ್ಗಿನಗಲ್ಲ ವಡಗಾವಿ ಬೆಳಗಾವಿ ಈತನು ಮಗ್ಗದ ಹಿಂದಿನ ಸಲಾಕೆಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಮಗ್ಗದ ಕೆಲಸದ ಸಲುವಾಗಿ ಮತ್ತು ಮನೆಯ ಕೆಲಸದ ಸಲುವಾಗಿ ಬೆಳಗಾವಿ ಬಿಎಸ್‌ಎಸ್ ಮೈಕ್ರೋ
ಪೈನಾನ್ಸ್ ಅಮೀಟೆಡ್ ದಲ್ಲಿ 38.170/-ರೂ. ಸ್ಪಂದನಾ ಸ್ಫೂರ್ತಿ, ಪೈನಾನ್ಸ್ದಲ್ಲಿ 24.122/-ರೂ.
ಧರ್ಮಸ್ಥಳ ಪೈನಾನ್ಸ್ದಲ್ಲಿ 2 ಲಕ್ಷ ರೂಪಾಯಿ ಫುಲ್‌ಟ್ರಾನ್ ಇಂಡಿಯಾ ಕಂಪನಿಯಲ್ಲಿ 55 ಸಾವಿರ.
ಆಶೀರ್ವಾದ ಮೈಕ್ರೋ ಫೈನಾನ್ಸ್ದಲ್ಲಿ 40 ಸಾವಿರ, ಕಿನಾರ್ ಪೈನಾನ್ಸ್ದಲ್ಲಿ 1 ಲಕ್ಷ ರೂಪಾಯಿ ಹೀಗೆ
ಒಟ್ಟು 4.57.000/- ರೂಗಳಷ್ಟು ಸಾಲ ಮಾಡಿದ್ದ, ಕರೋನಾ ಸಲುವಾಗಿ ಲಾಕ್ ಡೋನ
ಇದ್ದುದ್ದರಿಂದ ಮತ್ತು ಈಗ ಸರಿಯಾಗಿ ಮಗ್ಗದ ಕೆಲಸ ನಡಯದ್ದರಿಂದ ಸಾಲ ಮರು ಪಾವತಿ ಮಾಡಲಿಕ್ಕೆ
ಆಗದೇ ಅದನ್ನೇ ಮನಸ್ಸಿಗೆ ಹಚ್ಚಿಕೊಂಡು ಜೀವನದಲ್ಲಿ ಜಿಗುಪ್ಪೆ ಹೊಂದಿ ಮನೆಯಲ್ಲಿ ಇದ್ದ ಮಗ್ಗದ
ಹಿಂದಿನ ಬಾಜು ಇದ್ದ ಕಬ್ಬಣದ ಸಿ ಚನಲ್‌ಗೆ ಉಲಾರ ದಾರದಿಂದ ತನ್ನ ಕುತ್ತಿಗೆಗೆ ಉರಲು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಶಹಾಪೂರ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ಮುಂದುವರೆದಿದೆ.