ಗೋಕಾಕ್-ಆತನ ಮೂಲ ಹೆಸರು ರಾಜು,ರಾಜೇಶ್ ಆದ್ರೆ ಗೋಕಾಕಿನ ಜನ ಈತನನ್ನು ಪ್ರೀತಿಯಿಂದ ಮುನ್ನಾಭಾಯಿ ಎಂದೇ ಕರೀತಾ ಇದ್ರು,ಈ ಮುನ್ನಾ ಭಾಯಿ ದೋಸ್ತಿ ಮಾಡಿದ್ದು ಎಂಬಿಬಿಎಸ್ ಡಾಕ್ಟರ್ ಜೊತೆ,ಹೀಗಾಗಿ ಇವರಿಬ್ಬರ ಜೋಡಿ ಮುನ್ನಾ ಭಾಯಿ ಎಂಬಿಬಿಎಸ್ ಎಂದೇ ಪ್ರಸಿದ್ದಿ ಪಡೆದಿತ್ತು, ಆದ್ರೆ ಕಹಾನಿ ಆಗಿದ್ದೇ ಬೇರೆ ಈ ದೋಸ್ತಿಯಲ್ಲಿ ಮುನ್ನಾಭಾಯಿ ಖಲ್ಲಾಸ್ ಮಾಡಿದ ಎಂಬಿಬಿಎಸ್ ಡಾಕ್ಟರ್ ಈಗ ಜೈಲು ಪಾಲಾಗಿದ್ದಾನೆ.
ಮುನ್ನಾಭಾಯಿ ಮಿಸ್ಸಿಂಗ್ ಆಗಿ ನಾಳೆ ಶುಕ್ರವಾರಕ್ಕೆ ಒಂದು ವಾರ ಆಗುತ್ತೆ,ರಾಜು ಊರ್ಫ ಮುನ್ನಾ ನನ್ನು ಮರ್ಡರ್ ಮಾಡಿದ್ದು ನಾನೇ ಎಂದು ಎಂಬಿಬಿಎಸ್ ಡಾಕ್ಟರ್ ಒಪ್ಪಿದ್ದು ಆಯ್ತು,ಈ ಕೇಸ್ ನಲ್ಲಿ ಇಬ್ಬರು ಡಾಕ್ಟರ್ ಅರೆಸ್ಟ್ ಆಗಿದ್ದು ಆಯ್ತು,ಆದ್ರೆ ಇನ್ನುವರೆಗೆ ಮುನ್ನಾಭಾಯಿ ಶವ ಮಾತ್ರ ಪತ್ತೆಯಾಗಿಲ್ಲ.
ಗೋಕಾಕಿನ ಕೊಳವಿಯ ಕಾಲುವೆಯಲ್ಲಿ ಮುನ್ನಾ ಉರ್ಫ್ ರಾಜು ಎಂಬಾತನ ಶವ ಎಸೆಯಲಾಗಿದೆ ಎಂದು ಮರ್ಡರ್ ಮಾಡಿದ ವೈದ್ಯನು ನೀಡಿದ ಮಾಹಿತಿ ಮೇರೆಗೆ ಪೋಲೀಸರು ಕಳೆದ ಒಂದು ವಾರದಿಂದ ಶವ ಪತ್ತೆ ಕಾರ್ಯಾಚರಣೆ ನಡೆಸಿದ್ದು ಇನ್ನುವರೆಗೆ ಶವ ಸಿಕ್ಕಿಲ್ಲ,ಇದೇ ಕೇಸ್ ಗೆ ಸಂಭಂದಿಸಿದಂತೆ ಕೊಲ್ಹಾಪೂರದಲ್ಲಿ ಕಂಟ್ರೋಲ್ ಪಿಸ್ತೂಲ್ ಮಾರಾಟಗಾರನೊಬ್ಬ ಅರೆಸ್ಟ್ ಆಗಿದ್ದಾನೆ.ಈತನ ಪಾತ್ರ ಏನು ಅನ್ನೋದು ಗೊತ್ತಾಗಿಲ್ಲ,
ಗೋಕಾಕ್ ನಗರದಲ್ಲಿ ಈಚೆಗೆ ನಡೆದ ವ್ಯಾಪಾರಿಯೊಬ್ಬರ ಕಾಣೆ ಪ್ರಕರಣಕ್ಕೆ ಹೊಸ ತಿರುವು ಸಿಕ್ಕಿದೆ. ಪ್ರಕರಣ ಭೇದಿಸಿರುವ ಪೊಲೀಸರು ಮಂಗಳವಾರ ಇಬ್ಬರು ವೈದ್ಯರನ್ನು ಬಂಧಿಸಿದ್ದಾರೆ.
ವ್ಯಾಪಾರಿಯನ್ನು ಕೊಲೆ ಮಾಡಲಾಗಿದೆ ಎಂಬುದನ್ನೂ ಖಚಿತ ಪಡಿಸಿದ್ದಾರೆ.
ನಗರದ ತಜ್ಞ ವೈದ್ಯ ಸಚಿನ್ ಶಂಕರ ಶಿರಗಾಂವಿ ಮತ್ತು ಹುಕ್ಕೇರಿ ತಾಲ್ಲೂಕಿನ ಶಿರಡ್ಯಾಣದ ಆಯುರ್ವೇದ ವೈದ್ಯ ಶಿವಾನಂದ ಕಾಡಗೌಡ ಪಾಟೀಲ ಬಂಧಿತರು. ನಗರದ ಹಿಲ್ ಗಾರ್ಡನ್‌ನ ನಿವಾಸಿ, ಮಾರುಕಟ್ಟೆ ಯಲ್ಲಿ ಸಗಟು ವ್ಯಾಪಾರ ಮಾಡಿ ಕೊಂಡಿದ್ದ ರಾಜು ಝಂವರ (53) ಕೊಲೆಯಾದವರು.ಇಬ್ಬರೂ ಆರೋಪಿಗಳನ್ನು ಇಲ್ಲಿನ ಜೆಎಂಎಫ್‌ಸಿ ನ್ಯಾಯಾಲಯದ ಮುಂದೆ ಹಾಜರು ಪಡಿಸಿದ್ದು, 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಶವ ಇನ್ನುವರೆಗೆ ಸಿಕ್ಕಿಲ್ಲ ಆರೋಪಿ ಶಿರಗಾಂವಿ ಡಾಕ್ಟರ್ ಸುಳ್ಳು ಮಾಹಿತಿ ನೀಡಿ ಪೋಲೀಸರ ದಿಕ್ಕು ತಪ್ಪಿಸುತ್ತಿದ್ದಾನೆ.ನಿಜವಾಗಿಯೂ ಆ ವ್ಯಾಪಾರಿಯ ಮರ್ಡರ್ ಆಗಿದೆಯೋ ಇಲ್ಲವೋ ಎನ್ನುವ ಅನುಮಾನ ಕಾಡುತ್ತಿದೆ. ಮರ್ಡರ್ ಮಾಡಿದ ಆರೋಪಿ ಪತ್ತೆಯಾದರೂ ಶವ ಇನ್ನುವರೆಗೆ ಸಿಗದ ಕಾರಣ,ಅನೇಕ ಅನುಮಾನಗಳಿಗೆ ಕಾರಣವಾಗಿದೆ.ಶವ ಸಿಕ್ಕ ನಂತರ ಈ ಮರ್ಡರ್ ಕೇಸ್ ಕುರಿತು ಅಸಲಿ ಕಹಾನಿ ಎಲ್ಲರಿಗೂ ಗೊತ್ತಾಗಲಿದೆ.