ಬೆಳಗಾವಿ- ಬೆಳಗಾವಿಯಲ್ಲಿ ಪತ್ರಿಕಾ ದಿನಾಚರಣೆ ನಡೆಯಿತು ಕಾರ್ಯಕ್ರಮವನ್ನು ನಾಗನೂರ ಮಠದ ಸಿದ್ದರಾಮ ಸ್ವಾಮಿಗಳು ಉದ್ಘಾಟಿಸಿ ಮಾತನಾಡಿದರು
ಸಮಾಜ ಸೇವೆಗೆ ಸಾಕಷ್ಟು ಕ್ಷೇತ್ರಗಳಿವೆ. ಅದರಲ್ಲಿ ಪತ್ರಕರ್ತ ವೃತ್ತಿ ಉತ್ತಮ ಕ್ಷೇತ್ರವಾಗಿದೆ. ಪತ್ರಕರ್ತರ ಸಂಘ ಉತ್ತಮವಾಗಿ ಕೆಲಸ ಮಾಡ್ತಿದೆ. ಸಮಾಜದ ಸ್ವಾಸ್ಥ್ಯ ಕಾಪಾಡುವ, ಪ್ರಜಾಪ್ರಭುತ್ವ ಕಾಪಾಡುವ ನಿಟ್ಟಿನಲ್ಲಿ ಪತ್ರಕರ್ತರ ಕೆಲಸ ಮಹತ್ವವಾಗಿದೆ. ವರದಿಗಾರರು ಸಾಕಷ್ಟು ಸವಾಲು, ಗಂಡಾಂತರ ಎದುರಿಸುತ್ತಾರೆ. ಸರಕಾರ ಗಮನಿಸಬೇಕು. ಅವರನ್ನು ಗೌರವಿಸಬೇಕು. ಸತ್ಯ ಕಹಿ. ಹಾಗಾಗಿ ಪತ್ರಿಕೆಯ ಸತ್ಯ ವಿಷಯಗಳು ಕೆಲವರಿಗೆ ಕಹಿ ಅನುಭವ ಕೊಡುತ್ತದೆ. ದೇಶ ಯಶಸ್ವಿ ನಡೆಯಲು ಪತ್ರಿಕೆ ಕೆಲಸ ಮಹತ್ವದ್ದಾಗಿದೆ. ಪತ್ರಕರ್ತರ ಸೇವೆ ಬೆಳಕಿಗೆ ಬರುವುದು ಕಡಿಮೆ. ಬಸವಣ್ಣ ಹೇಳಿದಂತೆ ತೆರೆಮರೆಯಲ್ಲಿ ಸೇವೆ ಮಾಡ್ತಿರ್ತಾರೆ. ಪತ್ರಕರ್ತರ ಯೋಗಕ್ಷೇಮ ಕಾಪಾಡುವುದು ಸರಕಾರದ ಕರ್ತವ್ಯ ಎಂದರು.
ಶಾಸಕ ಅನಿಲ ಬೆನಕೆ ಮಾತಾಡಿ, ಪತ್ರಕರ್ತರು ಅತಿ ಹೆಚ್ಚು ರಿಸ್ಕಿ ಕೆಲಸ. ಅಷ್ಟೊಂದು ಗೌರವ ಇಲ್ಲ. ಸರಕಾರಿ ಸೌಲಭ್ಯವೂ ಇಲ್ಲ. ನಿವೇಶನ ಹಂಚಿಕೆ ಆರು ವರ್ಷಗಳಿಂದ ಅರ್ಜಿ ಎಲ್ಲೋಯ್ತು ಗೊತ್ತಿಲ್ಲ. ಪತ್ರಕರ್ತರ ಸೌಲಭ್ಯಕ್ಕೆ ಯಾರೂ ಪ್ರಯತ್ನಿಸಿಲ್ಲ. ಸೌಲಭ್ಯಕ್ಕೆ ಹೋರಾಟ ಮಾಡಬೇಕು. ಬುಡಾ ದಿಂದ ಕೊಡಿಸುವ ವ್ಯವಸ್ಥೆ ಮಾಡ್ತೀನಿ.
ನಾಲ್ಕನೇ ಸ್ತಂಭ ಕ್ಕೆ ಸೌಲಭ್ಯ ಕೊಡ್ತೇನೆ ಎಂದರು.
ಆಶಾ ಐಹೊಳೆ ಮಾತನಾಡಿದರು.
ಸಹಕಾರಿ ನಿಬಂಧಕ ಎಂ.ಡಿ.ಮಲ್ಲೂರ, ಎಲ್.ಎಸ್. ಶಾಸ್ತ್ರಿ, ಅಂಬಿಕಾ ಮಾತಾಜಿ, ಮುರುಗೇಶ ಶಿವಪೂಜಿ, ರುದ್ರಾಕ್ಷಿ ಮಠದ ಸಿದ್ದರಾಮ ಸ್ವಾಮೀಜಿ ಇದ್ದರು.
ಪತ್ರಕರ್ತರಿಗೆ ಸನ್ಮಾನ
ನ್ಯೂಸ್ 18 ವರದಿಗಾರ ಚಂದ್ರಕಾಂತ ಸುಗಂಧಿ, ವಿಜಯ ಕರ್ನಾಟಕ ವರದಿಗಾರ ಪ್ರಮೋದ ಹರಿಕಾಂತ, ಟಿವಿ 9 ವರದಿಗಾರ ಸಹದೇವ ಮಾನೆ, ಬೈರೋಬ ಕಾಂಬಳೆ, ಕಿರಣ ಮಾಸಣಗಿ, ಸುನಿಲ್ ಪಾಟೀಲ್, ರಾಜಶೇಖರ ಹಿರೇಮಠ, ಇಮಾಮ್ ಹುಸೆರನ್ ಗೂಡುನವರ್, ಕೀರ್ತಿ ಕಾಸರಗೋಡ, ಸುನಿತಾ ಪಾಟೀಲ್ ಸೇರಿದಂತೆ 20 ಕ್ಕೂ ಹೆಚ್ಚು ಪತ್ರಕರ್ತರಿಗರ ಸನ್ಮಾನಿಸಿ ಗೌರವಿಸಲಾಯಿತು