ಬೆಳಗಾವಿ- ಮಾಜಿ ಸಚಿವ,ರಮೇಶ್ ಜಾರಕಿಹೊಳಿಗೆ ಕೊರೊನಾ ಪಾಸಿಟಿವ್ ಆಗಿದೆ,ಅವರಿಗೆ ಕೊರೊನಾ ಬಂದಿದೆ ಎಂದು,ಬೆಳಗಾವಿಯಲ್ಲಿ ಸಚಿವ ಭೈರತಿ ಬಸವರಾಜ ತಿಳಿಸಿದ್ದಾರೆ..
ಬೆಳಗಾವಿಯಲ್ಲಿ ಮಾದ್ಯಮಗಳ ಜೊತೆ ಮಾತನಾಡಿದ ಅವರು, ಹುಷಾರಾಗಿ ಚುನಾವಣಾ ಪ್ರಚಾರಕ್ಕೆ ಬರೋದಾಗಿ ರಮೇಶ್ ಜಾರಕಿಹೊಳಿ ಹೇಳಿದ್ದಾರೆ,ರಮೇಶ್ ಜಾರಕಿಹೊಳಿ ಬೆಂಗಳೂರಿನಲ್ಲಿಯೇ ಇದ್ದಾರೆ,ಇನ್ನೆರಡು ದಿನಗಳಲ್ಲಿ ಬಾಲಚಂದ್ರ ಜಾರಕಿಹೊಳಿ ಪ್ರಚಾರಕ್ಕೆ ಬರ್ತಾರೆ, ಕೇವಲ ಚುನಾವಣಾ ಪ್ರಚಾರ ಕುರಿತು ರಮೇಶ್ ಜಾರಕಿಹೊಳಿ ಜೊತೆ ಚರ್ಚೆ ಮಾಡಿದ್ದೇನೆ.ರಮೇಶ್, ಬಾಲಚಂದ್ರ ಜೊತೆ ನಿನ್ನೆ ಫೋನ್‌ನಲ್ಲಿ ಮಾತನಾಡಿದ್ದೇನೆ ಎಂದು ಸಚಿವ ಭೈರತಿ ಬಸವರಾಜ್ ಮಾದ್ಯಮಗಳಿಗೆ ಮಾಹಿತಿ ನೀಡಿದ್ರು.
ಇಂದು ನಾನು, ನಮ್ಮೆಲ್ಲ ನಾಯಕರು ಗೋಕಾಕ, ಅರಭಾವಿಗೆ ಹೋಗುತ್ತೇವೆ.ಸಿಎಂ ಸೂಚನೆಯಂತೆ ಬೆಳಗಾವಿ ಚುನಾವಣೆ ಪ್ರಚಾರಕ್ಕೆ ಬಂದಿದ್ದೇನೆ.ಬಿಜೆಪಿ ಅಭ್ಯರ್ಥಿ ಮಂಗಲ ಅಂಗಡಿ ಜಯಸಾಧಿಸುವಲ್ಲಿ ಸಂದೇಹ ಇಲ್ಲ,ಸುರೇಶ್ ಅಂಗಡಿ ಜನಪರ ಕಾರ್ಯಕ್ರಮ ಮುಂದಿಟ್ಟು ಮತಯಾಚನೆ ಮಾಡುತ್ತೇವೆ.ನರೇಂದ್ರ ಮೋದಿ ಜನಪರ ಕಾರ್ಯಗಳನ್ನು ಮುಂದಿಟ್ಟು ಮತ ಕೇಳುತ್ತೇವೆ.ಬೆಳಗಾವಿ ನಗರ ಅಭಿವೃದ್ಧಿಗೆ ಇತ್ತೀಚೆಗೆ 150 ಕೋಟಿ ರೂ. ಕೊಟ್ಟಿದ್ದೇವೆ.ಬೆಳಗಾವಿ ಜನತೆ ಅತೀ ಹೆಚ್ಚಿನ ಮತ ನೀಡಿ ಮಂಗಲ ಅಂಗಡಿರನ್ನು ಗೆಲ್ಲಿಸುತ್ತಾರೆ ಎಂದು ಭೈರತಿ ಬಸವರಾಜ್ ವಿಶ್ವಾಸ ವ್ಯೆಕ್ತಪಡಿಸಿದರು.
ನಿನ್ನೆ ಕುರುಬ ಸಮುದಾಯದ ಮುಖಂಡರ ಜೊತೆ ಚರ್ಚಿಸಿದ್ದೇನೆ.ಮಸ್ಕಿ, ಬಸವಕಲ್ಯಾಣ, ಬೆಳಗಾವಿಯಲ್ಕಿ ಜಯಭೇರಿ ಬಾರಿಸುತ್ತೇವೆ,ರಾಜ್ಯದಲ್ಲಿ ರಾಷ್ಟ್ರಪತಿ ಆಳ್ವಿಕೆಗೆ ಸಿದ್ದರಾಮಯ್ಯ ಆಗ್ರಹ ವಿಚಾರ,ಸಿದ್ದರಾಮಯ್ಯ ತಮ್ಮ ಪಕ್ಷದಲ್ಲಿ ಏನಾಗಿದೆ ಅದನ್ನು ನೋಡಿಕೊಳ್ಳಲಿ,ಕೋವಿಡ್ ಸಂದರ್ಭದಲ್ಲಿ ಸಿಎಂ ಬಿಎಸ್‌ವೈ ಅನೇಕ ಜನಪರ ಯೋಜನೆ ಕೊಟ್ಟಿದ್ದಾರೆ.ಇನ್ನೆರಡು ದಿನ ಬೆಳಗಾವಿಯಲ್ಲಿ ಇದ್ದು ಪ್ರಚಾರ ಮಾಡಿ ಮಸ್ಕಿ, ಬಸವಕಲ್ಯಾಣ ಹೋಗ್ತೇನೆ ಎಂದ ಭೈರತಿ ಬಸವರಾಜ್ ಹೇಳಿದ್ರು