Breaking News

ಬಿಜೆಪಿಯವರು ಸಾವರ್ಕರ್ ಅವರನ್ನ ಅವಮಾನ ಮಾಡ್ತಿದ್ದಾರೆ- ಭಾಸ್ಕರ್ ರಾವ್..

ಬೆಳಗಾವಿ-ಗಣೇಶೋತ್ಸವ ಮಂಟಪಗಳಲ್ಲಿ ಸಾವರ್ಕರ್ ಭಾವಚಿತ್ರ ಕೂರಿಸುವ ವಿಚಾರವಾಗಿ ಬಿಜೆಪಿಯವರು ಸಾವರ್ಕರ್ ಅವರನ್ನ ಬೀದಿಗೆ ತಂದು ಅವಮಾನ ಮಾಡ್ತಿದ್ದಾರೆ ಎಂದುಬೆಳಗಾವಿಯಲ್ಲಿ ಆಮ್ ಆದ್ಮಿ ಪಕ್ಷದ ರಾಜ್ಯ ಉಪಾಧ್ಯಕ್ಷ ಭಾಸ್ಕರರಾವ್ ಗಂಭೀರ ಆರೋಪ ಮಾಡಿದ್ದಾರೆ.

ಬೆಳಗಾವಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಅವರು,ಸಾವರ್ಕರ್ ಅಂಡಮಾನ್ ಜೈಲಿನಲ್ಲಿದ್ದಿದ್ದು ಎಲ್ಲರಗೂ ಗೊತ್ತಿರುವ ವಿಷಯ,ಸ್ವಾತಂತ್ರ್ಯಕ್ಕಾಗಿ ಹೋರಾಟ ಮಾಡಿ ಜೈಲಿನಲ್ಲಿ ಇದ್ದವರು.ಸಾರ್ವಜನಿಕ ಗಣೇಶೋತ್ಸವಕ್ಕೆ ಬಾಲಗಂಗಾಧರ ತಿಲಕ್ ಚಾಲನೆ ನೀಡಿದ್ರು,
ಬಾಲಗಂಗಾಧರ ತಿಲಕ್ ಅವರ ಭಾವಚಿತ್ರ ಬಿಟ್ರೆ ರಾಣಿ ಚನ್ನಮ್ಮ, ಸಂಗೊಳ್ಳಿ ರಾಯಣ್ಣ, ಕೆಂಪೆಗೌಡರ ಭಾವಚಿತ್ರ ಇಡಬೇಕು ಎಂದು ಆಮ್ ಆದ್ಮಿ ಪಾರ್ಟಿ ಮುಖಂಡ ಭಾಸ್ಕರ್ ರಾವ್ ಸಲಹೆ ನೀಡಿದ್ದಾರೆ.

ಸಾವರ್ಕರ್ ಅವರ ಬಗ್ಗೆ ಯಾರೂ ಪ್ರಶ್ನೆ ಮಾಡುತ್ತಿಲ್ಲ,ಏಕೆ ಬಿಜೆಪಿಯವರು ಮೇಲಿನಮೇಲೆ ಸಾವರ್ಕರ್ ಗೆ ಅವಮಾನ ಮಾಡ್ತಿದ್ದಾರೆ.ಸಿಕ್ಕ ಸಿಕ್ಕ ಕಡೆ ಅವರ ಪೋಸ್ಟರ್ ಕಸದ ತೊಟ್ಟಿಗೆ ಫೋಟೋ ಹಾಕುವ ಸ್ಥಿತಿಗೆ ತಲುಪಿದ್ದಾರೆ.ಕಾಂಗ್ರೆಸ್‌ ಪಕ್ಷದವರು ಕೂಡ ಕಲಿಯಬೇಕು.ಸಾವರ್ಕರ್ ಸ್ವಾತಂತ್ರ್ಯ ಸೇನಾನಿ ಅವರು ತ್ಯಾಗ ಬಲಿದಾನ ಮಾಡಿದ್ದಾರೆ.ಅವರವರ ಪಕ್ಷದ ನಿಲುವು ಅವರ ನಿಲುವು.ಹಿಂದಿನ ಬಗ್ಗೆ ಮಾತನಾಡೋದು ಬೇಡ ಭವಿಷ್ಯದ ಬಗ್ಗೆ ಮಾತನಾಡೋಣ.ಎಂದಿದ್ದಾರೆ ಭಾಸ್ಕರ್ ರಾವ್..

ಈದ್ಗಾ ಮೈದಾನದಲ್ಲಿ ಗಣೇಶ ವಿಗ್ರಹ ಪ್ರತಿಷ್ಠಾಪನೆ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಅವರು,
ಸರ್ಕಾರಿ ಜಮೀನು ಇದ್ರೆ ಸರ್ಕಾರ ಅನುಮತಿ ನೀಡಿದ್ರೆ ಇಡಲಿ,ಪೊಲೀಸ್ ಇಲಾಖೆಯಲ್ಲಿ ಇದ್ದಾಗ ಹುಬ್ಬಳ್ಳಿ ಬೆಳಗಾವಿಯಲ್ಲಿ ನಾನು ಕೆಲಸ ಮಾಡಿದ್ದೆ,
ಎಲ್ಲಾ ಗಣಪತಿ ಮಂಡಳಿಯವರಿಗೆ ಎಲ್ಲಾ ಜಾತಿಯವರನ್ನು ಸದಸ್ಯರು ಮಾಡಲು ಹೇಳಿದ್ದೆ,ಎಂದು
ಬೆಳಗಾವಿಯಲ್ಲಿ ಆಮ್ ಆದ್ಮಿ ಪಕ್ಷದ ರಾಜ್ಯ ಉಪಾಧ್ಯಕ್ಷ ಭಾಸ್ಕರ್ ರಾವ್ ಹೇಳಿದ್ದಾರೆ.

ಈಗಾಗಲೇ 50 ಪರ್ಸೆಂಟ್ ಆಗಿದೆ ….

ರಾಜ್ಯಕ್ಕೆ ಪ್ರಧಾನಿ ನರೇಂದ್ರ ಮೋದಿ ಭೇಟಿ ಹಿನ್ನೆಲೆ,ಭ್ರಷ್ಟಾಚಾರ ಕಡಿವಾಣ ಹಾಕ್ತೀವಿ ಎಂದು ಪ್ರಧಾನಿ ಮೋದಿ ಘೋಷಣೆ ಮಾಡಿದ್ದಾರೆ,ಪ್ರಧಾನಿ ಆಗಮಿಸುವ ಮುಂಚೆ ಜನಸಾಮಾನ್ಯರ ಪರವಾಗಿ ಕರ್ನಾಟಕದಲ್ಲಿ ಇರುವ ಬಗ್ಗೆ ಗೊತ್ತಾಗಬೇಕು,40 ಪರ್ಸೆಂಟ್ ಸರ್ಕಾರ ಎಂದು ಗುತ್ತಿಗೆದಾರರು 4 ತಿಂಗಳ ಹಿಂದೆ ಹೇಳಿದ್ರು,ಈಗಾಗಲೇ 50 ಪರ್ಸೆಂಟ್ ಆಗಿದೆ ಅಂತಾ ಪ್ರಧಾನಿಗೆ ಪತ್ರ ಬರೆಯಲು ಗುತ್ತಿಗೆದಾರರು ನಿರ್ಧರಿಸಿದ್ದಾರೆ,ಶಿಕ್ಷಣ ಸಂಸ್ಥೆಗಳು ಸಹ 40 ಪರ್ಸೆಂಟ್ ಆರೋಪ ಮಾಡಿದ್ದಾರೆ.ಗೃಹಸಚಿವರೇ ಸದನದಲ್ಲಿ ಪಿಎಸ್ಐ ಹಗರಣ ಆಗಿಲ್ಲ ಎಂದರು.ಆದ್ರೆ ಪಿಎಸ್ಐ ಹಗರಣದಲ್ಲಿ ಎಡಿಜಿಪಿ ರ‌್ಯಾಂಕ್ ಇದ್ದ ಅಧಿಕಾರಿ ಅರೆಸ್ಟ್ ಮಾಡಿದ್ದಾರೆ.ಪರೀಕ್ಷೆ ರದ್ದು ಮಾಡಿ ಹೊಸದಾಗಿ ಪರೀಕ್ಷೆ ನಡೆಸಬೇಕು.ಎಂದು ಭಾಸ್ಕರ್ ರಾವ್ ಒತ್ತಾಯಿಸಿದ್ದಾರೆ.

ಕೋವಿಡ್ ಕಾಲದಲ್ಲಿ ಆರೋಗ್ಯ ಸಚಿವರ ಭ್ರಷ್ಟಾಚಾರ ಬಗ್ಗೆ ಚರ್ಚೆ ಆಗಿ ಸದನದಲ್ಲಿ ಪ್ರಸ್ತಾಪ ಆಗಿತ್ತು.ನಮ್ಮ ರಾಜ್ಯದಲ್ಲಿ 100 ಪರ್ಸೆಂಟೇಜ್ ನಡೆದ ಪ್ರಕರಣಗಳು ಇವೆ.ಸಚಿವ ಮುನಿರತ್ನ ವಿರುದ್ಧವೂ ಕ್ರಮ ಆಗಬೇಕು.ಈ ಎಲ್ಲದರ ಬಗ್ಗೆ ಪ್ರಧಾನಿಯವರು ಮಂಗಳೂರು ಬಂದು ಹೇಳುವ ಚಿಂತನೆ ಇದೆಯಾ? ಕರ್ನಾಟಕ ಸರ್ಕಾರ ಒಬ್ಬ ಸಚಿವ ಮೇಲೆ ಕ್ರಮಕ್ಕೆ ಆತ್ಮಶಕ್ತಿ ಇದೆಯಾ?ಪತ್ರಕರ್ತರ ಜೊತೆ ಮಾತನಾಡಲು ಪ್ರಧಾನಿ ಮೋದಿ ಹೆದರುತ್ತಾರೆ ಎಂದು ಭಾಸ್ಕರ್ ರಾವ್ ಟೀಕಿಸಿದ್ದಾರೆ.

ಬಿಟ್‌ಕಾಯಿನ್ ಫಲಾನುಭವಿಗಳು ಈ ಸರ್ಕಾರ ನಡೆಸುತ್ತಿದ್ದಾರೆ,ಬಿಟ್‌ಕಾಯಿನ್ ಹಗರಣ ಅಂತಾರಾಷ್ಟ್ರೀಯ ಹಗರಣ.ಈ ಹಗರಣ ಬಗ್ಗೆ ಪ್ರಧಾನಿ ಮೋದಿ ಏಕೆ ಸುಮ್ಮನಿದ್ದಾರೆ.ಕೇಸರಿ ಸರ್ಕಾರ ಎನ್ನೋರು ಕೇಸರಿಕರಣ ಮಾಡೋಕೂ ಧೈರ್ಯ ಇಲ್ಲ ಎಂದು ವ್ಯಂಗ್ಯವಾಡಿದ್ರು.ಇವರೆಲ್ಲ ಸೋಷಿಯಲ್ ಮಿಡಿಯಾ ಪೈಲ್ವಾನರು,ಸೋಷಿಯಲ್ ಮಿಡಿಯಾ ಗೂಂಡಾಗಳನ್ನು ಸೃಷ್ಟಿ ಮಾಡಿದ್ದಾರೆ.ಲೋಕಾಯುಕ್ತ ಬಗ್ಗೆ ಇವರು ನೀಡಿದ ವಾದ ವಿಫಲವಾಯಿತು.ಎಸಿಬಿ ಪ್ರಕರಣಗಳು ಲೋಕಾಯುಕ್ತಕ್ಕೆ ವರ್ಗಾವಣೆ ಆಗಿಲ್ಲ.ಕಳೆದ 20 ದಿನಗಳಿಂದ ಭ್ರಷ್ಟಾಚಾರ ಬಗ್ಗೆ ಯಾವುದೇ ತನಿಖೆ ಆಗಿಲ್ಲ.ಕೆಂಪುಕೋಟೆ ಮೇಲೆ ನಿಂತು ಪ್ರಧಾನಿ ಭಾಷಣ ಮಾಡ್ತಾರೆ.ಮನೀಷ್ ಸಿಸೋಡಿಯಾ ಮನೆ ಮೇಲೆ ದಾಳಿ ಮಾಡಿದಾಗ ಏನು ಸಿಕ್ತು ತೋರಿಸಿ,ಎಂದು ಭಾಸ್ಕರ್ ರಾವ್ ಸವಾಲು ಹಾಕಿದ್ದಾರೆ.

ರಾಜ್ಯದ ಗುತ್ತಿಗೇದಾರರು 50ರಷ್ಟು ಕಮಿಷನ್ ಆರೋಪ ಕೇಳಿ ಬಂದಿದೆ,ಸಚಿವ ಮುನಿರತ್ನ ಬಗ್ಗೆ ಸರ್ಕಾರ ಇನ್ನೂ ಕ್ರಮ ವಹಿಸಿಲ್ಲ,ಮಂಗಳೂರಿನ ಕಾರ್ಯಕ್ರಮದಲ್ಲಿ ಈ ಬಗ್ಗೆ ಉತ್ತರ ಕೊಡಬೇಕು.ಬೆಂಗಳೂರಿನಲ್ಲಿ ಅನೇಕ ಮಾಫಿಯಾಗಳು ಸಕ್ರಿಯ ಆಗಿವೆ.ಎಂದು ಭಾಸ್ಕರ್ ರಾವ್ ಆರೋಪಿಸಿದ್ದಾರೆ

ಪ್ರಾಮಾಣಿಕ ವಾಗಿ ತನಿಖೆ ಮುಕ್ತಾಯವಾಗಲಿ…..

ಮುರುಘಾ ಶರಣರ ವಿರುದ್ಧ ಲೈಂಗಿಕ ದೌರ್ಜನ್ಯ ಆರೋಪ ಪ್ರಕರಣ,ಪ್ರಾಮಾಣಿಕ ವಾಗಿ ತನಿಖೆ ಮುಕ್ತಾಯವಾಗಲಿ ಎಲ್ಲರಿಗೂ ನ್ಯಾಯ ಬೇಕು,
ಸ್ವಾಮೀಜಿಗೂ ನ್ಯಾಯ ಬೇಕು, ಆ ಹೆಣ್ಣುಮಕ್ಕಳಿಗೂ ನ್ಯಾಯ ಬೇಕು,ಸತ್ಯ ಹೊರಗೆ ಬರಲಿ,ರಾಜ್ಯದ ಜನ ಮಹಿಳೆಯರಿಗೂ ನ್ಯಾಯ ಬೇಕು ಅಂತಾ ಬಯಸುತ್ತಾರೆ.ಪೂಜ್ಯರ ಮೇಲೆ ಆಗಿರುವ ಆರೋಪ ಏನಾದರೂ ಅಂಶ ಇದೆಯಾ ಹೊರಬರಲಿ ಅಂತಾ ಬಯಸುತ್ತಾರೆ,ಪೋಕ್ಸೋ ಕೇಸ್ ದಾಖಲಾದರೂ ಸ್ವಾಮೀಜಿ ಬಂಧನ ಆಗಿಲ್ಲ ಎಂದು ಮಾಧ್ಯಮಗಳ ಪ್ರಶ್ನೆ ಉತ್ತರಿಸಿದ ಭಾಸ್ಕರ್ ರಾವ್,ಉಡುಪಿಯಲ್ಲಿ ಐಪಿಸಿ ಸೆಕ್ಷನ್‌ನಲ್ಲಿ 306ರಡಿ ಈಶ್ವರಪ್ಪ ಬಂಧನ ಮಾಡಲಿಲ್ವಲ್ಲ,ತನಿಖಾ ಸಂಸ್ಥೆ ಸರ್ಕಾರದ ಕೈ ಕೆಳಗೆ ಡೈರೆಕ್ಟ್ ಆಗಿ ಕೆಲಸ ಮಾಡುತ್ತಿದೆ.ನಾವು ಯಾರ ಮೇಲೂ ಆರೋಪ ಮಾಡಲ್ಲ,ಈ ಸುದ್ದಿ ಕೇಳಿದ ತಕ್ಷಣ ಕರ್ನಾಟಕಕ್ಕೆ ಆಘಾತವಾಗಿದೆ.ಒಂದು ಕಡೆ ಶ್ರೀಗಳ ಮೇಲೆ ಆರೋಪ, ಒಂದೆಡೆ ಮಹಿಳೆಯರ ದೂರು,ಸತ್ಯ ಹೊರಗೆ ಬರಲಿ,ಇಬ್ಬರಿಗೂ ನ್ಯಾಯ ಸಿಗಲಿ,ಇಲಾಖೆ ಮೇಲೆ ವಿಶ್ವಾಸ ಇದೆ, ಸರ್ಕಾರ ಮೇಲೆ ವಿಶ್ವಾಸ ಇದೆ ತನಿಖೆ ಮಾಡಿ,ಇಲಾಖೆ ಒಂದು ಯಂತ್ರ ಇದ್ದಂಗೆ, ಯಂತ್ರದ ನಿಯಂತ್ರಣ ಸರ್ಕಾರದ ಕೈಯಲ್ಲಿ ಇದೆ,ದಿನದಿನಕ್ಕೂ ನಿಯಂತ್ರಣ ದುರುಪಯೋಗ, ನಿಷ್ಪ್ರಯೋಗ ಮಾಡಿದ್ರೆ ಏನ್ ಮಾಡಕ್ಕಾಗುತ್ತೆ,
ಒಂದು ದೂರು ಬಂದ ಮೇಲೆ ಸರಿಯಾದ ತನಿಖೆ ಆಗಬೇಕು,ಎಂದು ಭಾಸ್ಕರ್ ರಾವ್ ಒತ್ತಾಯಿಸಿದ್ದಾರೆ.

ಮುಕ್ತವಾದ ವಾತಾವರಣ ಪೊಲೀಸ್ ಇಲಾಖೆಗೆ ಕೊಡಿ,ಅವರು ತನಿಖೆ ಮಾಡಲಿ,ಕೇಸ್ ಸುಳ್ಳು ಅನ್ನಬೇಡಿ, ಅದು ಇದು ಸುಳ್ಳು ಅನ್ನಬೇಡಿ,ಮೌನವಾಗಿರಿ ತನಿಖೆಯಿಂದ ಹೊರಗೆ ಬರುತ್ತೆ,ಸರ್ಕಾರಕ್ಕೆ ಭಯ ಕಾಡ್ತಿದೆಯಾ ಎಂದು ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ಅವರು,ಸರ್ಕಾರಕ್ಕೆ ಭಯ ಕಾಡ್ತಿಲ್ಲ, ಸರ್ಕಾರದ ಮಾನ ಮರ್ಯಾದೆ ಹೋಗಿಬಿಟ್ಟಿದೆ,ಅಷ್ಟು ದೊಡ್ಡ ಪ್ರಕರಣ ಆಗಿದೆಯಲ್ಲ, ಹಿರಿಯ ಅಧಿಕಾರಿ ಹಾಕಿ ಧೈರ್ಯದಿಂದ ತನಿಖೆ ಮಾಡಿಸಲಿ,ಪೂಜ್ಯ ಸ್ವಾಮೀಜಿ ಬಗ್ಗೆ ಕರ್ನಾಟಕದಲ್ಲಿ ಬಹಳ ಗೌರವ ಇದೆ,ಆ ಮಕ್ಕಳ ಬಗ್ಗೆಯೂ ಬಹಳ ಬೇಸರ ಇದೆ,ತನಿಖೆ ಮಾಡಿ ನ್ಯಾಯ ದೊರಕಿಸಿಕೊಡಿ ಎಂದು ಭಾಸ್ಕರ್ ರಾವ್ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.

Check Also

ವೆಲ್ಡಿಂಗ್ ಕಾರ್ಮಿಕನ ಮಗ ಲಕ್ ಪತಿ ಆಗಿದ್ದು ಹೇಗೆ ಎಲ್ಲಿ ಗೊತ್ತಾ…??

ಬಾಗಲಕೋಟೆ-ಸಾಧನೆಗೆ ಬಡತನ ಎಂದಿಗೂ ಅಡ್ಡಿಯಾಗದು. ಸತತ ಪ್ರಯತ್ನ, ಪರಿಶ್ರಮವಿದ್ದರೆ ಬೌದ್ಧಿಕ ಮಟ್ಟ ವೃದ್ಧಿಸಿಕೊಂಡು, ಎಂಥವರು ಸಾಧನೆ ಮಾಡಬಹುದು. ಜ್ಞಾನಕ್ಕೆ ಬೆಲೆ …

Leave a Reply

Your email address will not be published. Required fields are marked *