ಬೆಳಗಾವಿ- ರಾಜ್ಯದ ಕನ್ನಡ ಮತ್ತು ಸಂಸ್ಕೃತಿ ಇಲಾಳೆ ಐದು ವರ್ಷದಲ್ಲಿ ರಾಜ್ಯದ ಕನ್ನಡ ಸಂಘಟನೆಗಳಿಗೆ ಒಟ್ಟು ೬೧ ಕೋಟಿ ರೂಗಳನ್ನು ಗಿಪ್ಟ ನೀಡಿರುವ ವಿಷಯವನ್ನು ಮಾಹಿತಿ ಹಕ್ಕು ಕಾರ್ಯಕರ್ತ ಭೀಮಪ್ಪ ಗಡಾದ ಹೊರ ಹಾಕಿದ್ದಾರೆ
ಬೆಳಗಾವಿ ಜಿಲ್ಲೆಯ ಕನ್ನಡ ಸಂಘಟನೆಗಳು ಐದು ವರ್ಷದಲ್ಲಿ ಒಟ್ಟು ೬೫ ಲಕ್ಷ ,೫೫ ಸಾವಿರ ರೂ ಗಳನ್ನು ಪಡೆದುಕೊಂಡಿವೆ
ರಾಜ್ಯದಲ್ಲಿ ಕನ್ನಡ ಬೆಳೆಸಲು ವಿವಿಧ ಸಂಘಟನೆಗಳಿಗೆ ೫ ವರ್ಷದಲ್ಲಿ ೬೦.೫ ಕೋಟಿ ಹಣ ನೀಡಿದ ಸರ್ಕಾರ.
ಕನ್ನಡ ಸಂಸ್ಕೃತಿ ಇಲಾಖೆಯಿಂದ ತೆರಿಗೆ ರೂಪದಲ್ಲಿ ಸಂಗ್ರಹಿಸಿದ ಹಣ ದುರ್ಬಳಕೆ ಆಗಿದೆ ಅನ್ನೋದು ಗಡಾದ ಅವರ ಆರೋಪ
ಬೆಳಗಾವಿಯಲ್ಲಿ ದಾಖಲೆ ಬಿಡುಗಡೆ ಮಾಡಿದ ಮಾಹಿತಿ ಹಕ್ಕು ಹೋರಾಟಗಾರ ಭೀಮಪ್ಪ ಗಡಾದ್. ಪ್ರಭಾವಿ ರಾಜಕಾಣಿಗಳ ಶಿಫಾರಸು ಪತ್ರಕ್ಕೆ ಪಡೆದ ಸಂಸ್ಥೆಗಳಿಗೆ ಹೆಚ್ಚಿನ ಹಣ ಬಿಡುಗಡೆ ಮಾಡಲಾಗಿದರ
ಬೆಂಗಳೂರಿನಲ್ಲಿಯೆ ೪೦೨ ಸಂಘಟನೆಗಳಿಗೆ ೩೩ ಕೋಟಿ ಹಣ ಬಿಡುಗಡೆ.
ಕನ್ನಡ ಹಾಗೂ ಸಂಸ್ಕೃತಿ ಬೆಳೆಸುವ ಹೆಸರಲ್ಲಿ ಸರ್ಕಾರದ ಹಣ ಲೂಟಿ. ಆಗಿದೆ ಎಂದು ಗಡಾದ ಆಕ್ರೋಶ ವ್ಯೆಕ್ತ ಪಡಿಸಿದ್ದಾರೆ
ವಿಧಾನ ಸೌಧ, ಸುವರ್ಣ ದಲ್ಲಿಯೂ ಅನುಷ್ಠಾನಕ್ಕೆ ಭಾರದ ಕನ್ನಡ ಆಡಳಿತ ಭಾಷೆ. ಈ ಬಗ್ಗೆ ವಿಶೇಷ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆಯಲಾಗುವದು ಎಂದು ಗಡಾದ ತಿಳಿಸಿದ್ದಾರೆ
ಬೆಳಗಾವಿ ಸುದ್ದಿ | Belagavi Suddi | Belagavi News ಸಮಸ್ಯಗೆ ಸ್ಪಂದನೆ