Breaking News

ಮೂರು ಜಿಲ್ಲೆ….333 ಜನ 163 ಜಾನುವಾರುಗಳ ಸಾವು ಎಲ್ಲಿ ಹೇಗೆ ಗೊತ್ತಾ…!!!

ಬೆಳಗಾವಿ – ವಿದ್ಯುತ್ ತಂತಿಗಳು ತುಕ್ಕು ಹಿಡಿದಿವೆ ಕಂಬಗಳು ಬಾಗಿದ ತಂತಿಗಳ ಭಾರ ಹೊತ್ತು ಬಾಗಿವೆ ಹೀಗಾಗಿ ಅಲ್ಲಲ್ಲಿ ನಡೆದ ವಿದ್ಯುತ್ ಅವಘಡಗಳಲ್ಲಿ .ಕೇವಲ ಮೂರು ಜಿಲ್ಲೆಗಳ ವ್ಯಾಪ್ತಿಯಲ್ಲಿ ಬರೊಬ್ಬರಿ 333 ಜನರು 163 ಜಾನುವಾರಗಳು ಬಲಿಯಾಗಿರುವ ಆತಂಕಕಾರಿ ಮಾಹಿತಿಯನ್ನು ಮಾಹಿತಿ ಹಕ್ಕು ಹೋರಾಟಗಾರ ಭೀಮಪ್ಪಾ ಗಡಾದ ಬಹಿರಂಗ ಪಡಿಸಿದ್ದಾರೆ

ಈ ಅಂಕಿ ಅಂಶಗಳು ಬೆಳಗಾವಿ,ವಿಜಯಪೂರ,ಬಾಗಲಕೋಟೆ ಜಿಲ್ಲೆಗಳಿಗಳಿಗೆ ಮಾತ್ರ ಸಮಂಧಿಸಿದ್ದು ಈಡೀ ರಾಜ್ಯದ ಮಾಹಿತಿ ಬಹಿರಂಗ ಗೊಂಡರೆ ಹೆಸ್ಕಾಂ ಇಲಾಖೆಯ ಮಾರಣಹೋಮ ಯಮ ಕರ್ಮಕಾಂಡ ಗೊತ್ತಾಗುತ್ತದೆ ಎಂದು ಬೀಮಪ್ಪಾ ಗಡಾದ ಕಳವಳ ವ್ಯೆಕ್ತಪಡಿಸಿದ್ದಾರೆ

ಹೈ ಓಲ್ಟೇಜ್ ಮತ್ತು ವಿವಿಧ ವಿದ್ಯತ್ ಅವಘಡಗಳಲ್ಲಿ ಜನ ಜಾನುವಾರುಗಳು ಬಲಿಯಾಗಿ ಮೂರು ಜಿಲ್ಲೆಗಳಲ್ಲಿ ಸುಮಾರು 243 ಜನರು ಅಂಗವಿಕಲರಾಗಿದ್ದಾರೆ ಇಷ್ಟೊಂದು ಜನರ ಜೀವ ಪಡೆದಿರುವ ಈ ಪ್ರಕರಣವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಬೇಕು ಈ ಕುರಿತು ಬೆಳಗಾವಿಯ ಅಧಿವೇಶನದಲ್ಲಿ ಚರ್ಚೆಯಾಗಿ ಜೀವಹಾನಿ ತಡೆಯಲು ಸರ್ಕಾರ ಪರಿಹಾರದ ಸೂತ್ರ ಕಂಡು ಹಿಡಿಯಬೇಕು ಎಂದು ಗಡಾದ ಒತ್ತಾಯಿಸಿದ್ದಾರೆ

798 ವಿವಿಧ ಬೆಂಕಿ ಪ್ರಕರಣ ಅಂದ್ರೆ ವಿದ್ಯುತ್ ತಂತಿ ಹರಿದು ಬೆಂಕಿ ಅವಘಡ ಸಂಭವಿಸಿ ಸುಮಾರು ಆರು ಸಾವಿರ ಎಕರೆ ಕಬ್ಬು ಬೆಂಕಿಗಾಹುತಿಯಾಗಿದ್ದು ಹೆಸ್ಕಾಂ ಇಲಾಖೆಯ ಈ ಯಮಕರ್ಮ ಕಾಂಡ ರೈತರನ್ನೂ ಸಂಕಷ್ಟದ ಹೊಂಡಕ್ಕೆ ತಳ್ಳಿದೆ ಎಂದು ಗಡಾದ ಆರೋಪಿಸಿದ್ದಾರೆ

ಯಾವುದೇ ಒಬ್ಬ ವ್ಯೆಕ್ತಿಯ ಕೊಲೆ ನಡೆದರೆ ನ್ಯಾಯಾಲಯ ಆತನಿಗೆ ಕನಿಷ್ಟ ಹತ್ತು ವರ್ಷಗಳ ಜೈಲು ಶಿಕ್ಷೆ ನೀಡುತ್ತದೆ 333 ಜನರ ಸಾವಿಗೆ ಕಾರಣವಾಗಿರುವ ಹೆಸ್ಕಾಂ ಅಧಿಕಾರಿಗಳಿಗೂ ಶಿಕ್ಷೆಯಾಗಬೇಕು ವಿದ್ಯತ್ ಅವಘಡದಲ್ಲಿ ಪ್ರಾಣ ಕಳೆದುಕೊಂಡವರ ಎಲ್ಲ ಕುಟುಂಬ ಗಳಿಗೂ ಪರಿಹಾರ ಸಿಗಬೇಕು ಎಂದು ಗಡಾದ ಒತ್ತಾಯಿಸಿದ್ದಾರೆ

333 ಜನ 163 ಜಾನುವಾರು ಗಳು ಸತ್ತಿವೆ 243ಜನ ಅಂಗವಿಕಲರಾಗಿದ್ದಾರೆ ಇದರಲ್ಲಿ ಎಷ್ಟು ಜನರಿಗೆ ಪರಿಹಾರ ಸಿಕ್ಕಿದೆ ಎನ್ನುವ ಮಾಹಿತಿಯನ್ನು ನೀಡಲು ಅಧಿಕಾರಿಗಳು ಹಿಂದೇಟು ಹಾಕುತ್ತಿದ್ದಾರೆ ಎಂದು ಭೀಮಪ್ಪಾ ಗಡಾದ ಆರೋಪಿಸಿದ್ದಾರೆ

Check Also

ವೆಲ್ಡಿಂಗ್ ಕಾರ್ಮಿಕನ ಮಗ ಲಕ್ ಪತಿ ಆಗಿದ್ದು ಹೇಗೆ ಎಲ್ಲಿ ಗೊತ್ತಾ…??

ಬಾಗಲಕೋಟೆ-ಸಾಧನೆಗೆ ಬಡತನ ಎಂದಿಗೂ ಅಡ್ಡಿಯಾಗದು. ಸತತ ಪ್ರಯತ್ನ, ಪರಿಶ್ರಮವಿದ್ದರೆ ಬೌದ್ಧಿಕ ಮಟ್ಟ ವೃದ್ಧಿಸಿಕೊಂಡು, ಎಂಥವರು ಸಾಧನೆ ಮಾಡಬಹುದು. ಜ್ಞಾನಕ್ಕೆ ಬೆಲೆ …

Leave a Reply

Your email address will not be published. Required fields are marked *