ಆರ್ ಬಿ ತಿಮ್ಮಾಪೂರ ಅವರಿಗೆ ಸಚಿವ ಸ್ಥಾನ ಕೊಡಿ

ಬೆಳಗಾವಿ
ಜೆಡಿಎಸ್ – ಕಾಂಗ್ರೆಸ್ ದೋಸ್ತಿ ಸರಕಾರದಲ್ಲಿ ಪರಿಶಿಷ್ಟ ಜಾತಿಯ ಜನಾಂಗಕ್ಕೆ ದಿಕ್ಕು ತಪ್ಪಿಸುವ ಕೆಲಸ‌ ಮಾಡುತ್ತಿದೆ ಎಂದು ಮಾಜಿ ಕೆಪಿಸಿಸಿ ಸದಸ್ಯ ಶಂಕರ ಮುನವಳ್ಳಿ ಆರೋಪಿಸಿದರು.
ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಎಸ್ಸಿ, ಎಸ್ಟಿ ಜನಾಂಗದ ಜನಸಂಖ್ಯೆ ನೋಡಿದರೆ ರಾಜ್ಯದಲ್ಲಿ ಅರ್ಧದಷ್ಟಿದ್ದಾರೆ. ಆದರೆ ಸಿಎಂ ಕುಮಾರಸ್ವಾಮಿ, ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ, ಮಾಜಿ ಸಿಎಂ ದಲಿತ ನಾಯಕರಿಗೆ ಸಚಿವ ಸ್ಥಾನದಿಂದ ವಂಚಿತ ಮಾಡುವ ಹುನ್ನಾರ ನಡೆಸಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಸಿದ್ದರಾಮಯ್ಯನವರಿಗೆ ಎಸ್.ಆರ್.ಪಾಟೀಲ ಅವರಿಗೆ ವಿಧಾನ ಪರಿಷತ್ ಸಭಾಪತಿ ಮಾಡಬೇಕೆನ್ನುವ ಆಸೆಯಿತ್ತು. ಕಾರಣ ಬದಾಮಿಯಲ್ಲಿ ವಿಧಾನಸಭಾ ಚುನಾವಣೆಯ ಋಣ ತೀರಿಸಲು ಸಿದ್ದರಾಮಯ್ಯ ಎಸ್.ಆರ್.ಪಾಟೀಲರಿಗೆ ಅವಕಾಶ ನೀಡುವ ಉದ್ದೇಶದಿಂದ‌ ಬಸರಾಜ್ ಹೊರಟ್ಟಿ ಅವರಿಗೆ ಅನ್ಯಾಯ ಮಾಡಿದ್ದರು. ಆದರೆ ನೂತನ ಪರಿಷತ್ ಸಭಾಪತಿ ಪ್ರತಾಪ್ ಶೆಟ್ಟಿ ಆಯ್ಕೆಯಾದರು. ಇದು‌ ಸಿದ್ದರಾಮಯ್ಯನವರಿಗೆ ತಿಳಿದಿತ್ತು ಎಂದರು.
ದಲಿತರಿಗೆ ಸಮ್ಮಿಶ್ರ ಸರಕಾರದಲ್ಲಿ 9 ಜನ ಸಚಿವ ಸ್ಥಾನ ಸಿಗಬೇಕಿತ್ತು ಆದರೆ ಸಿಗದೇ ಇರುವುದು ದುರ್ದೈವದ ಸಂಗತಿ ಎಂದರು.
ಪರಿಶಿಷ್ಟ ಜಾತಿಯ ನಾಯಕರಾದ ಆರ್.ಬಿ.ತಿಮ್ಮಾಪುರ ಅವರಿಗೆ ಬರುವ ಸಚಿವ ಸಂಪುಟದಲ್ಲಿ ಸ್ಥಾನ ನೀಡಬೇಕು. ಕಾಂಗ್ರೆಸ್ ಹೈಕಮಾಂಡ್ ಪರಿಶಿಷ್ಟ ಜಾತಿಯ ಸಮುದಾಯದವರಿಗೆ ಸಮ್ಮಿಶ್ರ ಸರಕಾರದ ಉಳಿದ ಖಾತೆಯಲ್ಲಿ ಎರಡು ಸಚಿವ ಸ್ಥಾನ ನೀಡಬೇಕು ಎಂದು ಒತ್ತಾಯಿಸಿದರು.
ಸದಾಶಿವ ಆಯೋಗದಿಂದ ಎಷ್ಟು ಜನ‌‌ ಪರಿಶಿಷ್ಟ ಜನಾಂಗದವರಿಗೆ ನ್ಯಾಯ ಕೊಡಿಸಿದೆ. ನಮ್ಮ‌ ಸಮುದಾಯದವರಿಗೆ ಸಚಿವ ಸಂಪುಟದಲ್ಲಿ ಸ್ಥಾನ ಮಾನ ನೀಡದಿದ್ದರೇ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಗೆ ತಕ್ಕ ಪಾಠ ಕಲಿಸಲಾಗುವುದು ಎಂದು ಎಚ್ಚರಿಸಿದರು.
ಬಲಾಢ್ಯರಿಂದ ರಾಜ್ಯದಲ್ಲಿ ರಾಜಕೀಯ ವ್ಯವಸ್ಥೆ ಸಂಪೂರ್ಣ ಹಾಳಾಗುತ್ತಿದೆ. ಇದನ್ನು ಸುಧಾರಣೆ ತರುವ ಅಗತ್ಯವಿದೆ ಎಂದರು

ರಾಹುಲ್ ಗಾಂಧಿ, ಕೆಪಿಸಿಸಿ‌ ಅಧ್ಯಕ್ಷ, ದಿನೇಶ ಗುಂಡುರಾವ್, ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಹಾಗೂ ವಿನಯ ನಾವಲಗಟ್ಟಿ ಅವರ ಮೇಲೆ ಲೀಗಲ್ ನೋಟಿಸ್ ನೀಡಲಾಗುವುದು. ಕಾಂಗ್ರೆಸ್ ಭವನ ನಿರ್ಮಾಣ ಮಾಡಲು ನಾನು 16 ವರೆ ಲಕ್ಷ ರು.‌ ನೀಡಿದ್ದನು ವಾಪಸ್ ನೀಡಿದ್ದಾರೆ. ಇನ್ನೂ 7 ಲಕ್ಷ ಹಣ ನೀಡಿಲ್ಲ. ಆದರೆ ಆ ಭವನ ಇಲ್ಲಿಯವರೆಗೆ ನಿರ್ಮಾಣವಾಗಿಲ್ಲ ಆದ್ದರಿಂದ ನೋಟಿಸ್ ನೀಡಲಿದ್ದೇನೆ ಎಂದರು.

.

Check Also

ಬೆಳಗಾವಿಯ ದಿವ್ಯಾ ಗಾಣಿಗೇರ ರಾಜ್ಯಕ್ಕೆ ಪ್ರಥಮ

ಬೆಂಗಳೂರು-ರಾಷ್ಟ್ರಪಿತ ,ಮಹಾತ್ಮ ಗಾಂಧೀಜಿಯವರ 155 ನೇ ಜಯಂತಿ ಅಂಗವಾಗಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯು ಪ್ರೌಢಶಾಲೆ, ಪದವಿಪೂರ್ವ ಹಾಗೂ …

Leave a Reply

Your email address will not be published. Required fields are marked *

Sahifa Theme License is not validated, Go to the theme options page to validate the license, You need a single license for each domain name.